ಪರಪುರುಷನ ಸಂಬಂಧ ಶಂಕೆ – ಪತ್ನಿ ಹತ್ಯೆ ಮಾಡಿದ ಪತಿ: ಸಾವಿಗೆ ಕಾರಣವಾದ ಟಿಕ್ ಟಾಕ್ ಗೀಳು

Team Newsnap
1 Min Read

ಶ್ರೀರಂಗಪಟ್ಟಣ : ಪತ್ನಿಯು ಇನ್ನೊಂದು ಸಂಬಂಧದ ಶಂಕೆ ಯಿಂದಾಗಿ ಪತ್ನಿಯನ್ನು ಪತಿಯೇ ಹತ್ಯೆಗೈದು ಶವವನ್ನು‌ ಕಾವೇರಿ ನದಿಗೆ ಎಸೆದಿರುವ ಪ್ರಕರಣ ತಾಲ್ಲೂಕಿನ ಅರಕೆರೆ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಮಂಡ್ಯಕೊಪ್ಪಲು ಗ್ರಾಮದ ಪೂಜಾ(26) ಕೊಲೆಯಾಗಿರುವ ಮಹಿಳೆ. ಆಕೆಯ ಪತಿ ಶ್ರೀನಾಥ್(33) ಮನೆಯಲ್ಲಿ ವೇಲ್‌ನಿಂದ ಬಿಗಿದು ಹತ್ಯೆಗೈದು ಬಳಿಕ ಮಹದೇವಪುರ ಬಳಿಯ ಕಾವೇರಿ ನದಿಗೆ ಶವವನ್ನು ಎಸೆದಿದ್ದಾನೆ.

ಘಟನೆಯ ಮೂರು ದಿನಗಳ ಬಳಿಕ ಆತನೇ ಠಾಣೆಗೆ ಆಗಮಿಸಿ ಶರಣಾಗಿದ್ದಾನೆ.

ಮೃತ ಮಹಿಳೆಯ ಶವವು ಕಾವೇರಿ ನದಿಯಲ್ಲಿ ಪತ್ತೆಯಾಗಿದೆ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮುಳುವಾದ ಟಿಕ್‌ಟಾಕ್ :

ಟಿಕ್ ಟಾಕ್ ಗೀಳ ಹೊಂದಿದ್ದ ಕೊಲೆಯಾದ ಪೂಜಾಳಿಗೆ ಅತಿಯಾದ ಮೊಬೈಲ್ ಹುಚ್ಚು ಇತ್ತು ಟಿಕ್‌ಟಾಕ್ ಮೂಲಕ‌ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಳು.

ಜೊತೆಗೆ ಅತಿಯಾದ ಮೊಬೈಲ್ ಕರೆಗಳು ಬರುತ್ತಿದ್ದವು ಎನ್ನಲಾಗಿದೆ. ಇದರಿಂದ ಅನುಮಾನಗಡಿದ್ದ ಪತಿ ಶ್ರೀನಾಥ್ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ ಹತ್ಯೆಗೈದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಶವ ಸಾಗಿಸಲು ಪೂಜಾಳ ತಂದೆಯೇ ಅಳಿಯನಿಗೆ ಸಾಥ್
ಮಗಳ ಶವ ಸಾಗಿಸಲು ಅಳಿಯನಿಗೆ ಸ್ವತಃ ಪೂಜಾಳ ತಂದೆಯೇ ಕೈಜೋಡಿಸಿರುವ ಬಗ್ಗೆಯೂ ಠಾಣೆಯಲ್ಲಿ‌ ತಪ್ಪೊಪ್ಪಿಕೊಳ್ಳಲಾಗಿದೆ.

ಮನೆಯಿಂದ ಶವವನ್ನು ಸಾಗಿಸಲು ಪೂಜಾಳ ತಂದೆ ಶೇಖರ್ ಸಾಥ್ ನೀಡಿದ್ದು, ಬೈಕ್‌ನಲ್ಲಿ‌ ಶವವನ್ನು ಸಾಗಿಸಿ ಶವ ನೀರಿನಲ್ಲಿ ತೇಲದಿರಲಿ ಎಂದು ದೇಹಕ್ಕೆ ಕಲ್ಲು ಕಟ್ಟಿ ಕಾವೇರಿ ನದಿಯಲ್ಲಿ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.ನಟಿ, ಮಾಜಿ ಸಂಸದೆ ‘ಜಯಪ್ರದಾ’ಗೆ 6 ತಿಂಗಳು ಜೈಲು ಶಿಕ್ಷೆ – 5 ಸಾವಿರ ರು ದಂಡ

ಪತಿ ಶ್ರೀನಾಥ್ ಹಾಗೂ ಮಾವ ಶೇಖರ್ ಪೊಲೀಸರ ಅತಿಥಿಯಾಗಿದ್ದಾರೆ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Share This Article
Leave a comment