ಸ್ಫೋಟಕ ತುಂಬಿದ ಡ್ರೋನ್
ಬಳಸಿ ಬಾಗ್ದಾದ್‌ನಲ್ಲಿರುವ ಇರಾಕ್ ಪ್ರಧಾನಿ ಮುಸ್ತಾಫ ಅಲ್-ಕಧಿಮಿ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಇದು ಹತ್ಯೆಗೆ ನಡೆದಿರುವ ಯತ್ನ. ಪ್ರಧಾನಿಗಳು ಸುರಕ್ಷಿತವಾಗಿದ್ದಾರೆ ಎಂದು ಇರಾಕ್ ಮಿಲಿಟರಿ ತಿಳಿಸಿದೆ.
ಕಳೆದ ತಿಂಗಳು ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ಕುರಿತು ಇರಾಕಿನ ರಾಜಧಾನಿಯಲ್ಲಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ ನಂತರ ಕಧಿಮಿ ಅವರ ರಕ್ಷಣೆಯಲ್ಲಿದ್ದ ಹಲವರು ಸದಸ್ಯರು ಗಾಯಗೊಂಡಿದ್ದಾರೆ
ಸರ್ಕಾರಿ ಕಟ್ಟಡಗಳು ಮತ್ತು ವಿದೇಶಿ ರಾಯಭಾರಿ ಕಚೇರಿಗಳನ್ನು ಹೊಂದಿರುವ ಬಾಗ್ದಾದ್ ಕೋಟೆಯ ಹಸಿರು ವಲಯದಲ್ಲಿರುವ ಕಧಿಮಿ ಅವರ ನಿವಾಸದ ಮೇಲಿನ ದಾಳಿಯ ಹೊಣೆಯನ್ನು ಯಾವುದೇ ಗುಂಪು ವಹಿಸಿಕೊಂಡಿಲ್ಲ.
More Stories
ಚಾಂಪಿಯನ್ಸ್ ಟ್ರೋಫಿ: ಕಾಂಗರೂಗಳನ್ನು ಮಣಿಸಿ ಫೈನಲ್ಗೆ ಲಗ್ಗೆ ಇಟ್ಟ ಭಾರತ
ಜೆಟ್ ವಿಮಾನ ಪತನ: 6 ಮಂದಿ ಸಾವು, ಹಲವಾರು ಮನೆಗಳಿಗೆ ಬೆಂಕಿ
ಆಫ್ರಿಕಾ ಮೂಲದ ಡ್ರಗ್ ಪೆಡ್ಲರ್ ಬಂಧನ: 48 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ