ಪಾಕಿಸ್ತಾನ ಜಲಸೈನಿಕರಿಂದ ಒಬ್ಬನ ಹತ್ಯೆ, 6 ಭಾರತೀಯ ಮೀನುಗಾರರ ಅಪಹರಣ

Team Newsnap
1 Min Read

ಗುಜರಾತಿನ ಕಡಲಿಗೆ ಮೀನುಗಾರಿಕೆ ಮಾಡಲು ಮುಂದಾದ ಮೀನುಗಾರರ ಮೇಲೆ ಪಾಕಿಸ್ತಾನದ ಜಲಸೈನಿಕರು ದೌರ್ಜನ್ಯ ಮೆರೆದಿದ್ದಾರೆ.

ಅಂತಾರಾಷ್ಟ್ರೀಯ ಜಲ ಪ್ರದೇಶದಲ್ಲಿ  ಭಾರತೀಯ ಮೀನುಗಾರಿಕಾ ಹಡಗಿನ ಮೇಲೆ ಪಾಕಿಸ್ತಾನಿ ನೇವಿ ಸೈನಿಕರು, ಗುಂಡಿನ ದಾಳಿ ನಡೆಸಿದ್ದು ಒಬ್ಬನನ್ನು ಹತ್ಯೆ ಮಾಡಿದ್ದಾರೆ. ಅಲ್ಲದೇ, 6 ಜನ ಮೀನುಗಾರರನ್ನು ಕಿಡ್ನಾಪ್ ಮಾಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

 

Screenshot 2021 10 19 144206

ಇನ್ನು ಹತ್ಯೆಗೀಡಾದ ಮೀನುಗಾರನನ್ನು ಶ್ರಿಧರ್ ಎಂದು ಗುರ್ತಿಸಲಾಗಿದೆ.

ಗುಜರಾತಿನ ದ್ವಾರಕಾದ ಒಖಾ ಎಂಬಲ್ಲಿ ಭಾರತದ ಜಲ್​ಪರಿ ಹೆಸರಿನ ಮೀನುಗಾರಿಕಾ ಹಡಗಿನ ಮೇಲೆ ಫೈರಿಂಗ್ ಮಾಡಿ ಭಾರತಕ್ಕೆ ಎಚ್ಚರಿಕೆಯನ್ನು ಪಾಕಿಸ್ತಾನ ರವಾನಿಸಿದೆ.

ಈ ಘಟನೆ ಬಗ್ಗೆ ಅಧಿಕೃತವಾಗಿ ಹೆಚ್ಚಿನ ಮಾಹಿತಿಯನ್ನ ಕೇಂದ್ರ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆಗಳು ನೀಡಿಲ್ಲ

Share This Article
Leave a comment