PMGKAY ಯೋಜನೆಯಲ್ಲಿ ಬಡವರಿಗೆ ನೀಡುತ್ತಿದ್ದ ಉಚಿತ ಪಡಿತರ ನವೆಂಬರ್ 30 ಕ್ಕೆ ಲಾಸ್ಟ್

Team Newsnap
1 Min Read

PMGKAY ಯೋಜನೆಯಲ್ಲಿ ಬಡವರಿಗೆ ನೀಡುತ್ತಿದ್ದ ಉಚಿತ ಪಡಿತರವನ್ನು ನವೆಂಬರ್ 30 ಕ್ಕೆ ನಿಲ್ಲಿಸಲಾಗುವುದು.

ದೇಶದ ಆರ್ಥಿಕತೆಯ ಮೇಲಿನ ಒತ್ತಡ ತಗ್ಗಿಸಲು ಕೇಂದ್ರ ಸರ್ಕಾರ ಕೊರೊನಾ ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ನ ಸಮಯದಲ್ಲಿ ಬಡವರಿಗೆ ನೀಡುವ ಪಡಿತರ ಹಾಗೂ ಪರಿಹಾರಗಳನ್ನು ನವೆಂಬರ್ ನಂತರ ಯೋಜನೆಯನ್ನು ಸ್ಥಗಿತಗೊಳಿಸಲು ನಿರ್ಧರಿದೆ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (PMGKAY) ಅಡಿಯಲ್ಲಿ ಬಡವರಿಗೆ ಇನ್ಮುಂದೆ ಉಚಿತ ಪಡಿತರವನ್ನು ನೀಡಲಾಗುವುದಿಲ್ಲ .

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿ ನೀಡಲಾಗುತ್ತಿದ್ದ ಉಚಿತ ಪಡಿತರ ನವೆಂಬರ್ ಬಳಿಕ ಸಿಗುವುದಿಲ್ಲ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಸುಧಾಂಶು ಪಾಂಡೆ ಸ್ಪಷ್ಟವಾಗಿ ಹೇಳಿದ್ದಾರೆ

ದೇಶದ ಆರ್ಥಿಕತೆ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. PMGKAY ಅಡಿಯಲ್ಲಿ ಬಡವರಿಗೆ ಉಚಿತ ಪಡಿತರ ವಿತರಣೆಯನ್ನು ನವೆಂಬರ್ 30 ರವರೆಗೆ ಮಾತ್ರ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.

Share This Article
Leave a comment