ಮದ್ದೂರಿನಲ್ಲಿ ಐಪಿಎಲ್ ಬೆಟ್ಟಿಂಗ್ ಜಗಳ: ಯುವಕನ ಹತ್ಯೆ

Team Newsnap
1 Min Read

ಮದ್ದೂರು : ಐಪಿಎಲ್ ಬೆಟ್ಟಿಂಗ್ ಹಣದ ವಿಚಾರದಲ್ಲಿ ನಡೆದ ಜಗಳ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಮದ್ದೂರಿನ ಹುಲಿಗೆರೆಪುರದಲ್ಲಿ ಶುಕ್ರವಾರ ಜರುಗಿದೆ.

ಚಿಕ್ಕರಸಿನಕೆರೆ ಗ್ರಾಮದ ಪುನೀತ್ (30) ಕೊಲೆಯಾದ ಯುವಕ.

WhatsApp Image 2023 05 26 at 7.11.06 PM

ಪುನೀತ್ ಸ್ನೇಹಿತರ ಜೊತೆಗೆ ಐಪಿಎಲ್ ಬೆಟ್ಟಿಂಗ್ ಕಟ್ಟಿದ್ದ. ಆತ ಗೆದ್ದ ಹಣವನ್ನು ಕೊಡುವಂತೆ ಕೇಳಿದ್ದಾನೆ. ಆಗ ಇಬ್ಬರ ನಡುವೆ ಜಗಳವಾಗಿದೆ.

ಈ ವೇಳೆ ಮರದ ತುಂಡಿನಿಂದ ಪುನೀತ್ ತಲೆಯ ಮೇಲೆ ಸ್ನೇಹಿತ ಹಲ್ಲೆ ನಡೆಸಿದಾಗ ಪುನೀತ್ ಕೊಲೆಯಾಗಿದ್ದಾನೆ.

ಕೂಡಲೆ ಹಲ್ಲೆಗೊಳಗಾದ ಪುನೀತ್‍ನನ್ನು ಕೆ.ಎಂ ದೊಡ್ಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಪುನೀತ್ ಸಾವನ್ನಪ್ಪಿದ್ದಾನೆ.

ಘಟನೆಯ ಸ್ಥಳಕ್ಕೆ ಮಂಡ್ಯ ಎಸ್ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪ್ರಮುಖ ಐದು ಖಾತೆಗಳಿಗೆ ಡಿಸಿಎಂ ಡಿಕೆಶಿ‌ ಪಟ್ಟು- ಬೆಂಬಲಿಗ ಶಾಸಕರ ಹಿತ ಕಾಪಾಡಲು ಬದ್ದ

ಮದ್ದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Share This Article
Leave a comment