December 3, 2024

Newsnap Kannada

The World at your finger tips!

dks

ಪ್ರಮುಖ ಐದು ಖಾತೆಗಳಿಗೆ ಡಿಸಿಎಂ ಡಿಕೆಶಿ‌ ಪಟ್ಟು- ಬೆಂಬಲಿಗ ಶಾಸಕರ ಹಿತ ಕಾಪಾಡಲು ಬದ್ದ

Spread the love

ಬೆಂಗಳೂರು:

ದೆಹಲಿಯಲ್ಲಿ ಸಂಪುಟ ಕಸರತ್ತು ನಡೆಯುತ್ತಿರುವಾಗಲೇ ಪ್ರಮುಖ 5 ಖಾತೆಗಳಿಗೆ ಡಿಸಿಎಂ ಡಿಕೆ ಶಿವಕುಮಾರ್‌ ಪಟ್ಟು ಹಿಡಿದಿದ್ದಾರೆ.

ದೆಹಲಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಜೊತೆ ನಡೆದ ಸಭೆಯಲ್ಲಿ 5 ಖಾತೆಗಳು ನನಗೆ ಬೇಕೇ ಬೇಕು ಎಂದು ಡಿಕೆಶಿ ಹಠ ಹಿಡಿದಿದ್ದಾರೆ.

ಬೆಂಗಳೂರು ಅಭಿವೃದ್ಧಿ, ಜಲಸಂಪನ್ಮೂಲ, ಇಂಧನ, ಗೃಹ, ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್ ಖಾತೆ ನೀಡುವಂತೆ ಡಿಕೆಶಿ ಬೇಡಿಕೆ ಇಟ್ಟಿದ್ದಾರೆ.

ಬೆಂಗಳೂರು ಅಭಿವೃದ್ಧಿ ಹಾಗೂ ಜಲಸಂಪನ್ಮೂಲ ನನಗೆ ಬೇಕು ಡಿಕೆಶಿ ಹೇಳಿದ್ದರೆ , ಬೆಂಬಲಿಗ ಶಾಸಕರಿಗೆ ಗೃಹ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಖಾತೆಯನ್ನು ಕೇಳಿದ್ದಾರೆ.

ಡಿಕೆ ಶಿವಕುಮಾರ್‌ ಸಿಎಂ ಪಟ್ಟ ಕೇಳಿದಾಗ ಹೈಕಮಾಂಡ್‌ ನಿರಾಕರಿಸಿ ಡಿಸಿಎಂ ಪಟ್ಟ ನೀಡಿತ್ತು. ಒಂದೇ ಡಿಸಿಎಂ ಇರಬೇಕು, ಬೇರೆ ಯಾರಿಗೆ ಡಿಸಿಎಂ ಕೊಡಬಾರದು ಎಂದು ಶಿವಕುಮಾರ್‌ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಯಂತೆ ಸಿದ್ದರಾಮಯ್ಯ ಸಂಪುಟದಲ್ಲಿ ಒಂದೇ ಡಿಸಿಎಂ ನೀಡಲಾಗಿದೆ. ಈಗ ಡಿಕೆ ಶಿವಕುಮಾರ್‌ ಹೊಸ ಬೇಡಿಕೆಯನ್ನು ಇರಿಸಿದ ಹಿನ್ನೆಲೆಯಲ್ಲಿ ಯಾರಿಗೆ ಈ ಖಾತೆಗಳನ್ನು ಹಂಚಿಕೆ ಮಾಡಬಹುದು ಎಂಬ ಕುತೂಹಲ ಹೆಚ್ಚಾಗಿದೆ.

Copyright © All rights reserved Newsnap | Newsever by AF themes.
error: Content is protected !!