ಐಪಿಎಲ್ ೨೦೨೦: ಸುರೇಶ್ ರೈನಾ ಸ್ಥಾನ ತುಂಬಬಲ್ಲ ಐವರು ಆಟಗಾರರು

Team Newsnap
2 Min Read

ಐಪಿಎಲ್ ನ ಯಶಸ್ವಿ ತಂಡ ಚೆನೈ ಸೂಪರ್ ಕಿಂಗ್ಸ್ ( ಸಿಎಸ್ ಕೆ) ತಂಡ ೧೩ನೇ ಆವೃತ್ತಿ ಆರಂಭಕ್ಕೂ ಮುನ್ನವೇ ಆಘಾತದ ಮೇಲೆ ಆಘಾತ ಅನುಭವಿಸುತ್ತಿದೆ. ಸಿಎಸ್ ಕೆ ಕೆಲವು ಆಟಗಾರರಿಗೆ ಕೊರೋನಾ ದೃಡಪಟ್ಟಿದ್ದು, ತಂಡದ ಕ್ವಾರಂಟೇನ್ ಅವಧಿ ಸೆ.೧ ರ ವರೆಗೆ ವಿಸ್ತರಿಸಲಾಗಿತ್ತು. ಈ ನಡುವೆ ತಂಡದ ಉಪನಾಯಕ ಸುರೇಶ್ ರೈನಾ ಕೌಟುಂಬಿಕ ಕಾರಣಗಳಿಂದಾಗಿ ಟೂರ್ನಿಯಿಂದ ಹೊರಗುಳಿಯುತ್ತಿದ್ದು, ಸಿಎಸ್ ಕೆ ಹಿನ್ನಡೆ ಅನುಭವಿಸುವಂತೆ ಮಾಡಿದೆ.
ರೈನಾ ಸ್ಥಾನವವನ್ನು ತುಂಬಬಲ್ಲ ಸಾಮರ್ಥ್ಯವುಳ್ಳ ಐವರು ಆಟಗಾರರಿವರು.

.ಹನುಮ ವಿಹಾರಿ
ಭಾರತೀಯ ಟೆಸ್ಟ್ ತಂಡದಲ್ಲಿ ಖಾಯಂ ಆಗಿ ಕಾಣಿಸಿಕೊಳ್ಳುತ್ತಿರುವ ೨೬ ವರ್ಷದ ಹನುಮ ವಿಹಾರಿ ಕಳೆದ ಬಾರಿ ಡೆಲ್ಲಿ ತಂಡದ ಪರ ಆಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುವ ಹನುಮ ಅರೆಕಾಲಿಕ ಸ್ಪಿನ್ನರ್ ಕೂಡ ಆಗಿದ್ದು, ರೈನಾ ಸ್ಥಾನವನ್ನು ತುಂಬಬಲ್ಲ ಸಾಮಥ್ಯವುಳ್ಳ ಆಟಗಾರ.

೨.ಯೂಸುಫ್ ಪಠಾಣ್
೨೦೦೮ ರ ಉದ್ಘಾಟನಾ ಆವೃತ್ತಿಯಿಂದಲೂ ಟೂರ್ನಿಯ ಭಾಗವಾಗಿದ್ದ ‘ಬಿಗ್ ಹಿಟ್ಟರ್’ ಯೂಸೂಫ್ ಪಠಾಣ್ ಈ ಬಾರಿಯ ಹರಾಜಿನಲ್ಲಿ ಅಚ್ಚರಿಯ ರೀತಿಯಲ್ಲಿ ಬಿಕರಿಯಾಗದೆ ಉಳಿದಿದ್ದರು. ರಾಜಸ್ಥಾನ್ ರಾಯಲ್ಸ್, ಕೆಕೆಆರ್, ಎಸ್ ಆರ್ ಎಚ್ ಪರ ಆಡಿರುವ ಅನುಭವವಿರುವ ೩೭ ವರ್ಷದ ಪಠಾಣ್, ೧೭೪ ಐಪಿಎಲ್ ಪಂದ್ಯಗಳಲ್ಲಿ ೩,೨೦೪ ರನ್ ಗಳಿಸಿದ್ದು, ೪೨ ವಿಕೆಟ್ ಗಳನ್ನು ಗಳಿಸಿದ್ದಾರೆ.

೩.ರೋಹನ್ ಕದಂ
ರೋಹನ್ ಕದಂ ಕರ್ನಾಟಕದ ಪ್ರತಿಭಾವಂತ ಕ್ರಿಕೆಟಿಗ. ರಾಷ್ಟೀಯ ಟೂರ್ನಿಗಳಲ್ಲಿ ೨೦ ಟಿ.೨೦ ಪಂದ್ಯಗಳನ್ನಾಡಿರುವ ೨೬ ವರ್ಷದ ಕದಂ, ೪೯.೬೩ ಆ್ಯವರೇಜ್ ನಲ್ಲಿ ೭೯೪ ರನ್ ಕಲೆಹಾಕಿದ್ದಾರೆ.

೪. ಮನೋಜ್ ತಿವಾರಿ
ಪಂಜಾಬ್, ರೈಸಿಂಗ್ ಪುಣೆ ಸುಪರ್ಜೈಂಟ್ಸ್, ಡೆಲ್ಲಿ, ಕೊಲ್ಕತ್ತಾ ಪ್ರಾಂಚೈಸಿಗಳ ಪರ ಆಡಿರುವ ಅನುಭವವಿರುವ ೩೪ ವರ್ಷದ ತಿವಾರಿ ೯೮ ಐಪಿಎಲ್ ಪಂದ್ಯಗಳಲ್ಲಿ ೧೬೯೫ ರನ್ ಗಳಿಸಿದ್ದಾರೆ. ರಣಜಿ, ಅಂತಾರಾಷ್ಟೀಯ ಪಂದ್ಯಗಳಲ್ಲಿಯೂ ಆಡಿದ ಅಪಾರ ಅನುಭವವಿರುವ ತಿವಾರಿ ರೈನಾ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲರು.

೫.ಅಕ್ಷದೀಪ್ ನಾಥ್
ಅಕ್ಷದೀಪ್ ನಾಥ್ ಕಳೆದ ಬಾರಿ ಆರ್ಸಿಬಿ ತಂಡದಲ್ಲಿ ಆಡಿದ್ದರು‌. ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ಉತ್ತಮ ದಾಖಲೆ ಹೊಂದಿರುವ ನಾಥ್, ಒಟ್ಟಾರೆ ೭೫ ಟಿ.೨೦ ಪಂದ್ಯಗಳಲ್ಲಿ ೧೧೨೦ ರನ್ ಕಲೆಹಾಕಿದ್ದಾರೆ. ಈತ ಮಧ್ಯಮ ಕ್ರಮಾಕದಲ್ಲಿ ಸಿಎಸ್ ಕೆ ತಂಡಕ್ಕೆ ಬಲ ತುಂಬಬಲ್ಲರು.

Share This Article
Leave a comment