December 21, 2024

Newsnap Kannada

The World at your finger tips!

WhatsApp Image 2022 05 29 at 8.14.06 PM

IPL 15 ನೇ ಆವೃತ್ತಿಗೆ ಅದ್ದೂರಿ ವರ್ಣ ರಂಜಿತ ತೆರೆ : ಸಾಂಸ್ಕೃತಿಕ ಮೆರಗು

Spread the love

15ನೇ ಆವೃತ್ತಿಯ IPL ಫೈನಲ್​​ ಕದನಕ್ಕೂ ಮುನ್ನ ನಡೆದ ಸಮಾರೋಪ ಸಮಾರಂಭಕ್ಕೆ​ ವೈಭವದ ತೆರೆ ಬಿದ್ದಿದೆ.3 ವರ್ಷಗಳ ಬಳಿಕ ಸಮಾರೋಪ ಸಮಾರಂಭ ನಡೆಸಲಾಗಿದೆ. ಫೈನಲ್​​​ ಹಣಾಹಣಿಯಲ್ಲಿ ರಾಜಸ್ಥಾನ್​ ರಾಯಲ್ಸ್​-ಗುಜರಾತ್​ ಟೈಟನ್ಸ್​​ ಮದಗಜಗಳ ಕಾಳಗಕ್ಕೆ ಈ ಶ್ರೀಮಂತ ವರ್ಣರಂಜಿತ ಕಾರ್ಯಕ್ರಮ ಸಾಕ್ಷಿಯಾಯಿತು.

ಕಾರ್ಯಕ್ರಮ ನಡೆಸಿಕೊಟ್ಟ ಕಾಮೆಂಟೇಟರ್​​ ರವಿಶಾಸ್ತ್ರಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ಐಪಿಎಲ್​ ಅಧ್ಯಕ್ಷ ಬ್ರಿಜೇಶ್​ ಪಟೇಲ್​ ಮತ್ತು ಫೈನಲ್​​ನಲ್ಲಿ ಕಾದಾಡುವ ಉಭಯ ನಾಯಕರನ್ನು ಸಹ ವೇದಿಕೆ ಆಹ್ವಾನಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಬಾಲಿವುಡ್‌ ಖ್ಯಾತ ನಟ ರಣ್‌ವೀರ್‌ ಸಿಂಗ್‌ ತಮ್ಮ ಅದ್ಭುತ ನೃತ್ಯದ ಮೂಲಕ ನಮೋ ಮೈದಾನದಲ್ಲಿ ನೆರೆದಿದ್ದ 1 ಲಕ್ಷಕ್ಕೂ ಅಧಿಕ ಪ್ರೇಕ್ಷಕರನ್ನು ರಂಜಿಸಿದರು. ಅದರಲ್ಲೂ ಕೆಜಿಎಫ್​​​​-2 ವೈಲೆನ್ಸ್​, ವೈಲೆನ್ಸ್​ ಡೈಲಾಗ್​​​​ ಹೇಳಿ, ಧೀರ ಧೀರ ಹಾಡಿಗೆ ಹೆಜ್ಜೆ ಹಾಕಿದ್ದು, ಪ್ರೇಕ್ಷರನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡಿತು.

ಇದನ್ನು ಓದಿ : IPL ಪಂದ್ಯದ ಸಮಾರೋಪದಲ್ಲಿ ಮಂಡ್ಯ – ಶಿವಮೊಗ್ಗ ಕಲಾವಿದರಿಂದ ಪೂಜಾ ಕುಣಿತ, ಡೊಳ್ಳು ಕುಣಿತ

ಭಾರತ 1983ರಲ್ಲಿ ವಿಶ್ವಕಪ್​ ಗೆದ್ದಿದ್ದು, 2007 ಟಿ20 ವಿಶ್ವಕಪ್​​, 2011ರ ಏಕದಿನ ವಿಶ್ವಕಪ್​, ಆಸ್ಟ್ರೇಲಿಯಾ ನೆಲದಲ್ಲಿ ಬಾರ್ಡರ್​​ ಗವಾಸ್ಕರ್​​​ ಎತ್ತಿ ಹಿಡಿದವರೆಗೂ ಟೀಮ್​ ಇಂಡಿಯಾ ಮತ್ತು ಆಟಗಾರರ ಸಾಧನೆಗಳನ್ನು ಈ ಸಾಕ್ಷ್ಯ ಚಿತ್ರದಲ್ಲಿ ತೋರಿಸಲಾಯಿತು.

Copyright © All rights reserved Newsnap | Newsever by AF themes.
error: Content is protected !!