ಅಂತರರಾಷ್ಟ್ರೀಯ ಕಾಫಿ ದಿನ | International Coffee Day 2023

Team Newsnap
4 Min Read

ಅಕ್ಟೋಬರ್ 1 ರಂದು ಅಂತರರಾಷ್ಟ್ರೀಯ ಕಾಫಿ ದಿನವನ್ನು(International Coffee Day) ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಪ್ರಪಂಚದಾದ್ಯಂತ ಲಕ್ಷಾಂತರ ಮಂದಿ ತಮ್ಮ ದಿನವನ್ನು ಕಾಫಿ ಕುಡಿದೆ ಆರಂಭಿಸುತ್ತಾರೆ.

Coffee ಒಂದು ರೀತಿಯ ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಒಂದಾಗಿ ಬೆರೆತು ಹೋಗುತ್ತದೆ. ಬೆಳಗ್ಗೆ ಎದ್ದು ದಿನ ಆರಂಭವಾಗುವುದರಿಂದ ಹಿಡಿದು ತಲೆ ನೋವು, ಬೇಜಾರು, ಮೈಂಡ್​ ಫ್ರೆಶ್ ಮಾಡಿಕೊಳ್ಳಲು,ಇದನ್ನು ಮಿಸ್ ಮಾಡಿಕೊಂಡರೆ ನಮಗೆ ಲಾಸ್ ಎಂಬಂತೆ ಭಾಸವಾಗುತ್ತದೆ.

ಎಂತಹದ್ದೇ Tension ಇದ್ದರೂ Coffee ಕುಡಿದರೆ ಮನಸ್ಸಿಗೂ ಅದೇನೋ ಒಂಥರಾ ತೃಪ್ತಿ. ಕೆಲವರಂತೂ ಎದ್ದ ಕೂಡಲೇ ಬೆಡ್ ಕಾಫಿ ಕುಡಿಯದಿದ್ದರೆ ಅವರ ದಿನವೇ ಆರಂಭವಾಗುವುದಿಲ್ಲ. ಮತ್ತೊಂದಷ್ಟು ಜನ ಊಟ ಮಾಡಿ ಮಲಗುವ ಮೊದಲು ಕಾಫಿ ಕುಡಿದೇ ಮಲಗುತ್ತಾರೆ.ಎಷ್ಟೇ ಒತ್ತಡವಿದ್ದರೂ ಕಾಫಿ ಕುಡಿದರೆ ಸರಿಯಾಗುತ್ತೆ ಎನ್ನುವ ಮನಸ್ಥಿತಿಗೆ ನಾವು ಬಂದಿದ್ದೇವೆ. ಅಷ್ಟರಮಟ್ಟಿಗೆ ಕಾಫಿ ನಮ್ಮ ಜೀವನದಲ್ಲಿ ಬೆರೆತುಹೋಗಿದೆ.

ಒಂದು ಕಪ್ ಕಾಫಿ ಮನಸ್ಸನ್ನು ರಿಲಾಕ್ಸ್ ಮೂಡಿಗೆ ತರುತ್ತೆ. ನಿಯಮಿತವಾದ ಕಾಫಿ ಸೇವನೆಯು ಸಂತೋಷ, ದಯೆ, ವಾತ್ಸಲ್ಯ, ಸ್ನೇಹ, ಶಾಂತಿ ಮತ್ತು ಹೆಚ್ಚಿನ ಸಂತೋಷದಂತಹ ಸಕಾರಾತ್ಮಕ ಭಾವನೆಗಳಿಗೆ ಸ್ಪಂದಿಸುತ್ತದೆ ಎಂದು ಹಲವು ಸಂಶೋಧನೆಗಳಲ್ಲಿ ತಿಳಿದುಬಂದಿದೆ.

coffee

ಅತಿಯಾದ ಮಾನಸಿಕ ಒತ್ತಡ ಇದ್ದರೆ ಅದನ್ನು ಕ್ಷಣಮಾತ್ರದಲ್ಲಿ ನಿವಾರಣೆ ಮಾಡುತ್ತದೆ ಒಂದು ಕಪ್ ಬಿಸಿ ಕಾಫಿ. ತನ್ನಲ್ಲಿರುವ ಕೆಫಿನ್ ಅಂಶದಿಂದ ರಕ್ತ ಸಂಚಾರದಲ್ಲಿ ಉತ್ತಮ ಪ್ರಭಾವವನ್ನು ಉಂಟುಮಾಡಿ ಮೆದುಳಿನ ಭಾಗಕ್ಕೆ ಸರಿಯಾದ ಪ್ರಮಾಣದಲ್ಲಿ ರಕ್ತಸಂಚಾರ ಆಗುವಂತೆ ನೋಡಿಕೊಂಡು ಅತ್ಯುತ್ತಮವಾದ ರೀತಿಯಲ್ಲಿ
ಮೆದುಳು ಕೆಲಸ ಮಾಡುವಂತೆ ಮಾಡುತ್ತದೆ. ಇದರಿಂದ ಇಡೀ ದೇಹಕ್ಕೆ ಮೆದುಳು ಒಳ್ಳೆಯ ಶಕ್ತಿ ಮತ್ತು ಚೈತನ್ಯ ಉಂಟು ಮಾಡುವಂತಹ ಸಂಕೇತಗಳನ್ನು ಕಳುಹಿಸಲು ಅನುಕೂಲವಾಗುತ್ತದೆ. ಇದರಿಂದ ಇಡೀ ದಿನ ತಾಜಾತನದಿಂದ ತುಂಬಿರುವಂತೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ.

ಮೆದುಳಿನ ನರಮಂಡಲಕ್ಕೆ ಸಂಬಂಧಪಟ್ಟಂತೆ ಇರುವ ಆರೋಗ್ಯದ ಅಸ್ವಸ್ಥತೆಯನ್ನು ಪಾರ್ಕಿನ್ಸನ್ ಕಾಯಿಲೆ ಎಂದು ಕರೆಯುತ್ತಾರೆ. ಕಾಫಿಯಲ್ಲಿ ಕಂಡುಬರುವ ಕೆಫಿನ್ ಅಂಶ ಮೆದುಳಿನ ಕಾರ್ಯಚಟುವಟಿಕೆಯ ಮೇಲೆ ನೇರವಾದ ಪ್ರಭಾವ ಬೀರಿ ಇಂತಹ ಒಂದು ಸಮಸ್ಯೆಯ ರೋಗಲಕ್ಷಣಗಳನ್ನು ಸುಲಭವಾಗಿ ಹೋಗಲಾಡಿಸುತ್ತದೆ.
ಅಧ್ಯಯನಗಳು ಹೇಳುವ ಹಾಗೆ ಮಿತ ಪ್ರಮಾಣದಲ್ಲಿ ಕಾಫಿ ಸೇವನೆ ಮಾಡುವ ಅಭ್ಯಾಸ ಇದ್ದವರಿಗೆ ಪಾರ್ಕಿನ್ಸನ್ ಕಾಯಿಲೆಯನ್ನು ಹೊಂದುವ ಸಾಧ್ಯತೆ ಶೇಕಡ 30% ಕಡಿಮೆಯಾಗುತ್ತದೆ.

ಬೆಳಗ್ಗಿನ ಕಾಫಿ ಹಸಿವನ್ನು ನಿಯಂತ್ರಿಸುವಷ್ಟು ಸಮರ್ಥಶಾಲಿಯಾಗಿದೆ, ಹಾಗಾಗಿಯೇ ಕಾಫಿ ಹಸಿವಿನ ತೀವ್ರತೆಯನ್ನು ತಗ್ಗಿಸುತ್ತದೆ ಎಂಬುದು ತಿಳಿದು ಬಂದಿದೆ. ಶಕ್ತಿಯನ್ನು ಸುಧಾರಿಸುವ ಹಾಗೂ ಮೆದುಳಿನಿಂದ ದೇಹಕ್ಕೆ ಸಂಕೇತಗಳನ್ನು ವೇಗಗೊಳಿಸುವ ಮಹಾನ್ ಉತ್ತೇಜಕ ಎಂದೇ ಕಾಫಿಯನ್ನು ಮೆಚ್ಚಿಕೊಂಡವರಿದ್ದಾರೆ. ಕಾಫಿಯಲ್ಲಿರುವ ಕೆಫೇನ್ ಹಸಿವನ್ನು ನಿಗ್ರಹಿಸುವ ಮೂಲಕ ತೂಕ ಕಳೆದುಕೊಳ್ಳಲು ಸಹಕಾರಿಯಾಗಿದೆ.

ಭಾರತಕ್ಕೆ ಕಾಫಿ ತಂದವರು ಯಾರು?

Bababudangiri kannada info

ಕಾಫಿಯನ್ನು ಭಾರತಕ್ಕೆ ತಂದವರು ನಮ್ಮದೇ ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ ಖ್ಯಾತಿಯ ಬಾಬಾಬುಡನ್. ಇವರು ಮೆಕ್ಕಾಯಾತ್ರೆಗೆಂದು ಹೋದಾಗ ಯೆಮೆನ್‌ನಿಂದ ತಮ್ಮೊಂದಿಗೆ ಏಳು ಕಾಫಿಬೀಜಗಳನ್ನು ಚಿಕ್ಕಮಗಳೂರಿಗೆ ತಂದರು. ಅಲ್ಲಿಂದ ಆ ಏಳು ಬೀಜಗಳಿಂದ ಚಿಕ್ಕಮಗಳೂರು ಕಾಫಿ ಬೆಳೆಗೆಂದೇ ಖ್ಯಾತಿ ಪಡೆಯುವಂತಾಗಿದೆ.

1840ರ ಸುಮಾರಿನಲ್ಲಿ ಕಾಫಿ ಒಂದು ಆರ್ಥಿಕ ಬೆಳೆಯಾಗಿ ಶುರುವಾಯಿತು. ಬ್ರಿಟಿಷರು ದಕ್ಷಿಣ ಭಾರತದ ಬೆಟ್ಟಗಳಲ್ಲಿ ಅರೇಬಿಕಾ ಕಾಫಿ ಪ್ಲಾಂಟೇಶನ್‌ಗಳನ್ನು ಪ್ರಾರಂಭಿಸಿದರು. ಎತ್ತರ ಮತ್ತು ಇಳಿಜಾರು, ಹವಾಮಾನ, ನೆರಳು ಬಿಸಿಲಿನ ವಾತಾವರಣ, ಒಳ್ಳೆಯ ಮಳೆ, ಮಣ್ಣಿನ ಗುಣ ಇವೆಲ್ಲವೂ ಪೂರಕವಾಗಿ ಇದ್ದದ್ದರಿಂದ ಕಾಫಿಬೆಳೆ ಇಲ್ಲಿ ಮುಖ್ಯ ಆರ್ಥಿಕ ಬೆಳೆಯಾಗಿ ಬೆಳೆದು ಇಂದು ಜಗತ್ತಿನಲ್ಲಿ ಭಾರತ ಆರನೆಯ ಅತಿದೊಡ್ಡ ಕಾಫಿ ಉತ್ಪಾದನೆ ಮಾಡುವ ದೇಶವಾಗಿ ಬೆಳೆದಿದೆ.

ಭಾರತ ಪ್ರತಿವರ್ಷ ಸುಮಾರು 3,20,000 ಮೆಗಾಟನ್ ಕಾಫಿಯನ್ನು ಉತ್ಪಾದಿಸುತ್ತಿದ್ದು ಕರ್ನಾಟಕ, ಕೇರಳ ಮತ್ತು ತಮಿಳುನಾಡು ಪ್ರಮುಖ ಕಾಫಿ ಉತ್ಪಾದನಾ ರಾಜ್ಯಗಳಾಗಿವೆ. ಹಾಗೆ ಬೆಳೆದದ್ದರಲ್ಲಿ ಸುಮಾರು 70% ಕಾಫಿಯನ್ನು ಭಾರತ ರಫ್ತು ಮಾಡುತ್ತದೆ. ಭಾರತದಲ್ಲಿ ಕಾಫಿಯನ್ನು ನೆರಳಿನಲ್ಲಿ ಬೆಳೆಸಲಾಗುತ್ತಿದ್ದು ಸಿಲ್ವರ್ ಓಕ್ ಮೊದಲಾಗಿ ಅನೇಕ ಎತ್ತರದ ಮರಗಳು ಈ ನೆರಳನ್ನು ಒದಗಿಸುತ್ತದೆ.

coffee

ಕಾಫಿ ಬಗ್ಗೆ ತಿಳಿದುಕೊಳ್ಳಲು ಆಸಕ್ತಿದಾಯಕ ಸಂಗತಿಗಳು

  • ಕಾಫಿಯನ್ನು ಅಂತಹ ದೊಡ್ಡ ಪ್ರಮಾಣದಲ್ಲಿ ಸೇವಿಸಲಾಗುತ್ತದೆ, ಇದು ವಿಶ್ವದ 2 ನೇ ಅತಿದೊಡ್ಡ ವ್ಯಾಪಾರದ ಸರಕು
  • ಕಾಫಿ ಒಂದು ಹಣ್ಣು
  • ಅತ್ಯಂತ ದುಬಾರಿ ಕಾಫಿಯನ್ನು ಬೆಕ್ಕಿನ ಮಲದಿಂದ ತಯಾರಿಸಲಾಗುತ್ತದೆ
  • ಕಾಫಿಯಲ್ಲಿ ಎರಡು ವಿಧಗಳಿವೆ
    ಅರೇಬಿಕಾ ಕಾಫಿಯನ್ನು ಮೂಲತಃ ಅರೇಬಿಯನ್ ಪೆನಿನ್ಸುಲಾದಲ್ಲಿ ಬೆಳೆಸಲಾಗುತ್ತಿತ್ತು, ಆದ್ದರಿಂದ ಈ ಹೆಸರು ಬಂದಿದೆ. ರೋಬಸ್ಟಾ ಕಾಫಿಯು ಹೆಚ್ಚು ಗಟ್ಟಿಮುಟ್ಟಾದ ಸಸ್ಯವಾಗಿದೆ ಆದರೆ ಕೆಫೀನ್ ದ್ವಿಗುಣವನ್ನು ಹೊಂದಿರುತ್ತದೆ.

ಕರ್ನಾಟಕದಿಂದ ಕಾಫಿ ಬ್ರಾಂಡ್‌ಗಳು

  • ಲೆವಿಸ್ಟಾ ಕಾಫಿ.
  • ಚಿಕ್ಕಮಗಳೂರು ಕಾಫಿ ವರ್ಕ್ಸ್
  • ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್. (CCD).
  • ಕೋಥಾಸ್ ಕಾಫಿ.
  • ಪಾಂಡುರಂಗ ಕಾಫಿ ವರ್ಕ್ಸ್
  • ಬೇಯರ್ ಕಾಫಿ.

International Coffee Day International Coffee Day International Coffee Day IN kannada ಅಂತರರಾಷ್ಟ್ರೀಯ ಕಾಫಿ ದಿನ | International Coffee Day 2023| about coffee | Intresting fact about coffee in kannada | tastes of coffee in kannada. Cafe Coffee Day

Share This Article
Leave a comment