ಸಹಜ ಸ್ಥಿತಿಯತ್ತ ಭಾರತದ ಆರ್ಥಿಕತೆ

Team Newsnap
1 Min Read

ಲಾಕ್‌ಡೌನ್ ತೆರವಿನ ನಂತರ ಭಾರತದಲ್ಲಿ ಕೈಗಾರಿಕೋದ್ಯಮ ಹಾಗೂ ಇತರೆ ಕ್ಷೇತ್ರಗಳು ಚೇತರಿಸಿಕೊಳ್ಳುತ್ತಿದೆಯಾದರೂ ನಿರುದ್ಯೋಗ ಮಾತ್ರ ಎಲ್ಲೆಡೆ ತಾಂಡವವಾಡುತ್ತಿದೆ

ಕೊರೋನಾ ವೈರಸ್ ಸಂಬಂಧ ಭಾರತ ಸರ್ಕಾರ ಲಾಕ್‌ಡೌನ್ ವಿಧಿಸಿದ್ದಾಗ ಆರ್ಥಿಕ ಹಾಗೂ ಕೈಗಾರಿಕೋದ್ಯಮ ಕ್ಷೇತ್ರಗಳು ಗಣನೀಯ ಪ್ರಮಾಣದ ಕುಸಿತ ಕಂಡಿತ್ತು. ಆಗ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಿ ಆರ್ಥಿಕ ಕ್ಷೇತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತೇಜನ ನೀಡಿದ್ದವು. ನಂತರ‌ ಆರ್ಥಿಕ ಕ್ಷೇತ್ರಗಳು ಉಸಿರಾಡುವಂತಾಗಿತ್ತು. ಸಿಸ್ಟರ್ ಸರ್ವೇ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯು, ಪ್ರಸ್ತುತ ಎಲ್ಲ ಆರ್ಥಿಕ ಕ್ಷೇತ್ರಗಳು ಚೇತರಿಕೆ ಕಾಣುತ್ತಿದ್ದು ಇದು ಎಂಟು ವರ್ಷಗಳಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಇಡುತ್ತಿರುವ ದೊಡ್ಡ ಹೆಜ್ಜೆ. ಏಷ್ಯಾದ ಮೂರನೇ ಅತೀ ದೊಡ್ಡ ಆರ್ಥಿಕ ವ್ಯವಸ್ಥೆ ಮತ್ತೆ ಸಹಜ ಸ್ಥಿತಿಗೆ ಬರುತ್ತಿದೆ ಎಂದು ಹೇಳಿದೆ.

ಪ್ರಸ್ತುತ ನಿಕ್ಕಿ/ಐಹೆಚ್‌ಎಸ್ ಮಾರ್ಕ್‌ಇಟ್ ಸೇವೆಗಳ ಖರೀದಿದಾರರ ವ್ಯಾಪಾರ ವ್ಯಾಪಾರ ಸೂಚ್ಯಂಕ ಆಗಸ್ಟ್‌ನಲ್ಲಿ 41.8 ನಿಂದ ಸೆಪ್ಟೆಂಬರ್‌ನಲ್ಲಿ 49.8ಗೆ ಏರಿಕೆ ತೋರಿಸುತ್ತಿದೆ. ಈ ಸೂಚ್ಯಂಕವು 50ರ ಆಸುಪಾಸಿನಲ್ಲಿರುವುದು ಆರ್ಥಿಕ ಕ್ಷೇತ್ರಗಳು ಅಭಿವೃದ್ಧಿಗೊಳ್ಳುತ್ತಿರುವ ಸೂಚ್ಯಂಕ ಇದಾಗಿದೆ.

‘ಲಾಕ್‌ಡೌನ್‌ನ ನಿರ್ಬಂಧ ಗಳಿಂದ ಭಾರತದ ಸೇವಾ ವಲಯವು ಆರ್ಥಿಕ ಚಟುವಟಿಕೆಗಳ ಚೇತರಿಕೆಗೆ ಸಹಾಯ ಮಾಡಿತು’ ಎಂದು ಐಹೆಚ್‌ಎಸ್‌ನ ಅರ್ಥಶಾಸ್ತ್ರ ಸಹಾಯಕ ನಿರ್ದೇಶಕ ಪೊಲ್ಯಾನ್ನಾ ಡಿ ಲಾಮಾ ಹೇಳುತ್ತಾರೆ‌.

ಸಧ್ಯದಲ್ಲಿರುವ ಪರಿಸ್ಥಿತಿಯಿಂದ ಖಾಲಿ ಇರುವ ಹುದ್ದೆಗಳಿಗೆ ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಉದ್ಯೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಾಣಬಹುದಾಗಿದೆ ಎನ್ನುತ್ತದೆ ಸಮೀಕ್ಷೆ.

Share This Article
Leave a comment