ಆಸ್ಟ್ರೇಲಿಯಾ ಪಂದ್ಯಕ್ಕೆ – ಭಾರತದ ತಂಡ ಪ್ರಕಟ

Team Newsnap
1 Min Read

ಬಿಸಿಸಿಐ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಪಂದ್ಯಗಳಿಗೆ ತಂಡಗಳನ್ನು ಘೋಷಿಸಿದೆ. ಲಾಕ್‌ಡೌನ್ ತೆರವಿನ‌ ನಂತರ ಎರಡನೇ ಅಂತರಾಷ್ಟ್ರೀಯ ಪ್ರವಾಸ ಇದಾಗಿದೆ. ಈಗಾಗಲೇ ಐಪಿಲ್‌ಗೋಸ್ಕರ ಭಾರತ ಸೇರಿದಂತೆ ಪ್ರಪಂಚದ ಅನೇಕ ತಂಡಗಳು ಈಗ ದುಬೈನಲ್ಲಿ ಬೀಡುಬಿಟ್ಟಿವೆ.

ಸೋಮವಾರ ವಿಡಿಯೋ-ಕಾನ್ಫರೆನ್ಸ್ ಮೂಲಕ ಸಭೆ ಸೇರಿದ್ದ ಬಿಸಿಸಿಐ ಭಾರತ ಆಸ್ಟ್ರೇಲಿಯಾ ವಿರುದ್ಧ ಆಡಲಿರುವ ಮೂರು ಟಿ 20, ಮೂರು ಏಕದಿನ ಮತ್ತು ನಾಲ್ಕು ಟೆಸ್ಟ್ ಪಂದ್ಯಗಳ ತಂಡಗಳನ್ನು ಘೋಷಿಸಿತು.

ಟೆಸ್ಟ್ ಪಂದ್ಯದ ತಂಡ
ವಿರಾಟ್ ಕೊಹ್ಲಿ (ಕ್ಯಾಪ್ಟನ್), ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ, ಕೆ.ಎಲ್. ಕೀಪರ್), ಜಸ್ಪ್ರಿತ್ ಬುಮ್ರಾ, ಮೊಹಮ್ಮದ್. ಶಮಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಮೊಹಮ್ಮದ್. ಸಿರಾಜ್.

ಭಾರತದ ಟಿ-20 ಕ್ರಕೆಟ್ ತಂಡ
ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ಮಾಯಾಂಕ್ ಅಗರ್ವಾಲ್, ಕೆ.ಎಲ್. ರಾಹುಲ್ (ಉಪನಾಯಕ ಮತ್ತು ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್. ಶಮಿ, ನವದೀಪ್ ಸೈನಿ, ದೀಪಕ್ ಚಹರ್, ವರುಣ್ ಚಕ್ರವರ್ತಿ.

ಭಾರತದ ಏಕದಿನ‌ ಕ್ರಿಕೆಟ್ ತಂಡ
ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ಶುಬ್ಮನ್ ಗಿಲ್, ಕೆ.ಎಲ್. ಜಸ್ಪ್ರಿತ್ ಬುಮ್ರಾ, ಮೊಹಮ್ಮದ್. ಶಮಿ, ನವದೀಪ್ ಸೈನಿ, ಶಾರ್ದುಲ್ ಠಾಕೂರ್.

ಈ ಎಲ್ಲ ಆಟಗಾರರ ಜೊತೆ ಬೌಲರ್‌ಗಳಾದ ಕಮಲೇಶ್ ನಾಗರ್ಕೋಟಿ, ಕಾರ್ತಿಕ್ ತ್ಯಾಗಿ, ಇಶಾನ್ ಪೊರೆಲ್ ಮತ್ತು ಟಿ.ನಟರಾಜನ್ ಅವರನ್ನು ಹೆಚ್ಚುವರಿ ಬೌಲರ್‌ಗಳನ್ನು ಅನಿಶ್ಚಿತತೆಯೊಂದಿಗೆ ಪ್ರಯಾಣಿಸಲು ಹೆಸರಿಸಲಾಗಿದೆ.

ಕ್ರಿಕೆಟ್ ಪಂದ್ಯಗಳ ದಿನಾಂಕವನ್ನು ಇನ್ನೂ ನಿಗದಿ ಮಾಡದೇ ಇದ್ದರೂ ಟೆಸ್ಟ್ ಸರಣಿಯು ಬ್ರಿಸ್ಬೇನ್, ಅಡಿಲೇಡ್, ಮೆಲ್ಬೋರ್ನ್ ಮತ್ತು ಸಿಡ್ನಿ, ಏಕದಿನ ಹಾಗೂ ಟಿ-20 ಪಂದ್ಯಗಳನ್ನು ಸಿಡ್ನಿ ಮತ್ತು ಕ್ಯಾನ್‌ಬೆರಾದಲ್ಲಿ‌ ಆಯೋಜಿಸುವ ಚಿಂತನೆ ಸದ್ಯಕ್ಕೆ ನಡೆದಿದೆ.

Share This Article
Leave a comment