ಸಚಿವ , ಶಾಸಕರ ಸಂಬಳ ಹೆಚ್ಚಳ : ಪ್ರತಿ ಐದು ವರ್ಷಕ್ಕೊಮ್ಮೆ ಹೆಚ್ಚಳಕ್ಕೆ ಬಿಲ್ ಮಂಡನೆ

Team Newsnap
2 Min Read

ಸಂಬಳ ಹೆಚ್ಚು ಮಾಡುವ ವಿಷಯದಲ್ಲಿ ಸಚಿವರು, ಶಾಸಕರ ಒಗ್ಗಟ್ಟು ಜಾಸ್ತಿ . ಕಷ್ಟದ ಸಮಯದಲ್ಲೂ ಶಾಸಕರ ಸಂಬಳ ಗಣನೀಯ ಹೆಚ್ಚಳ ಮಾಡಿಕೊಂಡಿದ್ದಾರೆ

ಸಚಿವ ಮಾಧುಸ್ವಾಮಿ ಮಂಗಳವಾರ ವಿಧಾನ ಮಂಡಲದವರ ಸಂಬಳ ಹಾಗೂ ಭತ್ಯೆ ತಿದ್ದುಪಡಿ ವಿದೇಯಕವನ್ನು ಮಂಡಿಸಿದ್ದಾರೆ.

ಶಾಸಕರ ಸಂಬಳವನ್ನೂ 2015 ರಿಂದ ಹೆಚ್ಚಿಸಿರಲಿಲ್ಲಾ, ಹೀಗಾಗಿ ಈ ಬಾರಿ ಶಾಸಕರ ಸಂಬಳ ಹೆಚ್ಚಿಸಲು ವಿಧೇಯಕ ರೂಪಿಸಲಾಗಿದೆ ಎಂದಿದ್ದಾರೆ. ಇನ್ನು ಮುಂದೆ ಪ್ರತಿ ಐದು ವರ್ಷಕ್ಕೊಮ್ಮೆ ಸ್ವಾಭಾವಿಕವಾಗಿ ಸಂಬಳ ಹೆಚ್ಚಾಗುತ್ತದೆ ಎಂದು ಮಾಹಿತಿ ಕೂಡ ನೀಡಿದ್ದಾರೆ.

ಈ ವಿಧೇಯಕಗಳಲ್ಲಿ ಶಾಸಕರ ಸಂಬಳ, ಮಂತ್ರಿಗಳ ಸಂಬಳ, ಆತಿಥ್ಯ ಭತ್ಯೆ, ಮಂತ್ರಿಗಳ ಮನೆ ಬಾಡಿಗೆ, ಮನೆ ನಿರ್ವಹಣೆ ವೆಚ್ಚ, ವಾಹನ ಸೌಲಭ್ಯಕ್ಕೆ ಹಾಗೂ ಪ್ರಯಾಣಕ್ಕೆ ಇದ್ದ ಎಲ್ಲಾ ವೆಚ್ಚಗಳನ್ನು ಈ ವಿಧೇಯಕದ ಮೂಲಕ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಭಾಧ್ಯಕ್ಷರು/ ಉಪಸಭಾಧ್ಯಕ್ಷರು :

ಸಂಬಳ : 50,000 ದಿಂದ 75,000 ರು ಕ್ಕೆ ಹೆಚ್ಚಳ

ಆತಿಥ್ಯ ವೇತನ ವಾರ್ಷಿಕ : 3,00,000 ದಿಂದ 4,00,000 ರು ಕ್ಕೆ ಹೆಚ್ಚಳ

ಮನೆ ಬಾಡಿಗೆ : 80,000 ದಿಂದ 1,60,000 ರು ಕ್ಕೆ ಹೆಚ್ಚಳ

ಇಂಧನ : 1000 ಲೀಟರ್ ರಿಂದ 2000 ಲೀಟರ್ ಗೆ ಹೆಚ್ಚಳ

ಪ್ರಯಾಣ ಭತ್ಯೆ : ಪ್ರತಿ ಕಿಲೋಮೀಟರ್ ಗೆ 30 ರಿಂದ 40 ರು ಕ್ಕೆ ಹೆಚ್ಚಳ

ದಿನ ಭತ್ಯೆ (ಪ್ರಯಾಣ) : ದಿನಕ್ಕೆ 2000 ದಿಂದ 3000 ರು

ಹೊರ ರಾಜ್ಯ ಪ್ರವಾಸ :
ದಿನಕ್ಕೆ ₹2500 + 5000 ದಿಂದ 3000 + 7000 ರು ಕ್ಕೆ ಹೆಚ್ಚಳ ಮಾಡಲಾಗಿದೆ.

ವಿಪಕ್ಷ ನಾಯಕರ ಸಂಬಳ :

ಸಂಬಳ : 40,000 ದಿಂದ 60,000 ರು ಕ್ಕೆ ಹೆಚ್ಚಳ
ಆತಿಥ್ಯ ವೇತನ ವಾರ್ಷಿಕ : 2,00,000 ದಿಂದ 2,50,000ರು ಕ್ಕೆ ಹೆಚ್ಚಳ

ಇಂಧನ :
1000 ಲೀಟರ್ ರಿಂದ 2000 ಲೀಟರ್ ಗೆ ಹೆಚ್ಚಳ

ಪ್ರಯಾಣ ಭತ್ಯೆ : ಪ್ರತಿ ಕಿಲೋಮೀಟರ್ 30 ಕ್ಕೆ ಹೆಚ್ಚಳ

ದಿನ ಭತ್ಯೆ (ಪ್ರಯಾಣ):
ದಿನಕ್ಕೆ 2000 ದಿಂದ 3000ರು ಕ್ಕೆ ಹೆಚ್ಚಳ

ಹೊರ ರಾಜ್ಯ ಪ್ರವಾಸ : 5000 ದಿಂದ 7000 ರು ಕ್ಕೆ ಹೆಚ್ಚಳ ಮಾಡಲಾಗಿದೆ.

ಶಾಸಕರ ಸಂಬಳ:

ಸಂಬಳ: ₹20,000 ದಿಂದ ₹ 40,000ರು ಕ್ಕೆ ಹೆಚ್ಚಳ

ಕ್ಷೇತ್ರದ ಭತ್ಯೆ : 40,000 ದಿಂದ 60,000 ರು ಕ್ಕೆ ಹೆಚ್ಚಳ

ಆತಿಥ್ಯ ವೇತನ (ವಾರ್ಷಿಕ) : ₹2,00,000 ದಿಂದ ₹ 2,50,000 ಕ್ಕೆ ಹೆಚ್ಚಳ

ಇಂಧನ : 1000 ಲೀಟರ್ ರಿಂದ 2000 ಲೀಟರ್ ಗೆ ಹೆಚ್ಚಳ

ಪ್ರಯಾಣ ಭತ್ಯೆ : ಪ್ರತಿ ಕಿಲೋಮೀಟರ್ 25 ರಿಂದ 30 ರು ಗೆ ಹೆಚ್ಚಳ

ದಿನ ಭತ್ಯೆ (ಪ್ರಯಾಣ): ದಿನಕ್ಕೆ 2000 ದಿಂದ 2500ರು ಕ್ಕೆ ಹೆಚ್ಚಳ

ಹೊರ ರಾಜ್ಯ ಪ್ರವಾಸ : 5000 ದಿಂದ 7000 ರು ಕ್ಕೆ ಹೆಚ್ಚಳ ಮಾಡಲಾಗಿದೆ.

ಉಳಿದಂತೆ ದೂರವಾಣಿ ವೆಚ್ಚ ಯಥಾಸ್ಥಿತಿ ತಿಂಗಳಿಗೆ20,000 ಕ್ಕೆ ಕಾಯ್ದಿರಿಸಲಾಗಿದೆ.

ಆಪ್ತಸಹಾಯಕನಿಗೆ ಮತ್ತು ರೂಮ್ ಬಾಯ್ ಸೇರಿ ತಿಂಗಳಿಗೆ 10,000 ರಿಂದ 20,000 ಕ್ಕೆ ಹೆಚ್ಚಳ ಮಾಡಲಾಗಿದೆ.

Share This Article
Leave a comment