ರಶ್ಮಿಕಾಳನ್ನು ಮದುವೆ ನಾನು ಆಗ್ತಿಲ್ಲ.. ನಾನ್​ಸೆನ್ಸ್..! ದೇವರಕೊಂಡ

Team Newsnap
1 Min Read

ಎಂದಿನಂತೆ ಇದು ನಾನ್​​ಸೆನ್ಸ್ ನಮ್ಗೆ ಇಂತಹ ಪ್ರೀತಿಯ ಸುದ್ದಿಗಳು ಬೇಕಾಗಿಲ್ಲ ಎಂದು ಟ್ವಿಟರ್​ನಲ್ಲಿ ವಿಜಯ್ ದೇವರಕೊಂಡ ಕಿಡಿಕಾರಿದ್ದಾರೆ.

ರಶ್ಮಿಕಾ ಜೊತೆ ಮದುವೆ ವಿಷಯ ವೈರಲ್ ಆಗ್ತಿದ್ದಂತೆ ಲೇಟ್​ ಆಗಿ ಪ್ರತಿಕ್ರಿಯಿಸಿರುವ ವಿಜಯ್ ದೇವರಕೊಂಡ, ತಮ್ಮ ಮದುವೆ ವಿಚಾರವನ್ನು ತಳ್ಳಿ ಹಾಕಿದ್ದಾರೆ.

ಮುಂದಿನ ವರ್ಷ ರಶ್ಮಿಕಾ ಮತ್ತು ದೇವರಕೊಂಡ ಮದುವೆ ಆಗ್ತಾರೆ ಎನ್ನಲಾಗಿತ್ತು.

ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ನಟಿಸಿರುವ ಜೋಡಿ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತ ಇರುತ್ತದೆ.

ಇತ್ತೀಚೆಗಷ್ಟೇ, ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಮಾತ್ರವಲ್ಲ, ಹೊಸ ವರ್ಷ ಆಚರಿಸಲು ಗೋವಾಕ್ಕೆ ಹೋಗಿತ್ತು ಈ ಜೋಡಿ.
ಈ ಜೋಡಿ ಇದೇ ವರ್ಷ ಮದುವೆ ಆಗಲಿದ್ದಾರೆ ಅನ್ನೋ ಗುಲ್ ಎಲ್ಲಾ ಕಡೆ ಹಬ್ಬಿದೆ.

Share This Article
Leave a comment