ಗ್ರಾ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ‘ಗೌರವಧನ’ ಹೆಚ್ಚಳ

Team Newsnap
1 Min Read

ರಾಜ್ಯದ ಗ್ರಾಮ ಪಂಚಾಯ್ತಿಗಳ ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ

ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಗೌರವಧನ ಹೆಚ್ಚಳ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.ವರ್ಷದ ಹಿಂದೆ ಗಂಡ ಆತ್ಮಹತ್ಯೆ: ಇಂದು ಪತ್ನಿಯೂ ಸಾವಿಗೆ ಶರಣು

ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರುಗಿಗೆ 3 ಸಾವಿರ ರು ಉಪಾಧ್ಯಕ್ಷರಿಗೆ 2 ಸಾವಿರ ರು ಹಾಗೂ ಸದಸ್ಯರಿಗೆ 1 ಸಾವಿರ ರು ಮಾಸಿಕ ಗೌರವಧನ ನೀಡಲಾಗುತ್ತಿದೆ.

WhatsApp Image 2022 12 18 at 4.41.27 PM

ಈಗ ಗೌರವಧನವನ್ನು ಪರಿಷ್ಕರಿಸಿ, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳಿಗೆ 6 ಸಾವಿರ ರು ಉಪಾಧ್ಯಕ್ಷರುಗಳಿಗೆ 4 ಸಾವಿರ ರು ಹಾಗೂ ಸದಸ್ಯರುಗಳಿಗೆ 2 ಸಾವಿರ ರು ಮಾಸಿಕ ಗೌರವಧವನ್ನು ಪರಿಷ್ಕರಿಸಲಾಗಿದೆ.

Share This Article
Leave a comment