November 24, 2024

Newsnap Kannada

The World at your finger tips!

dasara, festival , mandya

Inauguration of Srirangapatna Dasara on 28th Sep by Sattur sri Desikendra ಸುತ್ತೂರು ದೇಶಿಕೇಂದ್ರ ಶ್ರೀಗಳಿಂದ ಸೆ 28 ರಂದು ಶ್ರೀರಂಗಪಟ್ಟಣ ದಸರಾ ಉದ್ಘಾಟನೆ

ಸುತ್ತೂರು ದೇಶಿಕೇಂದ್ರ ಶ್ರೀಗಳಿಂದ ಸೆ 28 ರಂದು ಶ್ರೀರಂಗಪಟ್ಟಣ ದಸರಾ ಉದ್ಘಾಟನೆ

Spread the love

ಶ್ರೀರಂಗಪಟ್ಟಣದಲ್ಲಿ ಸೆಪ್ಟೆಂಬರ್ 28 ರಿಂದ ಅ2 ರವರೆಗೆ ನಡೆಯುವ ಐತಿಹಾಸಿಕ ವೈಭವಯುತ ದಸರಾ-2022ರ ಶ್ರೀರಂಗಪಟ್ಟಣ ದಸರಾ ಉದ್ಘಾಟನೆಗೆ ಸುತ್ತೂರು ಮಹಾಸಂಸ್ಥಾನದ ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರನ್ನು ಆಹ್ವಾನಿಸಲಾಯಿತು

ಬೆಂಗಳೂರಿನ ಬನಶಂಕರಿಯಲ್ಲಿರುವ ಮಠದಲ್ಲಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಹಾಗೂ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು, ಶ್ರೀಗಳನ್ನು ಭೇಟಿ ಮಾಡಿ ದಸರಾ ಉದ್ಘಾಟನೆಗೆ ಆಹ್ವಾನಿಸಿದರು.ಭಾರತ ಇಸ್ಲಾಮಿಕ್ ರಾಷ್ಟ್ರದ ಗುರಿ: ಪೂರ್ಣ ಸ್ವಾತಂತ್ರ್ಯಕ್ಕೆ ಬಾಂಬ್‌ ತಯಾರಿ – ಐಸಿಸ್‌ ಶಂಕಿತ ಉಗ್ರರ ಒಳ ಸಂಚು

ಶ್ರೀರಂಗಪಟ್ಟಣ ದಸರಾ ಮಹೋತ್ಸವ-2022ರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ನೆರವೇರಿಸಿದರು.

ಶ್ರೀರಂಗಪಟ್ಟಣ ದಸರಾಗೆ ಇತಿಹಾಸವಿದೆ:

ಈವೇಳೆ ಮಾತನಾಡಿದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಗಳು ಶ್ರೀರಂಗಪಟ್ಟಣದಲ್ಲಿ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 2 ರವರೆಗೆ ನಡೆಯುವ ದಸರಾ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶುಭಾರಂಭವಾಗಿದೆ ಎಂದರು.

ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ತನ್ನದೇ ಆದ ಇತಿಹಾಸವಿದೆ.ಐದು ದಿನಗಳ ಕಾಲ ನಡೆಯುವ ದಸರಾದ ಎಲ್ಲಾ ಕಾರ್ಯಕ್ರಮಗಳಿಗೆ ಶುಭವಾಗಲಿ ಎಂದು ಹೇಳಿದರು.

ಇದೇ ವೇಳೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ಮಾತನಾಡಿ ಶ್ರೀರಂಗಪಟ್ಟಣ ದಸರಾ ಯಶಸ್ವಿಯಾಗಿ ನಡೆಯಬೇಕು.

ಮೈಸೂರು ದಸರಾ ಮತ್ತು ಶ್ರೀರಂಗಪಟ್ಟಣ ಪ್ರವಾಸಿ ಸ್ಥಳಗಳಿಗೆ ದೇಶ ವಿದೇಶದಿಂದಲೂ ಸಹ ಜನಸಾಮಾನ್ಯರು ಬರುತ್ತಾರೆ. ದಸರಾ ಬಹಳ ವೈಭವಯುತವಾಗಿ ನಡೆಯಲಿದೆ ಎಂದು ಹೇಳಿದರು.

ಶ್ರೀರಂಗಪಟ್ಟಣದ ದಸರಾ ಪರಂಪರೆ ನಿರಂತವಾಗಿ ಉಳಿದುಕೊಳ್ಳಬೇಕು. ಎಲ್ಲರ ಸಹಕಾರದಿಂದ ದಸರಾವನ್ನು ಬಹಳ ವಿಜೃಭಣೆಯಿಂದ ಆಚರಿಸೋಣ ಎಂದು ರೇಷ್ಮೆ,ಯುವಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ.ನಾರಾಯಣಗೌಡ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತಾ ಹುಲ್ಮನಿ, ಉಪ ಅರಣ್ಯಸಂರಕ್ಷಣಾಧಿಕಾರಿ ರುದ್ರೆನ್ ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ವಾರ್ತಾಧಿಕಾರಿ ನಿರ್ಮಲ ಎಸ್. ಹೆಚ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!