ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದೆ ನಿಜ ಆದರೆ ನಮಗೆ ಸ್ವತಂತ್ರ ಸಿಕ್ಕಿಲ್ಲ. ನಮಗೆ ಸಂಪೂರ್ಣ ಸ್ವಾತಂತ್ರ್ಯ ಸಿಗಬೇಕಾದರೆ ಭಾರತ ಇಸ್ಲಾಮಿಕ್ ರಾಷ್ಟ್ರ ಆಗಬೇಕು. ಈ ಕಾರಣಕ್ಕೆ ಜಿಹಾದ್ ದಾಳಿಗೆ ಬಾಂಬ್ ತಯಾರಿಸಲು ಮುಂದಾಗಿದ್ದೇವೆ ಎಂದು ಇಬ್ಬರು ಶಂಕಿತ ಉಗ್ರರು ಆತಂಕಕಾರಿ ಸಂಗತಿಯನ್ನು ಶಿವಮೊಗ್ಗ ಪೊಲೀಸರ ಮುಂದೆ ಹೊರ ಹಾಕಿದ್ದಾರೆ
ಶಂಕಿತ ಉಗ್ರರಾದ ಮಾಝ್ ಮುನೀರ್ ಅಹಮದ್ ಹಾಗೂ ಸೈಯದ್ ಯಾಸೀನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.ಸೆ.28ಕ್ಕೆ ಸಚಿವ ಸಂಪುಟ ವಿಸ್ತರಣೆ : ಜಾರಕಿಹೊಳಿ, ಈಶ್ವರಪ್ಪ, ಸವದಿ, CPY ಮೇಲೆ ಸಿಎಂಗೆ ಒಲವು
ಇಬ್ಬರು ಐಸಿಸ್ ವಿಡಿಯೋಗಳಿಂದ ಪ್ರೇರಿತರಾಗಿ ಭಾರತದಲ್ಲೂ ದಾಳಿ ನಡೆಸಲು ಸಿದ್ದತೆ ನಡೆಸುತ್ತಿದ್ದರು. ಮೊಬೈಲ್, ವಾಟ್ಸಪ್ ಮೂಲಕ ಸಂವಹನ ನಡೆಸದೇ ಟೆಲಿಗ್ರಾಮ್, ಸಿಗ್ನಲ್ ಇತ್ಯಾದಿ ಮೆಸೆಂಜರ್ ಆಪ್ ಬಳಸುತ್ತಿದ್ದ ವಿಚಾರ ತನಿಖೆಯಿಂದ ತಿಳಿದು ಬಂದಿದೆ.
ಶಿವಮೊಗ್ಗದ ಸಿದ್ದೇಶ್ವರ ನಗರ ನಿವಾಸಿಯಾದ ಸೈಯದ್ ಯಾಸಿನ್(21) ಜೆಎನ್‌ಎನ್‌ಸಿ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಓದಿದ್ದು ಎರಡು ತಿಂಗಳ ಹಿಂದೆ ವ್ಯಾಸಂಗ ಮುಗಿಸಿದ್ದ.
ಮಾಜ್ ಮುನೀರ್(22) ಮಂಗಳೂರಿನ ಮುಡಿಪು ಸಮಿಪದ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಟೆಕ್ ಓದುತ್ತಿದ್ದಾನೆ. ತೀರ್ಥಹಳ್ಳಿ ಮೂಲದ ಶಾರೀಕ್ ಮಹ್ಮದ್ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ವಿವರಣೆ ನೀಡಿದರು
ಆಗಸ್ಟ್ 15ರಂದು ಸಾವರ್ಕರ್ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಅಮೀರ್ ಅಹಮದ್ ವೃತ್ತದಲ್ಲಿ ಘರ್ಷಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ಬಟ್ಟೆ ಅಂಗಡಿ ನೌಕರ ಪ್ರೇಮ್‌ಸಿಂಗ್‌ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಬೀಯುಲ್ಲಾನ ಬಂಧನವಾಗುತ್ತದೆ.
ಆತನ ವಿಚಾರಣೆ ಮತ್ತು ಮೊಬೈಲ್ ದಾಖಲೆ ಪರಿಶೀಲನೆಯ ವೇಳೆ ಆತ ಹಲವರ ಜೊತೆ ಸಂವಹನ ನಡೆಸಿದ ವಿಚಾರ ತಿಳಿದು ಬರುತ್ತದೆ. ಈ ಆಧಾರದಲ್ಲಿ ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದರು.
- ಶಿವಮೊಗ್ಗದಲ್ಲಿ ಕೋಮು ಗಲಭೆ : ಈದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಹಲವರಿಗೆ ಗಾಯ : 35 ಜನ ಪೊಲೀಸ್ ವಶಕ್ಕೆ
- ಜೀವ ರಕ್ಷಕ CPR -ಪಠ್ಯಕ್ಕೆ ಸೇರಿಸಲು ಚಿಂತನೆ
- ನಟ ನಾಗಭೂಷಣ ಕಾರು ಬೆಂಗಳೂರಿನಲ್ಲಿ ಅಪಘಾತ- ಮಹಿಳೆ ಸಾವು
- ಹೆಚ್ ಡಿ ಕೋಟೆ ಬಳಿ : ನಾಲೆಗೆ ಬಿದ್ದ ಪುತ್ರಿ ರಕ್ಷಣೆಗೆ ಹೋದ ಅಪ್ಪ – ಅಮ್ಮನೂ ದುರಂತ ಸಾವು
- ಅಂತರರಾಷ್ಟ್ರೀಯ ಕಾಫಿ ದಿನ | International Coffee Day 2023
- ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಮರುಪರಿಶೀಲನಾ ಅರ್ಜಿ: ಸಿದ್ದರಾಮಯ್ಯ