ರಾಜ್ಯದಲ್ಲಿ ಗುರುವಾರ 24,214 ಮಂದಿಗೆ ಕೊರೊನಾ ಪಾಸಿಟಿವ್‌ 476 ಮಂದಿ ಸಾವು

Team Newsnap
1 Min Read

ರಾಜ್ಯದಲ್ಲಿ ಗುರುವಾರ 24,214 ಮಂದಿಗೆ ಕೊರೊನಾ ಪಾಸಿಟಿವ್‌ ಬಂದಿದೆ. ಇಂದು 476 ಮಂದಿ ಸಾವನ್ನಪ್ಪಿದ್ದಾರೆ. 31, 459 ಆಸ್ಪತ್ರೆ ಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿ ಇಂದು 29,885 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,07,758 ಆರ್​ಟಿಪಿಸಿಆರ್ ಟೆಸ್ಟ್​ಗಳೂ ಸೇರಿದಂತೆ ಒಟ್ಟು 1,37,643 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಕಳೆದ 24 ಗಂಟೆಗಳಲ್ಲಿ 24,214 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇನ್ನು ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 25,23,998 ಕ್ಕೆ ಏರಿಕೆಯಾಗಿದೆ.

31,459 ಮಂದಿ ಇಂದು ಸೋಂಕಿನಿಂದ ಗುಣಮಖರಾಗಿ ದ್ದಾರೆ. ಈವರೆಗೆ ಒಟ್ಟು 20,94,369 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿನಿಂದಾಗಿ ಇಂದು 476 ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿಗೆ ಬಲಿಯಾದವರ ಸಂಖ್ಯೆ 27,405 ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 4,02,203 ಸಕ್ರಿಯ ಪ್ರಕರಣಗಳಿವೆ.‌

ಬೆಂಗಳೂರು ನಗರವೊಂದರಲ್ಲೇ ಇಂದು 5,949 ಮಂದಿಗೆ ಕೊರೊನಾ ಪಾಸಿಟಿವ್ ಆಗಿದ್ದರೆ 273 ಮಂದಿ ಕಳೆದ 24 ಗಂಟೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಜಿಲ್ಲಾವಾರು ವಿವರ:

ಬಾಗಲಕೋಟೆ214
ಬಳ್ಳಾರಿ725
ಬೆಳಗಾವಿ1147
ಬೆಂಗಳೂರು ಗ್ರಾಮಾಂತರ623
ಬೆಂಗಳೂರು ನಗರ5949
ಬೀದರ್60
ಚಾಮರಾಜನಗರ380
ಚಿಕ್ಕಬಳ್ಳಾಪುರ238
ಚಿಕ್ಕಮಗಳೂರು715
ಚಿತ್ರದುರ್ಗ710
ದಕ್ಷಿಣಕನ್ನಡ555
ದಾವಣಗೆರೆ806
ಧಾರವಾಡ678
ಗದಗ370
ಹಾಸನ1505
ಹಾವೇರಿ159
ಕಲಬುರಗಿ153
ಕೊಡಗು337
ಕೋಲಾರ591
ಕೊಪ್ಪಳ495
ಮಂಡ್ಯ755
ಮೈಸೂರು2240
ರಾಯಚೂರು445
ರಾಮನಗರ263
ಶಿವಮೊಗ್ಗ822
ತುಮಕೂರು1219
ಉಡುಪಿ905
ಉತ್ತರಕನ್ನಡ659
ವಿಜಯಪುರ306
ಯಾದಗಿರಿ190
Share This Article
Leave a comment