ರಾಜ್ಯಕ್ಕೆ ಶೇ.50 ರಷ್ಟು ಲಸಿಕೆ ಉಚಿತವಾಗಿ ಪೂರೈಸುವಂತೆ ಕೇಂದ್ರಕ್ಕೆ ಹೈ ಕೋರ್ಟ್ ನಿರ್ದೇಶನ

Team Newsnap
1 Min Read
shock for Congress: High Court order to cancel ACB - Lokyukta gets power again

ರಾಜ್ಯಕ್ಕೆ ಅಗತ್ಯವಿರುವ ಶೇ. 50 ರಷ್ಟು ಲಸಿಕೆಯನ್ನು ಉಚಿತವಾಗಿ ಪೂರೈಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ನೀಡಿತು.

ಕೊರೊನಾ ವ್ಯಾಕ್ಸಿನ್ ವಿಚಾರ ಸಂಬಂಧ ಸಲ್ಲಿಕೆಯಾಗಿದ್ದ ಪಿಐಎಲ್​ ಅರ್ಜಿಗಳ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ಓಕಾ & ನ್ಯಾ. ಅರವಿಂದ ಕುಮಾರ್ ನೇತೃತ್ವದ ವಿಭಾಗೀಯ ಪೀಠದಲ್ಲಿ ಇಂದು ನಡೆಯಿತು.

ಶೇ. 50 ರಷ್ಟು ಲಸಿಕೆ ಪೂರೈಸಲು ನೀಡಿದ್ದ ಆದೇಶ ಸ್ವಲ್ಪ ಉಲ್ಲಂಘನೆಯಾಗಿದೆ. 18 ಸಾವಿರ ಡೋಸ್​ಗಳಷ್ಟೇ ಅಂತಾ ನ್ಯಾಯ ಪೀಠಕ್ಕೆ ಎಎಸ್​ಜಿ ಮಾಹಿತಿ ನೀಡಿದರು.

ಉಳಿದ ಶೇ 50% ರಲ್ಲಿ 25%ರಷ್ಟು ಲಸಿಕೆಯನ್ನು ನೇರವಾಗಿ ರಾಜ್ಯ ಸರ್ಕಾರ ಕಾರ್ಯಾದೇಶ ಮಾಡಿ ಪಡೆಯಬಹುದು. ಅಲ್ಲದೇ ಅದನ್ನು ಉಚಿತವಾಗಿ ನೀಡಲು ರಾಜ್ಯ ಬಳಸಬಹುದು. ಇನ್ನುಳಿದ ಶೇಕಡಾ 25%ನ್ನ ಖಾಸಗಿಯವರು ಪೂರೈಕೆದಾರರು ಉತ್ಪಾದಕರಿಂದ ನೇರವಾಗಿ ಖರೀದಿಸಬಹುದು‌ ಎಂದು ಕೋಟ್೯ ಹೇಳಿದೆ.

ರಾಜ್ಯ ಮೊದಲು, ಎರಡನೇ ಡೋಸ್ ಅಗತ್ಯವನ್ನು ಪರಿಗಣಿಸಬೇಕು. ಜೊತೆಗೆ 18-44ರ ವಯೋಮಾನದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಕೋವಿಶೀಲ್ಡ್ ಮೊದಲ ಡೋಸ್ ಆದ್ಯತೆ ನೀಡಿ ಎಂದು ಕೋರ್ಟ್​ ಸೂಚಿಸಿತು.

Share This Article
Leave a comment