ದುಬೈನಲ್ಲಿ‌, ‘ ಮಾಮರವೆಲ್ಲೋ , ಕೋಗಿಲೆ ಎಲ್ಲೋ…..’ ಕನ್ನಡ ಹಾಡು ಹಾಡಿದ ಪಂಜಾಬ್ ಕೋಚ್ ಕುಂಬ್ಳೆ

Team Newsnap
1 Min Read

ಐಪಿಎಲ್ 2021ರ ಟೂರ್ನಿಯ ಎರಡನೇ ಭಾಗ ಆರಂಭಕ್ಕೆ ಕೆಲ ದಿನ ಮಾತ್ರ ಬಾಕಿ ಇರುವಾಗಲೇ ಆಟಗಾರರನ್ನು ಹುರಿದುಂಬಿಸಲು ಆಯಾ ತಂಡಗಳು ಮನರಂಜನಾ ಕಾರ್ಯಕ್ರಮ ಆಯೋಜಿಸಿದೆ.

anil kumble1

ಪಂಜಾಬ್ ಕಿಂಗ್ಸ್ ಆಯೋಜಿಸಿದ ಮನರಂಜನಾ ಕಾರ್ಯಕ್ರಮದಲ್ಲಿ ಕೋಚ್ ಅನಿಲ್ ಕುಂಬ್ಳೆ ಕನ್ನಡ ಸಿನಿಮಾದ ಜನಪ್ರಿಯ ಹಾಡು ಹಾಡುವ ಮೂಲಕ ಎಲ್ಲರ ಕನ್ನಡಿಗರ ಮನಗೆದ್ದಿದ್ದಾರೆ.

ದುಬೈನಲ್ಲಿ ಆಯೋಜಿಸಿದ ಮನರಂಜನಾ ಕಾರ್ಯಕ್ರಮದಲ್ಲಿ ಅನಿಲ್ ಕುಂಬ್ಳೆ ಕನ್ನಡದ ಅತ್ಯಂತ ಜನಪ್ರಿಯ ಮಾಮರ ಎಲ್ಲೋ ಕೋಗಿಲೆ ಎಲ್ಲೋ ಹಾಡು ಹಾಡಿದ್ದಾರೆ.

1975ರಲ್ಲಿ ತೆರೆಕಂಡ ದೇವರ ಗುಡಿ ಚಿತ್ರದ ಈ ಗೀತೆಯನ್ನು ಚಿ ಉದಯ್ ಶಂಕರ್ ರಚನೆ, ರಾಜನ್ ನಾಗೇಂದ್ರ ಸಂಗೀತ ನೀಡಿದ ಈ ಹಾಡನ್ನು ಅನಿಲ್ ಕುಂಬ್ಳೆ ಹಾಡಿ ಕನ್ನಡಿಗರ ಮನ ತಣಿಸಿದ್ದಾರೆ.

ಕುಂಬ್ಳೆ ಹಾಡು ಇದೀಗ ಹೈಲೈಟ್ ಆಗಿದೆ. ಅಂತಾರಾಷ್ಟ್ರೀಯ ಪಂದ್ಯವಿರಲಿ, ಟೀಂ ಇಂಡಿಯಾಗೆ ಮಾರ್ಗದರ್ಶನ ಮಾಡುತ್ತಿರುವ ಸಂದರ್ಭ, ಐಪಿಎಲ್ ಹೀಗೆ ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅನಿಲ್ ಕುಂಬ್ಳೆ ಕನ್ನಡವನ್ನು ಅತ್ಯಂತ ಹೆಮ್ಮೆಯಿಂದ ಮಾತನಾಡಿದ್ದಾರೆ.

ಕುಂಬ್ಳೆ ಅತ್ಯಂತ ಸ್ಪಷ್ಟ ಕನ್ನಡದಲ್ಲಿ ಮಾತನಾಡಬಲ್ಲರು ಅನ್ನೋದು ಮತ್ತೊಂದು ವಿಶೇಷ.

ಪಂಜಾಬ್ ಕಿಂಗ್ಸ್ ತಂಡ ಕನ್ನಡಿಗರ ತಂಡ ಅನ್ನೋ ಮಾತಿದೆ. ಕಾರಣ ಕೋಚ್ ಅನಿಲ್ ಕುಂಬ್ಳೆ, ನಾಯಕ ಕೆಎಲ್ ರಾಹುಲ್‌, ಮಯಾಂಕ್ ಅಗರ್ವಾಲ್, ಜೆ ಸುಚಿತ್ ಸೇರಿದಂತೆ ಕನ್ನಡಿಗರ ದಂಡೇ ಇದೆ.

Share This Article
Leave a comment