ಸಿಂಧೂರಿ ವಿರುದ್ಧ ಭ್ರಷ್ಟಾಚಾರ ಆರೋಪ – ಚರ್ಚೆಗೆ ಆಗ್ರಹಿಸಿ ಸಾರಾ ಮಹೇಶ್ ಪ್ರತಿಭಟನೆ

Team Newsnap
1 Min Read

ಜೆಡಿಎಸ್ ಶಾಸಕ ಸಾರಾ ಮಹೇಶ್ ಬುಧವಾರ ವಿಧಾನಸಭೆಯ ಬಾವಿಗೆ ಇಳಿದು ಧರಣಿ ನಡೆಸಿದ ಪ್ರಸಂಗ ಜರುಗಿದೆ.

ಅಧಿವೇಶನದ ವೇಳೆ ಮೈಸೂರಿನ ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೇಲೆ ಬಂದಿರುವ ಬ್ಯಾಗ್ ಖರೀದಿ ಅಕ್ರಮ ಆರೋಪ ಪ್ರಕರಣದ ಬಗ್ಗೆ ಚರ್ಚೆ ನಡೆಸಲು ಅನುಮತಿ ಕೇಳಿದರು.

ಸಾರಾ ಮಹೇಶ್ ಈಗಲೇ ಹಕ್ಕುಚ್ಯುತಿ ಸೂಚನೆಯ ಚರ್ಚೆ ನಡೆಸುವಂತೆ ಆಗ್ರಹಿಸಿದರು. ಆದರೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅನುಮತಿ ನೀಡಲಿಲ್ಲ.

ತಾವು ಮಾಡಿರುವ ಆರೋಪ ಗಂಭೀರವಾಗಿದೆ. ಚರ್ಚೆ ನಡೆಸಲು ಅನುಮತಿ ನೀಡಬೇಕೆಂದು ಆಗ್ರಹಿಸಿದ್ದರೂ ಸ್ಪೀಕರ್ ಒಪ್ಪಿಗೆ ನೀಡಲಿಲ್ಲ. ಹೀಗಾಗಿ ಚರ್ಚೆಗೆ ಪಟ್ಟು ಹಿಡಿದ ಸಾರಾ ಮಹೇಶ್ ಸದನದ ಬಾವಿಗಿಳಿದು ಧರಣಿ ನಡೆಸಿದರು.

ಕೊನೆಗೆ ಸ್ಪೀಕರ್ ಕಾಗೇರಿ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ ಬಳಿಕ ಸಾರಾ ಮಹೇಶ್ ಧರಣಿಯನ್ನು ವಾಪಸ್ ಪಡೆದರು.

Share This Article
Leave a comment