December 19, 2024

Newsnap Kannada

The World at your finger tips!

WhatsApp Image 2022 05 18 at 8.14.28 AM

ಬಹುಪತ್ನಿತ್ವ ಸ್ವೀಕರಿಸಲು ನಾನು ಸಿದ್ಧ: ಪೋಸ್ಟರ್​ ಹಿಡಿದು ಬೀದಿ ಬೀದಿ ಅಲೆಯುತ್ತಿರುವ ಯುವತಿ!

Spread the love

ಸುಡಾನ್​​​ ಮೂಲದ ಯುವತಿಯೊಬ್ಬಳು ಹೊಸ ಮಾದರಿಯಲ್ಲಿ ಭಾವಿ ಪತಿಗಾಗಿ ಹುಡುಕಾಟ ನಡೆಸುತ್ತಿದ್ದಾಳೆ.ವರ ಬೇಕು ಎಂಬ ಭಿತ್ತಿ ಫಲಕವನ್ನು ಹಿಡಿದು ಸುಡಾನ್​ನ ರಾಜಧಾನಿ ಖಾರ್ಟೂಮ್​ನ ಬೀದಿ ಬೀದಿಯಲ್ಲಿ ಮಹಿಳೆ ಅಲೆದಾಡುತ್ತಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್​ ಆಗಿದೆ. ಈ ಯುವತಿ ಟ್ರಾಫಿಕ್​ ಸಿಗ್ನಲ್​ ಬಳಿ ಭಿತ್ತಿ ಫಲಕ ಹಿಡಿದು ನಿಂತಿದ್ದಾಳೆ. ನನಗೆ ವರ ಬೇಕಿದ್ದಾನೆ. ನಾನು ಮದುವೆಯಾಗಬೇಕಿದೆ. ನಾನು ಬಹುಪತ್ನಿತ್ವ ಸ್ವೀಕರಿಸಲೂ ಸಿದ್ಧಳಾಗಿದ್ದೇನೆ ಎಂಬ ಬರಹ ಯುವತಿ ಹಿಡಿದಿರುವ ಭಿತ್ತಿ ಫಲಕದಲ್ಲಿದೆ. ಅಲ್ಲದೆ, ಮೊಬೈಲ್​ ನಂಬರ್​ ಕೂಡ ಅದರಲ್ಲಿದೆ.

ಫೋಟೋ ವೈರಲ್​ ಆಗುತ್ತಿದ್ದಂತೆ ಯುವತಿ ಬಹು ಚರ್ಚೆಯ ವಿಷಯವಾಗಿದ್ದಾಳೆ. ಕಳೆದ ಕೆಲವು ವರ್ಷಗಳಿಂದ, ಸುಡಾನ್​ನಲ್ಲಿ ಮದುವೆ ದರದಲ್ಲಿ ಗಮನಾರ್ಹ ಕುಸಿತ ಮತ್ತು ವಿಚ್ಛೇದನಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ವರದಿಯಾಗಿದೆ.

ಇದನ್ನು ಓದಿ :ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಮನೆ ಸೇರಿ 7 ಕಡೆ CBI ದಾಳಿ

ಮದುವೆಗಳು ಕಡಿಮೆ – ವಿಚ್ಛೇದನ ಹೆಚ್ಚು :

ಸುಡಾನ್​ನಲ್ಲಿ 2020ರಲ್ಲಿ ಮದುವೆ ದರವು 2018ಕ್ಕೆ ಹೋಲಿಸಿದರೆ ಶೇಕಡ 21 ರಷ್ಟು ಕಡಿಮೆಯಾಗಿದೆ. 2018ರಲ್ಲಿ 1,80,563 ಮದುವೆ ನೋಂದಣಿಯಾಗಿದ್ದವು. ಈ ಸಂಖ್ಯೆಗೆ ಹೋಲಿಸಿದರೆ 2020ರಲ್ಲಿ 142,949 ವಿವಾಹಗಳು ನಡೆದಿದ್ದು, ಕುಸಿತ ಕಂಡಿದೆ. ತಜ್ಞರ ಪ್ರಕಾರ, ಸುಡಾನ್‌ನಲ್ಲಿನ ಕೆಟ್ಟ ಆರ್ಥಿಕ ಪರಿಸ್ಥಿತಿ ಮತ್ತು ಸಾಂಕ್ರಾಮಿಕದ ಪ್ರಭಾವ ಸೇರಿದಂತೆ ಹಲವು ಕಾರಣಗಳು ದೊಡ್ಡ ಕುಸಿತಕ್ಕೆ ಕಾರಣವಾಗಿದೆ.ಕಳೆದ ವರ್ಷ ಸುಡಾನ್ ನ್ಯಾಯಾಂಗ ಇಲಾಖೆ ಮಾಹಿತಿಯಂತೆ ಸುಡಾನ್‌ನಲ್ಲಿ ಪ್ರತಿ ಗಂಟೆಗೆ ಏಳು ವಿಚ್ಛೇದನಗಳು ಸಂಭವಿಸುತ್ತವೆ. 2020 ರಲ್ಲಿ ಡಿವೋರ್ಸ್​ ಪ್ರಕರಣಗಳ ಸಂಖ್ಯೆ 60,000 ಕ್ಕಿಂತ ಹೆಚ್ಚಿವೆ.

Copyright © All rights reserved Newsnap | Newsever by AF themes.
error: Content is protected !!