ವಿದೇಶಿ ದೇಣಿಗೆ ಸಂಗ್ರಹದಲ್ಲಿ ಅಕ್ರಮ: ರಾಜೀವ್​ ಗಾಂಧಿ ಪ್ರತಿಷ್ಠಾನದ ಲೈಸೆನ್ಸ್​ ರದ್ದು

Team Newsnap
1 Min Read
Illegality in collection of foreign donations: License of Rajiv Gandhi Foundation cancelled ವಿದೇಶಿ ದೇಣಿಗೆ ಸಂಗ್ರಹದಲ್ಲಿ ಅಕ್ರಮ: ರಾಜೀವ್​ ಗಾಂಧಿ ಪ್ರತಿಷ್ಠಾನದ ಲೈಸೆನ್ಸ್​ ರದ್ದು

ವಿದೇಶಗಳಿಂದ ದೇಣಿಗೆ ಸಂಗ್ರಹಿಸುವ ವೇಳೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ರಾಜೀವ್​ ಗಾಂಧಿ ಫೌಂಡೇಶನ್​ ( Rajiv Ghandi Foundation )ಸಂಸ್ಥೆಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ನೀಡಿದ್ದ ಲೈಸೆನ್ಸ್ ( License ) ​ ಅನ್ನು ಕೇಂದ್ರ ಗೃಹ ಇಲಾಖೆಯು ರದ್ದುಪಡಿಸಿದೆ.

ಕಾಂಗ್ರೆಸ್ ( Congress ) ಪಕ್ಷವನ್ನು ಮುನ್ನಡೆಸುವ ಪ್ರಭಾವಿ ಮನೆತನವಾಗಿರುವ ಗಾಂಧಿ ಕುಟುಂಬದೊಂದಿಗೆ ಈ ಪ್ರತಿಷ್ಠಾನವು ನಿಕಟ ಸಂಬಂಧ ಹೊಂದಿದೆ. ಜುಲೈ 2020ರಲ್ಲಿ ಕೇಂದ್ರ ಗೃಹ ಇಲಾಖೆಯು ರಾಜೀವ್ ಗಾಂಧಿ ಪ್ರತಿಷ್ಠಾನದ ಕಾರ್ಯನಿರ್ವಹಣೆ ಕುರಿತು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿತ್ತು..ಅ25 ರಂದು ಗೋಚರಿಸುವ ಸೂರ್ಯ ಗ್ರಹಣದ ಬಗ್ಗೆ ಭೌತ ವಿಜ್ಞಾನಿ ಭಟ್ ಬಿಚ್ಚಿಟ್ಟ ಒಂದಷ್ಟು ಮಾಹಿತಿ

ಈ ಸಮಿತಿಯ ವರದಿಯನ್ನು ಆಧರಿಸಿ ಪ್ರತಿಷ್ಠಾನಕ್ಕೆ ನೀಡಿದ್ದ ಲೈಸೆನ್ಸ್ ರದ್ದುಪಡಿಸುವ ನಿರ್ಧಾರ ತೆಗೆದುಕೊಂಡಿದೆ. ಲೈಸೆನ್ಸ್​ ರದ್ದತಿ ಕುರಿತ ಮಾಹಿತಿಯನ್ನು ರಾಜೀವ್ ಗಾಂಧಿ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಕಳುಹಿಸಿಕೊಡಲಾಗಿದೆ.

ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ಸೋನಿಯಾ ಗಾಂಧಿ ( Sonia Ghandi ) ಅವರು ರಾಜೀವ್ ಗಾಂಧಿ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಈ ಟ್ರಸ್ಟ್​ನ ವಿಶ್ವಸ್ಥರಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಸಂಸದರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಇದ್ದಾರೆ.

Share This Article
Leave a comment