December 21, 2024

Newsnap Kannada

The World at your finger tips!

WhatsApp Image 2022 05 29 at 4.04.07 PM

ಅಕ್ರಮ ಪ್ರವೇಶ : ಪಾಕಿಸ್ತಾನ ಡ್ರೋನ್ ಹೊಡೆದುರುಳಿಸಿದ ಭಾರತದ ಗಡಿ ಭದ್ರತಾ ಪಡೆ

Spread the love

ಭಾರತದ ಗಡಿ ಭದ್ರತಾ ಪಡೆ ಪಾಕಿಸ್ತಾನದ ಡ್ರೋನ್ ಅನ್ನು ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಭಾನುವಾರ ಹೊಡೆದುರುಳಿಸಿದೆ. ಪಾಕಿಸ್ತಾನದ ಡೋನ್ ಗಡಿ ದಾಟಿ ಭಾರತದತ್ತ ಬಂದಿತ್ತು.

ಈ ಹಿನ್ನೆಲೆಯಲ್ಲಿ ರಾಜ್‍ಬಾಗ್ ಪೊಲೀಸ್ ಠಾಣಾ ವ್ಯಾಪ್ತಿಯ ತಲ್ಲಿ ಹರಿಯ ಚಾಕ್ ಪ್ರದೇಶದ ಗಡಿಯಿಂದ ಡ್ರೋನ್‍ನ ಚಲನೆಯನ್ನು ಗಮನಿಸಿದ ಗಡಿ ಭದ್ರತಾ ಪಡೆ ಶೋಧ ಕಾರ್ಯವನ್ನು ಕೈಗೊಂಡು, ಡ್ರೋನ್‍ಗೆ ಗುಂಡು ಹೊಡೆದು ಕೆಳಗೆ ಬಿಳಿಸಿದೆ.

ಇದನ್ನು ಓದಿ : ನಾಲ್ವರು ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ಕಣ್ಮರೆ

ನೆಲಕ್ಕೆ ಬಿದ್ದ ಡ್ರೋನ್‍ಗೆ ಪೇಲೋಡ್ ಅನ್ನು ಜೋಡಿಸಲಾಗಿದೆ ಮತ್ತು ಅದನ್ನು ಬಾಂಬ್ ನಿಷ್ಕ್ರಿಯ ದಳವು ಪರೀಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಡಿಯಾಚೆಯಿಂದ ಆಗಾಗ ಈ ರೀತಿ ಡ್ರೋನ್ ಚಟುವಟಿಕೆ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳಲು ತಂಡವನ್ನು ಪ್ರದೇಶಕ್ಕೆ ಕಳುಹಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!