PSI ನೇಮಕಾತಿ ಅಕ್ರಮ : ಶಾಂತ- ರವೀಂದ್ರ ಎಸ್ಕೇಪ್ – ಸಿಡಿಐಗೆ ಇವರನ್ನು ಪತ್ತೆ ಮಾಡುವುದೇ ಸವಾಲು

Team Newsnap
1 Min Read

PSI ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಶಾಂತ ಹಾಗೂ ರವೀಂದ್ರ ಕಳೆದ ಒಂದೂವರೆ ತಿಂಗಳಿಂದ ಸಿಐಡಿ ತನಿಖಾ ತಂಡಕ್ಕೆ ಯಾವುದೇ ಸುಳಿವು ನೀಡದೇ ಎಸ್ಕೇಪ್ ಆಗಿದ್ದಾರೆ. ಇವರಿಬ್ಬರನ್ನು ಪತ್ತೆ ಮಾಡುವುದೇ ಸಿಐಡಿ ಸವಾಲಾಗಿದೆ.

ಇಬ್ಬರು ಆರೋಪಿಗಳಾದ ಶಾಂತಿಬಾಯಿ, ಮಧ್ಯವರ್ತಿ ರವೀಂದ್ರ ಮೇಳಕುಂದಿ ನಾಪತ್ತೆ ಆಗಿದ್ದಾರೆ .ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಇಬ್ಬರು ದಿಢೀರ್​​ ನಾಪತ್ತೆ ಆಗಿದ್ದಾರೆ.

ಆರೋಪಿ ಮಂಜುನಾಥ್​ ಮೇಳಕುಂದಿ ಸೋದರ ರವೀಂದ್ರ. ಈತ ಅಣ್ಣ ಡೀಲ್​ ಮಾಡುತ್ತಿದ್ದ ಅಭ್ಯರ್ಥಿಗಳಿಂದ ಹಣ ಸಂಗ್ರಹ ಮಾಡುತ್ತಿದ್ದ. ನಾಪತ್ತೆಯಾದವರಿಗಾಗಿ ಸಿಐಡಿ ತೀವ್ರ ಹುಡುಕಾಟ ನಡೆಸಿತ್ತು. ವಾರೆಂಟ್​ ಕೂಡ ಜಾರಿಯಾಗಿದ್ದರೂ ಸರೆಂಡರ್​ ಆಗದ ಆರೋಪಿಗಳು ಎಲ್ಲಿಗೋ ಎಸ್ಕೇಪ್​​ ಆಗಿದ್ದಾರೆ.

ಆರೋಪಿ ಶಾಂತಿಬಾಯಿ 40 ಲಕ್ಷ ರು ಹಣ ನೀಡಿ ಡೀಲ್​ ಮಾಡಿದ್ದರು. ಬ್ಲೂಟೂಥ್​ ಮೂಲಕ ಅಕ್ರಮ ಎಸಗಿ ಆಯ್ಕೆಯಾದ ಶಾಂತಿಬಾಯಿ, ಒಂದೂವರೆ ತಿಂಗಳಿಂದ ಹಲವು ಜಾಗ ಬದಲಾಯಿಸಿ ಕಳ್ಳಾಟ ನಡೆಸಿದ್ದಾರೆ. ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಅಡಗಿ ಕುಳಿತಿರುವ ಶಂಕೆ ಇದೆ , ಶಾಂತಿಬಾಯಿ ಮತ್ತು ರವೀಂದ್ರಗಾಗಿ ಸಿಐಡಿ ಹುಡುಕಾಟ ನಡೆಸುತ್ತಿದೆ.

Share This Article
Leave a comment