June 7, 2023

Newsnap Kannada

The World at your finger tips!

aircraft

ನಾಲ್ವರು ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ಕಣ್ಮರೆ

Spread the love

ನೇಪಾಳದಲ್ಲಿ 22 ಪ್ರಯಾಣಿಕರಿದ್ದ ವಿಮಾನವೊಂದು ಸಂಪರ್ಕ ಕಳೆದುಕೊಂಡು ಕಣ್ಮರೆಯಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

22 ಮಂದಿಯೊಂದಿಗೆ ಪೋಖರಾದಿಂದ ನೇಪಾಳದ ಜೋಮ್ಸೋಮ್‌ ಗೆ ಹಾರುತ್ತಿದ್ದ ವಿಮಾನವು ಭಾನುವಾರ ಬೆಳಗ್ಗೆ ಸಂಪರ್ಕ ಕಳೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾರಾ ಏರ್‌ನ 9 NAET ಅವಳಿ-ಎಂಜಿನ್ ವಿಮಾನವು ಬೆಳಿಗ್ಗೆ 9.55 ಕ್ಕೆ ಹಾರಿದ್ದು, ಸ್ವಲ್ಪ ಸಮಯದ ನಂತರ ರಾಡಾರ್‌ ನಿಂದ ಸಂಪರ್ಕ ಕಳೆದುಕೊಂಡಿದೆ. ವಿಮಾನದ ಪತ್ತೆಗೆ ಫೀಸ್ಟೆಲ್ ಹೆಲಿಕಾಪ್ಟರ್ ಕಳುಹಿಸಲಾಗಿದೆ.

ಇದನ್ನು ಓದಿ : ರೆಬೆಲ್ ಅಂಬಿಗೆ ಇಂದು 70ನೇ ಹುಟ್ಟು ಹಬ್ಬ : ಭಾವುಕರಾಗಿ ಕವನ ಬರೆದ ಸುಮಲತಾ ಅಂಬರೀಶ್

ವಿಮಾನದ ಪೈಲಟ್ ಅವರನ್ನು ಪ್ರಭಾಕರ ಪ್ರಸಾದ್ ಘಿಮಿರೆ ಎಂದು ಗುರುತಿಸಲಾಗಿದೆ. ನಾಪತ್ತೆಯಾಗಿರುವ ವಿಮಾನದಲ್ಲಿ ನಾಲ್ವರು ಭಾರತೀಯರು ಹಾಗೂ ಇಬ್ಬರು ವಿದೇಶಿ ಪ್ರಜೆಗಳಿದ್ದಾರೆ. ಉಳಿದ ಪ್ರಯಾಣಿಕರು ನೇಪಾಳಿ ಪ್ರಜೆಗಳಾಗಿದ್ದಾರೆ. ನಾಲ್ವರು ಭಾರತೀಯರು ಹಾಗೂ ಇಬ್ಬರು ವಿದೇಶಿ ಪ್ರಜೆಗಳಿದ್ದಾರೆ.

error: Content is protected !!