December 19, 2024

Newsnap Kannada

The World at your finger tips!

WhatsApp Image 2022 06 28 at 2.22.02 PM

ನಾನು ಮಂಡ್ಯ ಬಿಡಲ್ಲ :ಮಂಡ್ಯ ಕೂಡ ನನ್ನನ್ನು ಬಿಡಲ್ಲ: M P ಸುಮಲತಾ

Spread the love

ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ, ಅದೇ ರೀತಿ ಮಂಡ್ಯ ಕೂಡ ನನ್ನ ಬಿಡಲ್ಲ ಎಂದು ಸಂಸದೆ ಸುಮಲತಾ ಮಂಗಳವಾರ ಹೇಳಿದರು.

ಮಂಡ್ಯದ ರೈಲ್ವೆ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದಶಪಥ ಹೆದ್ದಾರಿ ಕಾಮಗಾರಿಯಲ್ಲಿ ವಿಳಂಬ ಆಗುತ್ತಿಲ್ಲ. ನಿಗದಿಯಂತೆ ದಸರಾ ವೇಳೆಗೆ ದಶಪಥ ಹೆದ್ದಾರಿ ಉದ್ಘಾಟನೆಯಾಗಲಿದೆ. ಅಲ್ಲಿಯವರೆಗೂ ಸಾರ್ವಜನಿಕರು ಸಹಕರಿಸಬೇಕು. ಕಾಮಗಾರಿ ನಡೆಯುತ್ತಿರುವುದರಿಂದ ಟ್ರಾಫಿಕ್ ಕಿರಿಕಿರಿ ಆಗುತ್ತದೆ. ಹಾಗಾಗಿ ಟ್ರೈನ್ ಮೂಲಕ ಮಂಡ್ಯಕ್ಕೆ ಆಗಮಿಸಿದ್ದೇನೆ. ಸಂಜೆ ಬೆಂಗಳೂರಿಗೆ ವಾಪಸ್ ಆಗುವ ಸಮಯಕ್ಕೆ ಟ್ರೈನ್ ಸಿಕ್ಕರೆ ಅದರಲ್ಲೇ ಹೋಗುತ್ತೇನೆ ಎಂದರು

ನಂಗೆ ರಾಜಕೀಯ ಅನಿವಾರ್ಯ ಅಲ್ಲ :

ನಾನು ಮಂಡ್ಯ ಬಿಟ್ಟು ಯಾವ ಕ್ಷೇತ್ರಕ್ಕೂ ಹೋಗುವುದಿಲ್ಲ. ನನಗೆ ರಾಜಕೀಯ ಅನಿವಾರ್ಯ ಅಲ್ಲ. ಮಂಡ್ಯ ಹಾಗೂ ಮಂಡ್ಯದ ಜನತೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಮಂಡ್ಯ ಜನರ ಋಣವನ್ನು ತೀರಿಸಲು ನಾನು ರಾಜಕೀಯದಲ್ಲಿದ್ದೇನೆ. ನಾನು ಮಂಡ್ಯ ಬಿಟ್ಟು ಹೋಗಲ್ಲ, ಮಂಡ್ಯ ನನ್ನ ಬಿಡಲ್ಲ. ನಾನು ಮಂಡ್ಯ ಬಿಡುವ ಹಗಲುಗನಸನ್ನು ಕೆಲವರು ಕಾಣುತ್ತಿದ್ದಾರೆ. ಆ ಕನಸು ಯಾವತ್ತೂ ನನಸು ಆಗಲ್ಲ ಎಂದು ಹೇಳಿದರು.

ಮಣ್ಣೆತ್ತಿನ ಅಮಾವಾಸ್ಯೆ

ನಾನು ಎಂದಿಗೂ ಮಂಡ್ಯದಲ್ಲಿಯೇ ಇರುತ್ತೇನೆ. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ ಅದಕ್ಕಾಗಿ ಕೆಲವರು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಈ ರೀತಿಯ ಚೀಪ್ ಗಿಮಿಕ್‍ಗಳನ್ನು ಈಗಲಾದರೂ ಬಿಡಿ. ಮಂಡ್ಯ ಅಭಿವೃದ್ಧಿ ಕಡೆಗೆ ಗಮನಹರಿಸೋಣಾ. ನನಗೆ ಅಧಿಕಾರದ ಆಸೆ ಇಲ್ಲ, ಹೀಗಾಗಿ ಯಾವುದೇ ಭಯ ನನಗಿಲ್ಲ. ಜನ ಆಶೀರ್ವಾದ ಇದ್ದರೆ ನಾವು, ಆಶೀರ್ವಾದ ಇಲ್ಲ ಅಂದರೆ ಇಲ್ಲ ಎಂದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!