September 27, 2022

Newsnap Kannada

The World at your finger tips!

baghyvanthru

‘ಭಾಗ್ಯವಂತರು’ಜುಲೈ 8 ರಂದು ಹೊಸ ರೂಪದಲ್ಲಿ ಮತ್ತೆ ಬಿಡುಗಡೆ

Spread the love

ವರನಟ ಡಾ. ರಾಜಕುಮಾರ್‌ ಹಾಗೂ ಬಿ. ಸರೋಜಾದೇವಿ ಅಭಿನಯಸಿದ್ದ “ಭಾಗ್ಯವಂತರು” ಕನ್ನಡ ಚಿತ್ರರಂಗದ ಜನಪ್ರಿಯವಾದ ಸೂಪರ್‌ ಹಿಟ್‌ ಸಿನಿಮಾ.ಹಿರಿಯ ನಟ,ನಿರ್ಮಾಪಕ ದ್ವಾರಕೀಶ್‌ ನಿರ್ಮಾಣ ಮಾಡಿದ್ದ ಈ ಚಿತ್ರಕ್ಕೆ ಹಿರಿಯ ನಿರ್ದೇಶಕ ಭಾರ್ಗವ ನಿರ್ದೇಶನ ಮಾಡಿದ್ದರು.

1977 ಮಾರ್ಚ್‌ 16 ರಂದು ಬಿಡುಗಡೆಯಾಗಿದ್ದ “ಭಾಗ್ಯವಂತರು’ ಫ್ಯಾಮಿಲಿ ಆಡಿಯನ್ಸ್‌ ಮನ ಗೆಲ್ಲುವುದರ ಜೊತೆಗೆ ಗಲ್ಲಾಪೆಟ್ಟಿಗೆಯಲ್ಲೂ ದಾಖಲೆ ಬರೆದಿತ್ತು.ಡಾ. ರಾಜಕುಮಾರ್‌ ಅವರ ಅಭಿಮಾನಿಯಾಗಿರುವ M ಮುನಿರಾಜು “ಭಾಗ್ಯವಂತರು’ ಚಿತ್ರವನ್ನು ಹೊಸತಂತ್ರಜ್ಞಾನದಲ್ಲಿ ಮರು ಬಿಡುಗಡೆ ಮಾಡುತ್ತಿದ್ದಾರೆ.

ಕನ್ನಡ ಚಿತ್ರರಂಗದ ಎವರ್‌ಗ್ರೀನ್‌ ಸಿನಿಮಾಗಳ ಸಾಲಿನಲ್ಲಿ ನಿಲ್ಲುವಂತಹ “ಭಾಗ್ಯವಂತರು’ ಸಿನಿಮಾ ಈಗ ಮತ್ತೆ ಹೊಸ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆಯಾಗುತ್ತಿದೆ. “ಭಾಗ್ಯವಂತರು’ ಚಿತ್ರ 7.1 ಡಿಜಿಟಲ್‌ ಸೌಂಡ್‌, ಕಲರಿಂಗ್‌, ಡಿಟಿಎಸ್‌ ಮುಂತಾದ ಆಧುನಿಕ ತಂತ್ರಜ್ಞಾನದೊಂದಿಗೆ ಹೊಸರೂಪದಲ್ಲಿ ಸಿದ್ಧವಾಗಿದ್ದು, ಇದೇ ಜುಲೈ 8 ರಂದು ಹೊಸ ‌ರೂಪದಲ್ಲಿ “ಭಾಗ್ಯವಂತರು’ ಚಿತ್ರ ಬಿಡುಗಡೆಯಾಗುತ್ತಿದೆ.

ಈ ಹಿಂದೆ ಡಾ. ರಾಜಕುಮಾರ್‌ ಅಭಿನಯದ “ಆಪರೇಷನ್‌ ಡೈಮೆಂಡ್‌ ರಾಕೇಟ್‌’ “ನಾನೊಬ್ಬ ಕಳ್ಳ’ “ದಾರಿ ತಪ್ಪಿದ ಮಗ’ ಹೀಗೆ ಹಲವು ಚಿತ್ರಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದರು.

ನಾನು ಮಂಡ್ಯ ಬಿಡಲ್ಲ : ಮಂಡ್ಯ ಕೂಡ ನನ್ನನ್ನು ಬಿಡಲ್ಲ: M P ಸುಮಲತಾ

ಸುಮಾರು 45 ವರ್ಷಗಳ ಬಳಿಕ ಹೊಸತಂತ್ರಜ್ಞಾನದಲ್ಲಿ ಮತ್ತೆ ಬಿಡುಗಡೆಯಾಗುತ್ತಿರುವ “ಭಾಗ್ಯವಂತರು’ ರಾಜ್ಯಾದ್ಯಂತ ಸುಮಾರು 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

error: Content is protected !!