ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಹ್ಲಾದ್ ಜೋಶಿ ಸಿಎಂ- ಹೆಚ್‍ ಡಿಕೆ

Team Newsnap
1 Min Read

ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣರಿಗೇ ಸಿಎಂ ಪಟ್ಟ ನೀಡಲಾಗುತ್ತದೆ. ಪ್ರಹ್ಲಾದ್ ಜೋಶಿಗೆ ಪಟ್ಟ ಕಟ್ಟಲು ಸಂಘ ಪರಿವಾರ ಪ್ಲಾನ್ ಮಾಡಿದೆ ಎಂಬ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಜೆಡಿಎಸ್ ಪಂಚರತ್ನ ಯಾತ್ರೆಯನ್ನು ಟೀಕಿಸಿದ್ದರು. ಇದು ಪಂಚರತ್ನ ಅಲ್ಲ, ನವಗ್ರಹ ಯಾತ್ರೆ ಎಂದು ಹೇಳಿದ್ದರು. ಜೋಶಿ ಹೇಳಿಕೆಯಿಂದ ಸಿಡಿದೆದ್ದ ಎಚ್.ಡಿಕುಮಾರಸ್ವಾಮಿ ಇದೀಗ ವಾಗ್ದಾಳಿ ನಡೆಸಿದ್ದಾರೆ.600 ಉದ್ಯೋಗಿಗಳನ್ನು ವಜಾ ಮಾಡಿದ ʻಇನ್ಫೋಸಿಸ್ʼ

ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣರಿಗೆ ಮುಖ್ಯಮಂತ್ರಿ ಪಟ್ಟ. ಆರ್‍ಎಸ್‍ಎಸ್ ಸಭೆಯಲ್ಲಿ ಪ್ರಹ್ಲಾದ್ ಜೋಶಿ ಹೆಸರು ಪ್ರಸ್ತಾಪವಾಗಿದೆ ಎಂಬುದಾಗಿ ಹೇಳಿದ್ದಾರೆ.

ಬ್ರಾಹ್ಮಣರಲ್ಲಿ ಎರಡು ಮೂರು ವಿಧಗಳಿವೆ. ಪ್ರಹ್ಲಾದ್ ಜೋಶಿ ನಮ್ಮ ಹಳೆಯ ಬ್ರಾಹ್ಮಣರಲ್ಲ. ಅವರು ದೇಶ ಒಡೆಯುವವರು, ಕಟ್ಟುವವರಲ್ಲ. ಅವರು ಮಾರಾಠ ಪೇಶ್ವೆ ಕಾಲದ ಬ್ರಾಹ್ಮಣರು. ಅವರು ಶೃಂಗೇರಿ ಮಠಒಡೆದ ವರ್ಗದವರು. ಗಾಂಧಿ ಕೊಂದ ಬ್ರಾಹ್ಮಣರು ಇವರು. ಬಿಜೆಪಿಯ ಹುನ್ನಾರ ಆರ್‍ಎಸ್‍ಎಸ್ ಕುತಂತ್ರಕ್ಕೆ ಬಲಿಯಾಗಬೇಡಿ. ಇವರು ದೇಶವನ್ನು ಹಾಳು ಮಾಡ್ತಾರೆ ಎಂದು ಟೀಕೆ ಮಾಡಿದ್ದಾರೆ.

ದೆಹಲಿಯಲ್ಲಿ ಎಂಟು ಜನ ಉಪ ಮುಖ್ಯಮಂತ್ರಿ ಮಾಡುವ ಸಭೆ ಮಾಡಿದ್ದಾರೆ. ಅದು ನನ್ನ ಗಮನಕ್ಕೆ ಬಂದಿದೆ. ಎಂಟು ಜನ ಯಾರು ಅಂತ ಹೆಸರು ಬೇಕಾದ್ರೂ ಕೊಡ್ತೀನಿ ಎಂದು ಹೆಚ್‍ಡಿಕೆ ವಾಗ್ದಾಳಿ ನಡೆಸಿದ್ದಾರೆ.

Share This Article
Leave a comment