600 ಉದ್ಯೋಗಿಗಳನ್ನು ವಜಾ ಮಾಡಿದ ʻಇನ್ಫೋಸಿಸ್ʼ

Team Newsnap
1 Min Read
Infosys laid off 600 employees 600 ಉದ್ಯೋಗಿಗಳನ್ನು ವಜಾ ಮಾಡಿದ ʻಇನ್ಫೋಸಿಸ್ʼ

ಭಾರತೀಯ ಐಟಿ ದೈತ್ಯ ಇನ್ಫೋಸಿಸ್ ಸುಮಾರು 600 ಹೊಸ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ.

ಈ ಹೊಸ ಉದ್ಯೋಗಿಗಳನ್ನು ಆಂತರಿಕ ಫ್ರೆಶರ್ ಮೌಲ್ಯಮಾಪನ (ಎಫ್‌ಎ) ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ಕಾರಣ ಅವರನ್ನು ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ನಿಧನ

ಆಗಸ್ಟ್ 2022 ರಲ್ಲಿ ಕಂಪನಿಗೆ ಕೆಲಸಕ್ಕೆ ಸೇರಿದ ಉದ್ಯೋಗಿ ಈ ಬಗ್ಗೆ ಮಾತನಾಡಿದ್ದು, ‘ನಾನು ಕಳೆದ ವರ್ಷ ಆಗಸ್ಟ್‌ನಲ್ಲಿ ಇನ್ಫೋಸಿಸ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ ಮತ್ತು ನನಗೆ SAP ABAP ಸ್ಟ್ರೀಮ್‌ಗಾಗಿ ತರಬೇತಿ ನೀಡಲಾಯಿತು. ನನ್ನ ತಂಡದಲ್ಲಿದ್ದ 150 ಮಂದಿಯಲ್ಲಿ 60 ಮಂದಿ ಮಾತ್ರ ಎಫ್‌ಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಉಳಿದಂತೆ ನಮ್ಮೆಲ್ಲರನ್ನೂ ಎರಡು ವಾರಗಳ ಹಿಂದೆ ವಜಾಗೊಗೊಳಿಸಿದ್ದಾರೆ. ಹಿಂದಿನ ಬ್ಯಾಚ್‌ನಿಂದ (ಜುಲೈ 2022 ರಲ್ಲಿ ಆನ್‌ಬೋರ್ಡ್ ಆಗಿದ್ದ ಹೊಸಬರು), ಪರೀಕ್ಷೆಯಲ್ಲಿ ವಿಫಲರಾದ ನಂತರ 150 ರಲ್ಲಿ ಸುಮಾರು 85 ಫ್ರೆಶರ್‌ಗಳನ್ನು ವಜಾಗೊಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ಎರಡು ವಾರಗಳ ಹಿಂದೆ, ಎಫ್‌ಎ ಪರೀಕ್ಷೆಯಲ್ಲಿ ವಿಫಲರಾದ ನಂತರ 208 ಫ್ರೆಶರ್‌ಗಳನ್ನು ವಜಾಗೊಳಿಸಲಾಯಿತು. ಒಟ್ಟಾರೆಯಾಗಿ, ಕಳೆದ ಕೆಲವು ತಿಂಗಳುಗಳಲ್ಲಿ FA ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರ ಸುಮಾರು 600 ಫ್ರೆಶರ್‌ಗಳನ್ನು ವಜಾ ಮಾಡಲಾಗಿದೆ.

Share This Article
Leave a comment