ಅಕ್ರಮ ಹಣ ವರ್ಗಾವಣೆ: ಐಎಎಸ್ ಅಧಿಕಾರಿ ಪೂಜಾ , ಪತಿ ಅಭಿಷೇಕ್ ಬಂಧನ

Team Newsnap
1 Min Read

ಜಾರ್ಖಂಡನ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರನ್ನು ಇಡಿ ಬಂಧಿಸಿದೆ, ಮನಿ ಲಾಂಡರಿಂಗ್ ಮತ್ತು ನರೇಗಾ ನಿಧಿಯನ್ನು ದುರುಪಯೋಗದ ಆರೋಪದಲ್ಲಿ ಜಾರ್ಖಂಡ್ ರಾಜ್ಯ ಗಣಿ ಕಾರ್ಯದರ್ಶಿ ಹಾಗೂ 2000 ನೇ ಇಸ್ವಿ ಬ್ಯಾಚ್ ನ IAS ಅಧಿಕಾರಿ ಪೂಜಾ ಸಿಂಘಾಲ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು
15 ಗಂಟೆಗಳ ಕಾಲ ಸುದೀರ್ಘ ವಿಚಾರಣೆಯ ನಂತರ ಪಿಎಂಎಲ್‌ಎ ಸೆಕ್ಷನ್ ಅಡಿಯಲ್ಲಿ ಬಂಧಿಸಿದೆ.

ಪೂಜಾರ ಪತಿ ಅಭಿಷೇಕ್ ಝಾ ಅವರಿಗೆ ಸಮನ್ಸ್ ನೀಡಲಾಗಿದೆ ಇಡಿ ಕಚೇರಿಗೆ ಆಗಮಿಸಿದ ಒಂದು ಗಂಟೆಯ ನಂತರ ಅವರನ್ನು ಅಧಿಕೃತವಾಗಿ ಬಂಧಿಸಲಾಗಿದೆ. ಪೂಜಾ ಸಿಂಘಾಲ್‌ ಅವರ ಚಾರ್ಟರ್ಡ್ ಅಕೌಂಟೆಂಟ್ ಸುಮನ್ ಕುಮಾರ್ ಅವರನ್ನು 3 ದಿನಗಳ ಹಿಂದೆ ಬಂಧಿಸಲಾಗಿತ್ತು.

ಇದನ್ನು ಓದಿ : IAS ಮಹಿಳಾ ಅಧಿಕಾರಿಯ CA ಮನೆಯಲ್ಲಿ 18 ಕೋಟಿ ರೂ ವಶಕ್ಕೆ ಪಡೆದ ED

ವಿಚಾರಣೆಯ ಎರಡನೇ ದಿನದಂದು ಪೂಜಾ ಇಡಿ ಕೇಳಿದ ಪ್ರಶ್ನೆಗಳಿಗೆ ಹಾರಿಕೆ ಉತ್ತರ ನೀಡಿದ್ದರಿಂದ ಆಕೆಯನ್ನು ಬಂಧಿಸಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.

ಮೇ 6ರಂದು ಪೂಜಾ ಸಿಂಘಾಲ್ ಮತ್ತು ಉದ್ಯಮಿಯಾಗಿರುವ ಪೂಜಾ ಅವರ ಪತಿ ಅಭಿಷೇಕ್ ಝಾ ಮತ್ತಿತರರಿಗೆ ಸಂಬಂಧಿಸಿದ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಸುಮಾರು 19.31 ಕೋಟಿ ರು ನಗದು ಪತ್ತೆಯಾಗಿತ್ತು. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು.

Share This Article
Leave a comment