IAS ಮಹಿಳಾ ಅಧಿಕಾರಿಯ CA ಮನೆಯಲ್ಲಿ 18 ಕೋಟಿ ರು ವಶಕ್ಕೆ ಪಡೆದ ED

Team Newsnap
1 Min Read

ಜಾರ್ಖಂಡ್ ಐಎಎಸ್​ ಅಧಿಕಾರಿ ಪೂಜಾ ಸಿಂಘಾಲ್ ಮನೆ, ಕಚೇರಿ ಮೇಲೆ ಇ.ಡಿ.‌ ಅಧಿಕಾರಿಗಳು ದಾಳಿ ಮಾಡಿ, ಅಧಿಕಾರಿಯ ಚಾರ್ಟೆಡ್ ಅಕೌಂಟೆಂಟ್ (CA) ಮನೆಯಲ್ಲಿ 18 ಕೋಟಿ ರೂಪಾಯಿ ನಗದು ಪತ್ತೆ ಹಚ್ಚಿದ್ದಾರೆ.

ಈಪ್ರಕರಣದಲ್ಲಿ ಐಎಎಸ್ ಅಧಿಕಾರಿ ಪತಿ ಅಭಿಷೇಕ್ ಝೂರನ್ನು ಪೊಲೀಸರು ಬಂಧನ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೇ ಅಭಿಷೇಕ್ ಝೂ ಹಣಕಾಸಿನ ವ್ಯವಹಾರ ನೋಡಿಕೊಳ್ಳುವ ಸಿಎ ಸುಮನ್ ಕುಮಾರ್ ಅನ್ನು ಕೂಡ ಅಧಿಕಾರಿಗಳು ಬಂಧನ ಮಾಡಿದ್ದಾರೆ.

ಮಹಾತ್ಮಗಾಂಧಿ ನರೇಗಾ ಯೋಜನೆಯ ಹಣವನ್ನು ಬೇರೆಡೆ ವರ್ಗಾವಣೆ ಮಾಡಿದ ಆರೋಪ ಐಎಎಸ್​ ಈ ಅಧಿಕಾರಿ ಮೇಲಿದೆ.

ಆಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಇ.ಡಿ ಅಧಿಕಾರಿಗಳು ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ ಮತ್ತು ಪಂಜಾಬ್ ಸೇರಿದಂತೆ ನಾಲ್ಕು ರಾಜ್ಯಗಳ 18 ವಿವಿಧ ಸ್ಥಳಗಳಲ್ಲಿ ದಾಳಿಗಳನ್ನು ಮಾಡಿದ್ದರು.

ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ ಅವರ ಆಪ್ತವಲಯದ ಅಧಿಕಾರಿಯಾಗಿದ್ದರು ಎನ್ನಲಾಗಿದೆ.

Share This Article
Leave a comment