January 30, 2026

Newsnap Kannada

The World at your finger tips!

bollywood,actress,independence day

Sunny Leone visit to Hospet on 15th

ಅವಕಾಶ ಸಿಕ್ಕಾಗ ಖಂಡಿತಾ ಮಂಡ್ಯಕ್ಕೆ ಹೋಗುವೆ – ಸನ್ನಿಲಿಯೋನ್

Spread the love

ಬಾಲಿವುಡ್ ಬೆಡಗಿ ಸನ್ನಿಲಿಯೋನ್ ರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದ ಮಂಡ್ಯದ ಯುವಕರಿಗೆ ನಟಿ ಧನ್ಯವಾದ ತಿಳಿಸಿ ಅವಕಾಶ ಸಿಕ್ಕಾಗ ಮಂಡ್ಯಕ್ಕೆ ಹೋಗುವೆ ಎಂದು ಸನ್ನಿ ಹೇಳಿದ್ದಾರೆ.

ನಿಮ್ಮ ಕೆಲಸ ನನ್ನ ಹೃದಯ ಮುಟ್ಟಿದೆ. ತುಂಬಾ ಪ್ರೀತಿ ತೋರಿಸಿದ್ದೀರಿ ಇದಕ್ಕೆ ನಾನು ಕೃತಜ್ಞನಾಗಿದ್ದೇನೆ. ನಾನು ಮಂಡ್ಯ ಅಭಿಮಾನಿಗಳನ್ನು ಯಾವಾಗ ಭೇಟಿ ಮಾಡ್ತೀನಿ ಅಂತ ಗೊತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ಭೇಟಿ ಆದ್ರೆ ಖಂಡಿತ ಅವರೊಂದಿಗೆ ಇರೋ ಫೋಟೋಗಳನ್ನು ಹಂಚಿಕೊಳ್ಳುತ್ತೇವೆ ಎಂದರು.

ಬೆಂಗಳೂರಿನಲ್ಲಿ ನಡೆದ ಚಾಂಪಿಯನ್ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ಸನ್ನಿ ಲಿಯೋನ್ ಭಾಗಿಯಾಗಿದ್ದರು.

ನಿಮ್ ಫೋಟೋ ತೋರಿಸಿ ಮಟನ್​ ರೇಟ್​ನಲ್ಲಿ ಡಿಸ್ಕೌಂಟ್ ಕೊಡ್ತಾರೆ? ಎಂಬ ಪ್ರಶ್ನೆಗೆ ಉತ್ತರಿಸಿದ ಸನ್ನಿ ಲಿಯೋನ್.. ಮೊದಲು ನಾನು ಸಸ್ಯಹಾರಿ. ಪ್ರಾಣಿಗಳನ್ನು ಕೊಂದು ತಿನ್ನೊದು ಬಗ್ಗೆ ನಂಬಿಕೆ ಇಲ್ಲ. ಆದರೆ ಅವರಿಗೆ ಆ ಕೆಲಸ ಇಷ್ಟವಾಗಿ ಮಾಡ್ತಿದ್ದಾರೆ ಒಳ್ಳೆದಾಗಲಿ ಅಷ್ಟೇ ಎಂದರು.

ಇದನ್ನು ಓದಿ : SSLC ನಂತರ ವಿದ್ಯೆ, ಉದ್ಯೋಗದ ಬೆಳಕು

ಇದೇ ವೇಳೆ ಸಿನಿಮಾ ತಂಡ ಸ್ಟೇಜ್​ ಮೇಲೆ ಸನ್ನಿ ಬರ್ತ್​​ಡೇ ಆಚರಣೆ ಮಾಡಿತ್ತು. ಶಿವರಾಜ್ ಶಿಂಧೆ ನಿರ್ದೇಶನದ ಚಾಂಪಿಯನ್ ಸಿನಿಮಾದಲ್ಲಿ ಅಧಿತಿ ಪ್ರಭುದವ ನಾಯಕಿಯಾಗಿ ನಟಿಸಿದ್ದು, ಸಚಿನ್ ಧನಪಾಲ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಂಡಿದ್ದಾರೆ.

error: Content is protected !!