ನಟಿ ರಮ್ಯಾ ವಿರುದ್ಧ ಕಾಂಗ್ರೆಸ್ ಹಲವು ಕಾರ್ಯಕರ್ತರು, ನಾಯಕರೇ 8 ಕೋಟಿ ರೂಪಾಯಿ ವಂಚಿಸಿ ಕಾಂಗ್ರೆಸ್ ಬಿಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇದನ್ನು ಓದಿ : ರಮ್ಯಾ ನೀವು ಎಷ್ಟು ದಿನ ಎಲ್ಲಿದ್ದಿರಿ ? KPCC ಸೋಷಿಯಲ್ ಮೀಡಿಯಾ ಮುಖ್ಯಸ್ಥ ನಾಯ್ಡು ಪ್ರಶ್ನೆ
ಈ ಆರೋಪದಿಂದ ತೀವ್ರ ನೊಂದಿರುವ ರಮ್ಯಾ, ಈ ಆರೋಪ ಹೊತ್ತು ನನ್ನ ಮುಂದಿನ ಬದುಕು ನಡೆಸುವಂತೆ ಆಗಬಾರದು ಅಂತಾ ಅವರು ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಮ್ಯಾ, ನಾನು ಕಾಂಗ್ರೆಸ್‌ನ ತ್ಯಜಿಸಿದ ನಂತರ ‘ಅವಳು 8 ಕೋಟಿ ಕಾಂಗ್ರೆಸ್‌ಗೆ ವಂಚಿಸಿದಳು ಮತ್ತು ಓಡಿಹೋದಳು’ ಎಂಬ ಸುದ್ದಿಯನ್ನು ಹಲವು ವಾಹಿನಿಗಳಲ್ಲಿ ಸುದ್ದಿ ಮಾಡಿದ್ದಾರೆ.
ನನ್ನ ವಿಶ್ವಾಸಾರ್ಹತೆಯನ್ನು ನಾಶಮಾಡುವ ಪ್ರಯತ್ನ ಮಾಡಲಾಯಿತು. ನಾನು ಓಡಿಹೋಗಲಿಲ್ಲ. ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದೇನೆ. ನಾನು ಪಕ್ಷಕ್ಕೆ 8 ಕೋಟಿ ರು ವಂಚನೆ ಮಾಡಿಲ್ಲ. ಮೌನವಾಗಿರುವುದೇ ನನ್ನ ತಪ್ಪಾ ? . ಕೆ.ಸಿ. ವೇಣುಗೋಪಾಲ್ ಅವರಿಗೆ ವಿನಮ್ರ ವಿನಂತಿ. ನೀವು ಮುಂದೆ ಕರ್ನಾಟಕಕ್ಕೆ ಬಂದಾಗ ದಯವಿಟ್ಟು ಈ ಕನ್ನಡ ಮಾಧ್ಯಮಗಳಿಗೆ ಸ್ಪಷ್ಟಪಡಿಸಿ. ಕನಿಷ್ಠ ಪಕ್ಷ ನೀವು ನನಗಾಗಿ ಇದೊಂದು ಕೆಲಸ ಮಾಡಿ ಎಂದಿದ್ದಾರೆ.
ಇದನ್ನು ಓದಿ : ಕಾಂಗ್ರೆಸ್ ನವರು ಒಂದಾಗಿ ಚುನಾವಣೆ ಎದುರಿಸಬೇಕು -ಡಿಕೆಶಿ ಗೆ ರಮ್ಯಾ ಪಾಠ
ನಾನು ನನ್ನ ಜೀವನದುದ್ದಕ್ಕೂ ಈ ನಿಂದನೆ ಮತ್ತು ಟ್ರೋಲಿಂಗ್‌ನೊಂದಿಗೆ ಬದುಕಬೇಕಾಗಿಲ್ಲ ಎಂದು ರಮ್ಯಾ ವಿನಂತಿಸಿಕೊಂಡಿದ್ದಾರೆ.
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
- ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
- ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
- ಶಾಲಾ ಕೊಠಡಿಯಲ್ಲಿ ಯುವತಿಯ ಅತ್ಯಾಚಾರ: ಆರೋಪಿ ಬಂಧನ
- ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು 8.41 ಕೋಟಿ ಚಿನ್ನಾಭರಣ ವಂಚನೆ: ಎಫ್ಐಆರ್ ದಾಖಲು
More Stories
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
ಶಾಲಾ ಕೊಠಡಿಯಲ್ಲಿ ಯುವತಿಯ ಅತ್ಯಾಚಾರ: ಆರೋಪಿ ಬಂಧನ