July 7, 2022

Newsnap Kannada

The World at your finger tips!

a0910e8e b8d0 4c22 8670 8afe65ea2220

4 ಸಾವಿರ ರು ಲಂಚ ಪಡೆದ ಗುಂಡ್ಲುಪೇಟೆ RI ಶ್ರೀನಿವಾಸ್ ಮೂರ್ತಿ ACB ಬಲೆಗೆ

Spread the love

ಗುಂಡ್ಲುಪೇಟೆ ತಾಲೂಕು ಕಸಬಾ ಹೋಬಳಿ ಕಂದಾಯ ನಿರೀಕ್ಷಕರೊಬ್ಬರು ಕೃಷಿಯೇತರ ಭೂ ಪರಿವರ್ತನೆಗಾಗಿ 4 ಸಾವಿರ ರು ಲಂಚ ಸ್ವೀಕರಿಸುವ ಮುನ್ನ ಭ್ರಷ್ಟಾಚಾರ ನಿಗ್ರಹ ದಳದ (ACB)ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಕಂದಾಯ ನಿರೀಕ್ಷಕ ಶ್ರೀನಿವಾಸ ಮೂರ್ತಿ ಎಂಬುವವರು ಭೂ ಪರಿವರ್ತನೆಯ ಪರಿಶೀಲನೆಗಾಗಿ ಬಂದ ಅರ್ಜಿದಾರರೊಬ್ಬರ ಬಳಿ 4 ಸಾವಿರ ರು ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಅರ್ಜಿದಾರರು ಈ ಕುರಿತಂತೆ ಚಾಮರಾಜನಗರ ACB ಅಧಿಕಾರಿಗಳಿಗೆ ದೂರು ನೀಡಿದ ಬಳಿಕ ಮೈಸೂರು ವಲಯದ ACB ಎಸ್ಪಿ V J ಸಜೀತ್ ಮಾರ್ಗದರ್ಶನದಲ್ಲಿ ಅಧಿಕಾರಿಗಳ ತಂಡ ಗುರುವಾರ ಕಾರ್ಯಾಚರಣೆ ನಡೆಸಿ ಕಂದಾಯ ಅಧಿಕಾರಿಯನ್ನು ಬಲೆಗೆ ಹಾಕಿಕೊಂಡರು.

ಅಧಿಕಾರಿ ಪಡೆದಿದ್ದ ಲಂಚದ ಹಣವೂ ಸೇರಿದಂತೆ ಆ ಅಧಿಕಾರಿಯನ್ನು ACB ಯವರು ವಶಕ್ಕೆ ಪಡೆದುಕೊಂಡಿದ್ದಾರೆ.

error: Content is protected !!