January 10, 2025

Newsnap Kannada

The World at your finger tips!

WhatsApp Image 2022 01 25 at 3.52.54 PM

ನಾನು ಜೆಡಿಎಸ್ ಮುಟ್ಟುವುದಿಲ್ಲ – ರಮೇಶ್​​ ಜಾರಕಿಹೊಳಿ ಸ್ಪಷ್ಟ ಮಾತು

Spread the love

ಬೆಂಗಳೂರು: ನಮ್ಮ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ಸಂಬಂಧ ಚೆನ್ನಾಗಿದೆ, ನಾನು ಯಾವುದೇ ಕಾರಣಕ್ಕೂ ಜೆಡಿಎಸ್​​ ಟಚ್​​ ಮಾಡಲ್ಲ ಎಂದು ಮಾಜಿ ಸಚಿವ ರಮೇಶ್​​ ಜಾರಕಿಹೊಳಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತಾಡಿದ ರಮೇಶ್​​ ಜಾರಕಿಹೊಳಿ, ನನ್ನ ಸಂಪರ್ಕದಲ್ಲಿ 16 ಮಂದಿ ಕಾಂಗ್ರೆಸ್​ ಶಾಸಕರು ಮಾತ್ರವಲ್ಲ 3 ಮಂದಿ ಜೆಡಿಎಸ್​​ ನವರು ಇದ್ದಾರೆ. ಆದರೆ, ನಾನು ಜೆಡಿಎಸ್​​ ಟಚ್​ ಮಾಡುವುದಿಲ್ಲ ಎಂದರು.

ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ನನ್ನ ಆತ್ಮೀಯರು. ನಮ್ಮಿಬ್ಬರ ನಡುವಿನ ಸಂಬಂಧ ಚೆನ್ನಾಗಿದೆ. ಹೀಗಾಗಿ ಜೆಡಿಎಸ್​ ಶಾಸಕರನ್ನು ಟಚ್​ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

ಹೈಕಮಾಂಡ್​ ಒಪ್ಪಿಗೆ ನೀಡಿದರೆ 16 ಮಂದಿ ಕಾಂಗ್ರೆಸ್​ ಶಾಸಕರನ್ನು ಕರೆದುಕೊಂಡು ಬರ್ತೀನಿ. ಅಂದು ನಾವು ಸಿದ್ದರಾಮಯ್ಯ್ಗಗೆ ಬೇಕಿರಲಿಲ್ಲ. ಈಗ್ಯಾಕೆ ಬೇಕು ಕಾಂಗ್ರೆಸ್​ಗೆ? ಮುಂದೆ ಸಿಎಂ ಬಸವರಾಜ್​ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.

Copyright © All rights reserved Newsnap | Newsever by AF themes.
error: Content is protected !!