ಐಷಾರಮಿ ಬದುಕಿಗೆ ಒಗ್ಗಿ ಹೋಗಿದ್ದ ಕಲಬುರಗಿ ದಿವ್ಯಾ ಹಾಗರಗಿ ಸದಾ ಎಸಿ ಕೋಣೆಯಲ್ಲಿ ಮಲಗುತ್ತಿದ್ದರು. ಆದರೆ ದಿವ್ಯಾ ಕಳೆದ ತಡರಾತ್ರಿವರಗೆ ಫ್ಯಾನ್ ಕೆಳಗೆ ನಿದ್ದೆ ಬರದೆ ಪರದಾಡಿದ್ದಾರೆ. ಅಲ್ಲದೇ ನಿನ್ನೆ ಮಧ್ಯಾಹ್ನ ಊಟವನ್ನು ಕೂಡಾ ನಿರಾಕರಿಸಿದ್ದರು. ಆದರೆ ರಾತ್ರಿ ಸ್ವಲ್ಪ ಊಟ ಮಾಡಿದ್ದಾರೆ.
PSI ನೇಮಕಾತಿ ಅಕ್ರಮ ಪ್ರಕರಣದ ಕಿಂಗ್ ಪಿನ್ ದಿವ್ಯಾ ಹಾಗೂ ಅವರ ತಂಡ ಈಗ CID ಪೋಲಿಸ್ ಕಸ್ಟಡಿಯಲ್ಲಿ ಇದ್ದಾರೆ.
ಕೋಟಿ, ಕೋಟಿ ಹಣವಿದ್ದರೂ ಅಕ್ರಮದ ಜಾಲಕ್ಕೆ ಸಿಲುಕಿರುವ ದಿವ್ಯಾ ಹಾಗರಗಿ ಇದೀಗ ತಮ್ಮನ್ನು ಭೇಟಿಯಾದವರ ಮುಂದೆ ಪಶ್ಚಾತ್ತಾಪದ ಮಾತುಗಳನ್ನಾಡುತ್ತಿದ್ದಾರೆ.
ಪೋಲಿಸರಿಗೆ ಯಾವುದೇ ಮಾಹಿತಿ ಹಾಗೂ ಸಾಕ್ಷ್ಯ ಸಿಗದಂತೆ ಮಾಡಲು ಆಕೆ ತಾನು ಬಳಕೆ ಮಾಡುತ್ತಿದ್ದ ಮೊಬೈಲ್ ಅನ್ನು ಒಡೆದು ಹಾಕಿದ್ದಾಳೆ. ಪೋಲಿಸರ ಮುಂದೇ ಈ ಘಟನೆ ನಡೆದಿದೆ. ಉಳಿದ 6 ಮಂದಿ ಆರೋಪಿಗಳ ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಲಬುರಗಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ದಿವ್ಯಾ ಹಾಗರಗಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇವೆಲ್ಲವೂ ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಯಾಗಿದೆಯಂತೆ.
ಪಿಎಸ್‍ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಾಥ್ ನೀಡಿರುವ ಆರೋಪದಡಿ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿಯನ್ನು ಶುಕ್ರವಾರ ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಸದ್ಯ 11 ದಿನಗಳ ಕಾಲ ದಿವ್ಯಾ ಹಾಗರಗಿಯನ್ನು ನ್ಯಾಯಾಲಯ ಸಿಐಡಿ ಕಸ್ಟಡಿಗೆ ನೀಡಿದೆ.
ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ದಿವ್ಯಾ ಹಾಗರಗಿ ಕಳೆದ 18 ದಿನಗಳಿಂದ ತಲೆ ಮರೆಸಿಕೊಂಡಿದ್ದರು. ಆದರೆ ಸಿಐಡಿ ಅಧಿಕಾರಿಗಳು ಶುಕ್ರವಾರ ಮಹಾರಾಷ್ಟ್ರದ ಪುಣೆಯ ಹೋಟೆಲ್‍ವೊಂದರ ಬಳಿ ದಿವ್ಯಾ ಹಾಗರಗಿಯನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ದಿವ್ಯಾ ಹಾಗರಗಿ ಕಳೆದ ರಾತ್ರಿ ಮಹಿಳಾ ನಿಲಯದಲ್ಲಿಯೇ ಕಾಲ ಕಳೆದಿದ್ದಾರೆ.
- ಡಾ. ವೀರೇಂದ್ರ ಹೆಗ್ಗಡೆ, ಇಳಯರಾಜ ಸೇರಿ ನಾಲ್ವರು ರಾಜ್ಯಸಭೆಗೆ ನಾಮ ನಿರ್ದೇಶನ
- KRSಗೆ 30 ಸಾವಿರ ಕ್ಯೂಸೆಕ್ ಒಳಹರಿವು – ಪ್ರವಾಹದ ಮುನ್ನೆಚ್ಚರಿಕೆ : ಆಣೆಕಟ್ಟೆ ಭರ್ತಿಗೆ 9 ಅಡಿ ಬಾಕಿ
- 18 ದಿನಗಳಲ್ಲಿ 8 ಬಾರಿ ತಾಂತ್ರಿಕ ದೋಷ: ಸ್ಪೈಸ್ ಜೆಟ್ ಗೆ ಡಿಜಿಸಿಎ ನೊಟೀಸ್
- ವೆಸ್ಟ್ ಇಂಡೀಸ್ ತಂಡಕ್ಕೆ ಟೀಂ ಇಂಡಿಯಾ ಪ್ರಕಟ : ಶಿಖರ್ ಧವನ್ ನಾಯಕ – ಕೊಹ್ಲಿ, ರೋಹಿತ್ ಗೆ ವಿಶ್ರಾಂತಿ
- ಕೇಂದ್ರ ಸಚಿವ ಸ್ಥಾನಕ್ಕೆ ಮುಖ್ತಾರ್ ಅಬ್ಬಾಸ್ ನಖ್ವಿ, ಆರ್ಸಿಪಿ ಸಿಂಗ್ ರಾಜೀನಾಮೆ
More Stories
ಮೈಸೂರು : ಚಾಮುಂಡಿ ಬೆಟ್ಟಕ್ಕೆ ರೋಪ್ವೇ ನಿರ್ಮಾಣ ಯೋಜನೆ ಕೈಬಿಟ್ಟ ಸರ್ಕಾರ
ಗೃಹ ಬಳಕೆಯ ಸಿಲಿಂಡರ್ 50 ರು ಏರಿಕೆ- ಇಂದಿನಿಂದಲೇ ಹೊಸ ದರ ಜಾರಿ
DOLO 650 ಮಾತ್ರೆ ಉತ್ಪಾದಕ ಕಂಪನಿಗೆ ಶಾಕ್: ಬೆಂಗಳೂರು ಸೇರಿ 40 ಕಡೆ ಐಟಿ ದಾಳಿ