ಅಧಿವೇಶನದಲ್ಲಿ ಹೈಡ್ರಾಮ: ಬಿಜೆಪಿಯ 10 ಶಾಸಕರು ಅಮಾನತು- ಎಳೆದು ತಂದ ಮಾರ್ಶಲ್‌ಗಳು – ಯತ್ನಾಳ್ ಅಸ್ವಸ್ಥ

Team Newsnap
1 Min Read
HYDRAMA IN CONGRESS: 10 BJP MLAs Suspended - Marshals Brought - Yatnal Unwellಅಧಿವೇಶದಲ್ಲಿ ಹೈಡ್ರಾಮ: ಬಿಜೆಪಿಯ 10 ಶಾಸಕರು ಅಮಾನತು

ಬೆಂಗಳೂರು: ವಿಧಾನಸಭೆಯಲ್ಲಿ ಅಸಭ್ಯವಾಗಿ ವರ್ತನೆ ತೋರಿದ ಆರೋಪದ ಮೇಲೆ 10 ಮಂದಿ ಬಿಜೆಪಿ ಸದಸ್ಯರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.

ಈ ನಡುವೆ ಅಮಾನತ್ತು ಮಾಡಲಾದ ಶಾಸಕರನ್ನು ಮಾರ್ಶಲ್‌ಗಳು ಎತ್ತುಕೊಂಡು ಬಲವಂತವಾಗಿ ಹೊರ ಹಾಕಿದರು.

ಸದನದಿಂದ ಹೊತ್ತುಕೊಂಡು ಹೋಗುವಾಗ ಶಾಸಕ ಬಸವರಾಜ ಪಾಟೀಲ್ ಯತ್ನಾಳ ಅವರು ಕುಸಿದು ಬಿದ್ದು ಅಸ್ವಸ್ಥರಾದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು

ವಿಧಾನಸಭೆಯಲ್ಲಿ ಬುಧವಾರ ಬೆಳಿಗ್ಗೆ ಸಚಿವ ಹೆಚ್ ಕೆ ಪಾಟೀಲ್ ಅವರು ಕೆಲವು ಮಸೂದೆಗಳ ಪ್ರಸ್ತಾವನೆಯನ್ನು ಮಂಡಿಸಿದರು. ಆವೇಳೆ ಬಿಜೆಪಿ ಸದಸ್ಯರು ಬಾವಿಗೆ ಇಳಿದು ಪ್ರತಿಭಟನೆ, ಕೂಗಾಟ ಆರಂಭಿಸಿದರು. ನಂತರ ಮಸೂದೆಯ ಕಾಗದ ಪತ್ರಗಳನ್ನು ಹರಿದು ಬೀಸಾಡಿ ಸ್ಪೀಕರ್ ಆಸನದತ್ತ ನುಗ್ಗಿ ಸಭೆಯನ್ನು ಗೊಂದಲದ ಗೂಡು ಮಾಡಿದಾಗ ಸ್ಪೀಕರ್ ಸಭೆಯನ್ನು ನಿಯಂತ್ರಣಕ್ಕೆ ತರಲು 10 ಮಂದಿ ಬಿಜೆಪಿ ಸದಸ್ಯರನ್ನು ಅಮಾನತ್ತು ಮಾಡಿದರು. ಮಾರ್ಶಲ್ ಗಳು ಶಾಸಕರನ್ನು ಹೊತ್ತುಕೊಂಡು ಹೋದರು

ಡಾ.ಸಿಎನ್ ಅಶ್ವತ್ಥನಾರಾಯಣ್, ವಿ.ಸುನೀಲ್ ಕುಮಾರ್, ಆರ್ ಅಶೋಕ್, ವೇದವ್ಯಾಸ ಕಾಮತ್, ಯಶಪಾಲ್ ಸುವರ್ಣ, ಧೀರಜ್ ಮುನಿರಾಜ್, ಉಮರ್ ನಾಥ್ ಕೋಟ್ಯನ್,ಅರವಿಂದ್ ಬೆಲ್ಲದ್, ಅರಗ ಜ್ಞಾನೇಂದ್ರ, ವೈ ಭರತ್ ಶೆಟ್ಟಿ ಅವರನ್ನು ಸದನ ಮುಗಿಯುವವರೆಗೂ ಅಮಾನತುಗೊಳಿಸುವ ಕರ್ನಾಟಕ ವಿಧಾನಸಭೆ ಕಾರ್ಯವಿಧಾನದ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸುವಂತೆ ವಿಧಾನಸಭೆಯಲ್ಲಿ ಸಚಿವ ಹೆಚ್ ಕೆ ಪಾಟೀಲ್ ಅವರು ಮಂಡಿಸಿದರು.10 ಸಾವಿರ ರು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಾಲೂಕು ಕಚೇರಿ ನೌಕರ

ಈ ವೇಳೆ ಸ್ಪೀಕರ್ ಯು.ಟಿ ಖಾದರ್ ವಿಷಾಧದಿಂದ ಮತಕ್ಕೆ ಹಾಕುತ್ತಿದ್ದೇನೆ. ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಈ ಅಧಿವೇಶನದ ಮುಗಿಯುವವರೆಗೂ ಸದನದಿಂದ ಅಮಾನತುಗೊಳಿಸಿ ಆದೇಶಿಸಿದರು.

Share This Article
Leave a comment