10 ಸಾವಿರ ರು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಾಲೂಕು ಕಚೇರಿ ನೌಕರ

Team Newsnap
1 Min Read

ಮದ್ದೂರು:ರೈತರಿಂದ 10 ಸಾವಿರ ರು ಲಂಚ ಸ್ವೀಕರಿಸುತ್ತಿದ್ದಾಗ ತಾಲೂಕು ಕಚೇರಿಯ ನೌಕರರೊಬ್ಬರು ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಮದ್ದೂರಿನಲ್ಲಿತಾಲೂಕು ಕಚೇರಿಯ ಹಕ್ಕು ದಾಖಲಾತಿ ತಿದ್ದುಪಡಿ (ಆರ್ ಆರ್ ಟಿ) ಶಾಖೆಯ ಮಂಜುನಾಥ್ ಎಂಬ ನೌಕರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಬಿದರಮೇಳೆ ಕೊಪ್ಪಲು ಗ್ರಾಮದ ಮೋಹನ್ ರ ಜಮೀನು ವಿವಾದ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿದೆ , ಅದರ ತುರ್ತು ವಿಲೇವಾರಿಗಾಗಿ ಮಂಜುನಾಥರ ಬಳಿ ಹೋಗಿದ್ದಾಗ ಹಣ ನೀಡಬೇಕಾಗುತ್ತದೆ ಎಂದು ಹೇಳಿದ್ದರು.

ಬಿದರ ಮೇಳೆಕೊಪ್ಪಲು ಗ್ರಾಮದ ಸರ್ವೇ ನಂಬರ್ 226 ಜಮೀನಿನ ವಿವಾದ ಉಪ ವಿಭಾಗಾಧಿಕಾರಿ ಕೋರ್ಟ್ ನಲ್ಲಿದೆ, ಈ ಸಂಬಂಧ ಹಣ ಕೇಳಿದ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ಮೋಹನ್ ದೂರು ಸಲ್ಲಿಸಿದ್ದರು.

ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ತಾಲೂಕು ಕಚೇರಿಯ ಹೊರಭಾಗದಲ್ಲಿ ಅಂಗಡಿ ಮಳಿಗೆ ಬಳಿ ಮೋಹನ್ ರವರಿಂದ 10000 ರೂ ಹಣ ಪಡೆಯುತ್ತಿದ್ದಾಗ ಮಂಜುನಾಥ್ ಲೋಕಾಯುಕ್ತ ವಶಕ್ಕೆ ಸಿಕ್ಕಿ ಬಿದ್ದಿದ್ದಾರೆ.ಬೆಂಗಳೂರಿನಲ್ಲಿ ಭಾರೀ ಸ್ಫೋಟಕ್ಕೆ ಸಂಚು – ಐದು ಮಂದಿ ಶಂಕಿತ ಉಗ್ರರ ಬಂಧನ

ಲೋಕಾಯುಕ್ತ ಎಸ್ ಪಿ ಸುಜಿತ್ ರವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಡಿವೈಎಸ್ ಪಿ ಸುನಿಲ್ ಕುಮಾರ್,
ಇನ್ ಸ್ಪೆಕ್ಟರ್ ಪ್ರಕಾಶ್, ಸಿಬ್ಬಂದಿಗಳಾದ ಶಂಕರ್, ಶರತ್,ಮಹಾದೇವಯ್ಯ ,ಮಹಾದೇವಸ್ವಾಮಿ, ನಂದೀಶ್ ,ಯೋಗೇಶ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Share This Article
Leave a comment