ಬೆಂಗಳೂರಿನಲ್ಲಿ ಭಾರೀ ಸ್ಫೋಟಕ್ಕೆ ಸಂಚು – ಐದು ಮಂದಿ ಶಂಕಿತ ಉಗ್ರರ ಬಂಧನ

Team Newsnap
1 Min Read
Plot of massive explosion in Bangalore -5 suspected terrorists arrested ಬೆಂಗಳೂರಿನಲ್ಲಿ ಭಾರೀ ಸ್ಫೋಟಕ್ಕೆ ಸಂಚು – ಐದು ಮಂದಿ ಶಂಕಿತ ಉಗ್ರರ ಬಂಧನ

ಬೆಂಗಳೂರು: ಉಗ್ರರ ಜೊತೆ ಸಂಪರ್ಕ ಸಾಧಿಸಿ ಬೆಂಗಳೂರಿನಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿಯ ಮೇರೆಗೆ ಸಿಸಿಬಿ ಬಂಧಿಸಿದೆ.

ಸುಹೇಲ್ , ಉಮರ್, ತಬ್ರೇಜ್ , ಮುದಾಸಿರ್ , ಫೈಜಲ್ ರಬ್ಬಾನಿಯನ್ನು ಬಂಧಿಸಲಾಗಿದೆ.

ತಂಡದ ನಾಯಕ ಜುನೈದ್ ನಾಪತ್ತೆಯಾಗಿದ್ದಾನೆ. ಶಂಕಿತ ಉಗ್ರರೆಲ್ಲರೂ ಬೆಂಗಳೂರಿನ ನಿವಾಸಿಗಳು. ಜನ ಸಂದಣಿ ಇರುವ ಪ್ರದೇಶದಲ್ಲಿ ಬ್ಲ್ಯಾಸ್ಟ್ ನಡೆಸಲು ಇವರು ತಯಾರಿ ನಡೆಸಿದ್ದರು.

ಎನ್‌ಐಎ ಮತ್ತು ಸಿಸಿಬಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದೆ.

ಶಂಕಿತರ ಮೇಲೆ ಹೆಬ್ಬಾಳ ಠಾಣೆಯಲ್ಲಿ ಸಿಸಿಬಿ ಪ್ರಕರಣ ದಾಖಲಿಸಿದೆ. ವಶಕ್ಕೆ ಪಡೆದ ಶಂಕಿತರನ್ನು ಆಡುಗೋಡಿಯ ಟೆಕ್ನಿಕಲ್ ಸೆಲ್‌ನಲ್ಲಿ ವಿಚಾರಣೆ ನಡೆಸುತ್ತಿದೆ.

ಆರ್‌ಟಿ ನಗರದ ಸುಲ್ತಾಲ್ ಪಾಳ್ಯದ ಸೊಹೈಲ್ ಮನೆ ಬಳಿ ಶಂಕಿತರು ಸಭೆ ನಡೆಸುತ್ತಿದ್ದಾಗ ಐವರನ್ನು ಬಂಧಿಸಲಾಗಿದೆ.ಇಂದು ಸಂಜೆಯಿಂದಲೇ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಕಾರ್ಯ ಆರಂಭ : ಸಮಗ್ರ ಮಾಹಿತಿ ಇಲ್ಲಿದೆ

ಎರಡು ಸ್ಯಾಟಲೈಟ್‌ ಫೋನ್‌, 7 ಕಂಟ್ರಿ ಮೇಡ್ ಪಿಸ್ತೂಲ್ , 42 ಸಜೀವ ಗುಂಡುಗಳು ಬಂಧಿತರಿಂದ ವಶ ಪಡಿಸಿಕೊಳ್ಳಲಾಗಿದೆ.

Share This Article
Leave a comment