February 25, 2026

Newsnap Kannada

The World at your finger tips!

seena

ಪತ್ನಿಗೆ ಕೆಎಎಸ್ ಮಾಡಿಸಿ, ತಹಶೀಲ್ದಾರ್ ಹುದ್ದೆ ಸಿಕ್ಕ 6 ತಿಂಗಳಲ್ಲಿ ಪತಿ ಕೊರೋನಾಗೆ ಬಲಿ‌

Spread the love

ನಾನು ಓದಿಲ್ಲ. ನೀನಾದರೂ ಓದು ಎಂದು ಪತ್ನಿಯನ್ನು ಕೆಎಎಸ್​ ಮಾಡಿಸಿ ತಹಶೀಲ್ದಾರ್ ಹುದ್ದೆ ಸಿಕ್ಕ 6 ತಿಂಗಳಲ್ಲಿ ಪತಿ ಕೊರೊನಾಗೆ ಬಲಿ ಘಟನೆ ಶಿವಮೊಗ್ಗ ದಲ್ಲಿ ನಡೆದಿದೆ.

ಪತ್ನಿ ಅಶ್ವಿನಿ ಶಿಕ್ಷಣಕ್ಕೆ ಪ್ರೇರಣೆ ನೀಡಿ ಕೆಎಎಸ್​​ ಓದಿಸಿದ್ದ ಪತಿ ಶಿವಮೊಗ್ಗದ ಸವಾರ್ ಲೈನ್ ರಸ್ತೆಯ ಸೀನಾ ಅಲಿಯಾಸ್ ಕಡ್ಡಿ ಸೀನಾ ಮೃತ ದುರ್ದೈವಿ.

ತನ್ನ ಅಕ್ಕನ ಮಗಳು ಅಶ್ವಿನಿಯನ್ನು ಮದುವೆಯಾಗಿದ್ದ ಸೀನಾ. ನಾನಂತೂ ಓದಿಲ್ಲ, ಆದ್ದರಿಂದ ಚೆನ್ನಾಗಿ ಓದುತ್ತಿದ್ದ ತನ್ನ ಹೆಂಡತಿಯನ್ನು ಕೆಎಎಸ್ ಅಧಿಕಾರಿಯನ್ನಾಗಿಸಬೇಕು‌ ಎಂದು ಕನಸುಕಂಡಿದ್ದ.

ಪತಿಯ ಬೆಂಬಲ ಪಡೆದ ಅಶ್ವಿನಿ ಕೂಡ ಮದುವೆ ಮುನ್ನ ಕೆಎಎಸ್​ ಪರೀಕ್ಷೆ ಎದುರಿಸಲು ಆರಂಭಿಸಿದ್ದ ಪೂರ್ವಬಾವಿ ತರಬೇತಿಯನ್ನು ಮುಂದುವರಿಸಿದ್ದರು. ಅಲ್ಲದೇ ಮದುವೆಯ ಬಳಿಕವೂ ಪರೀಕ್ಷೆಗೆ ಅಗತ್ಯವಿದ್ದ ತರಬೇತಿಯನ್ನು ಪಡೆದುಕೊಂಡು ಪರೀಕ್ಷೆ ಎದುರಿಸಿದ್ದರು. ಕಠಿಣ ಶ್ರಮದ ಫಲವಾಗಿ ಕಳೆದ ವರ್ಷ ಅಶ್ವಿನಿ ಕೆಎಎಸ್ ಪರೀಕ್ಷೆ ಪಾಸ್ ಮಾಡಿ ಆರು ತಿಂಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ತಹಶೀಲ್ದಾರ್ ಹುದ್ದೆಯನ್ನು ಪಡೆದುಕೊಂಡಿದ್ದರು.

ಆದರೆ ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಸೀನಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪತ್ನಿ 6 ತಿಂಗಳ ಕಾಲ ಅಧಿಕಾರಿಯಾಗಿ ಕೆಲಸ ಮಾಡಿದ್ದನ್ನು ಮಾತ್ರ ಕಂಡ ಪತಿ ಸೀನಾ, ಸಂಸಾರ ಆರಂಭಿಸುವ ಮೊದಲೇ ಆಕೆಯನ್ನು ಬಿಟ್ಟು ತೆರಳಿದ್ದಾನೆ.

error: Content is protected !!