ಫ್ಲೋರಿಡಾಗೆ ಅಪ್ಪಳಿಸಿದ ಭಾರಿ ಚಂಡಮಾರುತ: ನೂರಾರು ಮನೆಗಳಿಗೆ ಹಾನಿ

Team Newsnap
1 Min Read

ಅಮೇರಿಕಾದ ಫ್ಲೋರಿಡಾದ ನೈಋತ್ಯ ಭಾಗಕ್ಕೆ ಭೀಕರ ಇಯಾನ್ ಚಂಡಮಾರುತ ಅಪ್ಪಳಿಸಿದ ಪರಣಾಮ ದೊಡ್ಡ ಅನಾಹುತವೇ ಸೃಷ್ಟಿಯಾಗಿದೆ ಫ್ಲೋರಿಡಾದ ಬಹುತೇಕ ಭಾಗ ಕತ್ತಲೆಯಲ್ಲಿ ಮುಳುಗಿದೆ.

ಇಯಾನ್ ಚಂಡಮಾರುತ ಪ್ರಾರಂಭವಾದಾಗಲೇ ಗಂಟೆಗೆ 240 ಕಿ.ಮೀ ವೇಗದಲ್ಲಿ ಗಾಳಿ ಬೀಸಲಾರಂಭಿಸಿದೆ. ಫ್ಲೋರಿಡಾ ಈ ಹಿಂದೆ ಹಲವು ವರ್ಷಗಳಿಂದ ಕಾಣದೇ ಇದ್ದ ಚಂಡಮಾರುತವನ್ನು ಈಗ ಅನುಭವಿಸುತ್ತಿದೆ. ಇದು ಇನ್ನೂ 2 ದಿನಗಳವರೆಗೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ನೂರಾರು ಮನೆಗಳು ಸೇರಿದಂತೆ ಹಲವರು ಈ ಚಂಡಮಾರುತಕ್ಕೆ ಬಲಿಯಾಗಿದ್ದಾರೆ. ಸಮುದ್ರಕ್ಕೆ ತೆರಳಿದ್ದ ದೋಣಿಯೊಂದು ಮುಳುಗಡೆಯಾಗಿದ್ದು, 20 ಜನರು ನಾಪತ್ತೆಯಾಗಿದ್ದಾರೆ. ಫ್ಲೋರಿಡಾದ ಕೀಸ್ ದ್ವೀಪದಲ್ಲಿ ನಾಲ್ವರು ಕ್ಯೂಬನ್ನರು ಈಜಿಕೊಂಡು ಬರುತ್ತಿದ್ದುದನ್ನು ಕಂಡು ಅವರಲ್ಲಿ ಮೂವರನ್ನು ಕರಾವಳಿಯ ಪಡೆ ರಕ್ಷಿಸಿದೆ ಎಂದು ವರದಿಯಾಗಿದೆ.

80,000 ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಫೋರ್ಟ್ ಮೈಯರ್ಸ್ ಪ್ರದೇಶದಲ್ಲಿ ಮಳೆ, ಗಾಳಿಗೆ ಪ್ರವಾಹದ ಸ್ಥಿತಿ ಉಂಟಾಗಿ ಪ್ರದೇಶ ಸರೋವರದಂತೆ ಗೋಚರವಾಗುತ್ತಿದೆ. ರಾಜ್ಯದ ನೈಋತ್ಯ ಭಾಗದಲ್ಲಿ ಹೆಚ್ಚಿನ ಹಾನಿಗಳು ಸಂಭವಿಸಿದ್ದು, ಅಲ್ಲಿನ 1 ಕೋಟಿ ಜನಸಂಖ್ಯೆಯಲ್ಲಿ ಸುಮಾರು 20 ಲಕ್ಷ ಜನರು ನಿನ್ನೆ ಸಂಜೆಯಿಂದ ವಿದ್ಯುತ್ ಇಲ್ಲದೇ ದಿನ ದೂಡುತ್ತಿದ್ದಾರೆ ಎನ್ನಲಾಗಿದೆ.

Share This Article
Leave a comment