January 8, 2025

Newsnap Kannada

The World at your finger tips!

WhatsApp Image 2022 05 28 at 2.26.45 PM

ಮನುಷ್ಯ ಸಾಮಾಜಿಕ ಜಾಲತಾಣದ ನಿಯಂತ್ರಣದಲ್ಲಿ ಇದ್ದಾನೆ : ಇಸ್ರೋ ಮಾಜಿ ಅಧ್ಯಕ್ಷ ವಿಷಾದ

Spread the love

ಜಾಲತಾಣಗಳ ನಿಯಂತ್ರಣದಲ್ಲಿ ಮನುಷ್ಯ ಸಿಲುಕಿದ್ದಾನೆ ಎಂದು ಖ್ಯಾತ ವಿಜ್ಞಾನಿ, ಇಸ್ರೋ ಮಾಜಿ ಅಧ್ಯಕ್ಷ ಡಾ.ಕಿರಣ್‍ಕುಮಾರ್ ಅಭಿಪ್ರಾಯಪಟ್ಟರು.

ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಯುವ ವೈಜ್ಞಾನಿಕ ಸಂಸತ್ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಕಿರಣ್ ಕುಮಾರ್ ತಂತ್ರಜ್ಞಾನ ಮತ್ತು ವಿಜ್ಞಾನ ಬೆಳವಣಿಗೆಯಲ್ಲಿ ಬಹಳಷ್ಟು ಉಪಯೋಗವಿದೆ. ಭಾರತ ವಿಜ್ಞಾನ ಕ್ಷೇತ್ರದಲ್ಲಿ ನಿಧಾನವಾಗಿ ಕೆಲಸ ಮಾಡಿದರೂ ಚಂದ್ರನ ಮೇಲೆ ನೀರಿನ ಅಂಶವಿರುವ ಬಗ್ಗೆ ಭಾರತದ ವಿಜ್ಞಾನಿಗಳು ಕಂಡು ಹಿಡಿದಿದಿರುವುದು ಮೆಚ್ಚುಗೆಯ ಸಂಗತಿ ಎಂದರು.

ವಿಜ್ಞಾನ ಸದ್ಬಳಕೆ ಆಗಬೇಕು :

ಕೋವಿಡ್ ಸಂದರ್ಭದಲ್ಲಿ ನಮ್ಮ ವಿಜ್ಞಾನದ ಕ್ಷಮತೆಯನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದೆ. ವಿಜ್ಞಾನವನ್ನು ಒಳ್ಳೆಯ ಮತ್ತು ಕೆಟ್ಟ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದ್ದು, ಆದರೆ ಒಳ್ಳೆಯ ಕೆಲಸಕ್ಕೆ ಮಾತ್ರ ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದೈನಂದಿನ ಜೀವನದ ಮೇಲೆ ವಿಜ್ಞಾನ ಉತ್ತಮವಾದ ಪರಿಣಾಮ ಬೀರುತ್ತಿದೆ. ವಿಜ್ಞಾನ ಪ್ರತಿಯೊಂದು ಕ್ಷೇತ್ರಕ್ಕೂ ಉಪಯೋಗಕಾರಿಯಾಗಿದೆ. ಆದ್ದರಿಂದ ಈ ಬಗ್ಗೆ ಅರಿವು ಅತ್ಯವಶ್ಯ ಎಂದು ನುಡಿದರು.

ಜಾಲತಾಣ ಮನಸ್ಸಿನ ಮೇಲೆ ಪರಿಣಾಮ :

ಮನುಷ್ಯನ ಮನಸ್ಸಿನ ಮೇಲೆ ಜಾಲತಾಣಗಳು ಪರಿಣಾಮ ಬೀರುತ್ತಿದೆ. ಮನುಷ್ಯನ ಮೇಲೆ ತನ್ನ ನಿಯಂತ್ರಣ ಸಾಗಿಸುತ್ತಿದೆ ಎಂದು ತಿಳಿಸಿದ ಅವರು, ಇಂದಿನಿ ಪ್ರಪಂಚದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅತಿ ವೇಗದಲ್ಲಿ ಬದಲಾವಣೆಯಾಗುತ್ತಿದೆ. ಆದ್ದರಿಂದ ಮನುಷ್ಯ ತನ್ನ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಕಂದಚಾರ , ಮೌಢ್ಯಚಾರದ ಬಗ್ಗೆ ಚಿಂತಿಸಬೇಕು. ತಮ್ಮ ಅರಿವನ್ನು ಹೆಚ್ಚಿಸಿಕೊಂಡು ಸುತ್ತಮುತ್ತಲಿನ ಜನರಿಗೆ ಉಪಕಾರವಾಗುವ ಕೆಲಸ ಮಾಡಬೇಕು ಎಂದರು.

ಇದನ್ನು ಓದಿ :ಮಂಡ್ಯ : ವಿಪತ್ತು ನಿರ್ವಹಣೆಗೆ ತುರ್ತು ಮುಂಜಾಗ್ರತಾ ಕ್ರಮ ಅಗತ್ಯ – ಜಿಲ್ಲಾಧಿಕಾರಿ ಎಸ್.ಅಶ್ವತಿ

ಕಾರ್ಯಕ್ರಮದಲ್ಲಿ ಚಲನಚಿತ್ರ ನಿದೇರ್ಶಕ ನಾಗತಿಹಳ್ಳಿಚಂದ್ರಶೇಖರ್, ಸುನಂದಜಯರಾಂ, ಯಮದೂರು ಸಿದ್ದರಾಜು, ಶಿವಲಿಂಗಯ್ಯ, ಲಂಕೇಶ್, ತೂಬಿನಕೆರೆ ಅಭಿ, ಗುರುಮೂರ್ತಿ ಸೇರಿದಂತೆ ಇತರರಿದ್ದರು.

Copyright © All rights reserved Newsnap | Newsever by AF themes.
error: Content is protected !!