ಮಂಡ್ಯ :ವಿಪತ್ತು ನಿರ್ವಹಣೆಗೆ ತುರ್ತು ಮುಂಜಾಗ್ರತಾ ಕ್ರಮ ಅಗತ್ಯ – ಜಿಲ್ಲಾಧಿಕಾರಿ ಎಸ್.ಅಶ್ವತಿ

Team Newsnap
2 Min Read

ಮಂಡ್ಯ ಜಿಲ್ಲೆಯಲ್ಲಿ ವಿಪತ್ತು ಸಂಭವಿಸಿದ ಸಂದರ್ಭಗಳಲ್ಲಿ ಹಾಗೂ ಪ್ರವಾಹ ಉಂಟಾದ ವೇಳೆಯಲ್ಲಿ ವಹಿಸಬೇಕಾಗಿರುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತದಿಂದ ಸಕಲ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ತಿಳಿಸಿದರು.

WhatsApp Image 2022 05 27 at 5.15.03 PM
Mandya DC

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ತಾಲ್ಲೂಕು ಆಡಳಿತ ಎನ್.ಡಿ.ಆರ್.ಎಫ್. ಅಗ್ನಿಶಾಮಕ ದಳ ಮತ್ತು ತುರ್ತು ಸೇವೆ ಇಲಾಖೆಗಳ ಸಹಯೋಗದೊಂದಿಗೆ ಪಾಂಡವಪುರ ಕೆರೆ ತೊಣ್ಣೂರಿನಲ್ಲಿ ನಡೆದ ವಿಪತ್ತು ನಿರ್ವಹಣೆ ಅಣಕು ಪ್ರದರ್ಶನ ಕಾರ್ಯಗಾರವನ್ನು ಉದ್ಘಾಟಿಸಿ ಡಿಸಿ ಅಶ್ವತಿ ಮಾತನಾಡಿದರು.

ಯಾವುದೇ ಬೆಂಕಿ ಅವಗಡ, ಪ್ರವಾಹದಂತಹ ಘಟನೆಗಳು ಘಟಿಸಿದಾಗ ಜಿಲ್ಲೆಯಲ್ಲಿ ಅಗ್ನಿ ಶಾಮಕ ದಳ ತುರ್ತಾಗಿ ಆಗಮಿಸಿ ಉತ್ತಮ ಕಾರ್ಯವನ್ನು ನಿರ್ವಹಿಸಿದ್ದಾರೆ. ಅಗ್ನಿ ಶಾಮಕ ದಳಕ್ಕೆ ಬೇಕಿರುವ ಉಪಕರಣಗಳನ್ನು ಜಿಲ್ಲಾಡಳಿತದಿಂದ ಸರಬರಾಜು ಮಾಡಲಾಗಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಪ್ರವಾಹ ಉಂಟಾಗುವ ಗ್ರಾಮಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಪ್ರಾಣಹಾನಿ, ಜಾನುವಾರು, ಆಸ್ತಿ ಸಂರಕ್ಷಣೆಯನ್ನು ಮಾಡಲು ಜಿಲ್ಲಾಡಳಿತ ಉತ್ತಮವಾಗಿ ನಿರ್ವಹಿಸಲುಸಿದ್ಧವಿದೆ ಎಂದರು.

ಇದನ್ನು ಓದಿ –ಕಾಶ್ಮೀರದಲ್ಲಿ ನದಿಗೆ ಉರುಳಿದ ಸೇನಾ ವಾಹನ – ಹುತಾತ್ಮರಾದ 7 ಮಂದಿ ಯೋಧರು : 19 ಮಂದಿಗೆ ಗಾಯ

ಜಿಲ್ಲೆಯ ವಿವಿಧ ತಾಲ್ಲೂಕಿನಲ್ಲಿ ಹೆಚ್ಚು ಮಳೆ ಬಂದರು ಸಹ ರಕ್ಷಣೆ ಮಾಡುವುದಕ್ಕೆ ಸಿದ್ಧರಾಗಿರಬೇಕು. ಸ್ಥಳೀಯವಾಗಿ ತುರ್ತು ಪರಿಸ್ಥಿತಿಯಲ್ಲಿ ಉಪಕರಣಗಳನ್ನು ಬಳಸಿ ಯಾವ ರೀತಿ ರಕ್ಷಣೆ ಮಾಡಬಹುದು ಎಂಬ ಮಾಹಿತಿ ಎನ್ ಡಿ ಆರ್ ಎಫ್ ಹಾಗೂ ಅಗ್ನಿ ಶಾಮಕ ದಳದವರು ಅಣುಕು ಪ್ರದರ್ಶನ ನೀಡಿದ್ದಾರೆ. ವಿಪತ್ತು ನಿರ್ವಹಣೆ ಕುರಿತು ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಹೆಚ್ಚು ಪ್ರಚಾರ ಮಾಡಬೇಕು ಎಂದರು.

WhatsApp Image 2022 05 27 at 5.15.02 PM

ವಿಪತ್ತುಗಳನ್ನು ಮೊದಲೇ ಗುರುತಿಸಿ ವಿಪತ್ತಿನಿಂದ ಉಂಟಾಗುವ ಹಾನಿಯನ್ನು ತಡೆಗಟ್ಟಲು ಬೇಕಿರುವ ಸಲಕರಣೆ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ವಿಪತ್ತಿನ ಸಂದರ್ಭದಲ್ಲಿ ಅಧಿಕಾರಿಗಳು ಮೊದಲು ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಎನ್ ಡಿ ಆರ್ ಎಫ್ ತಂಡದವರು ವಿವರಿಸಿದರು.

ಎನ್ ಡಿ ಆರ್ ಎಫ್ ಹಾಗೂ ಅಗ್ನಿ ಶಾಮಕ ದಳದವರು ನೀರಿನಲ್ಲಿ ಬಿದ್ದಂತಹ ವ್ಯಕ್ತಿಯನ್ನು ಪ್ರಾಣ ಹಾನಿಯಿಂದ ತಪ್ಪಿಸಲು ಪ್ರಥಮ ಹಂತದಲ್ಲಿ ಕೃತಕವಾಗಿ ಮನೆ ಬಳಕೆಯ ವಸ್ತುಗಳಾದ ನೀರಿನ ಬಾಟಲ್, ಒಣ ತೆಂಗಿನಕಾಯಿ, ಥರ್ಮಾಕೊಲ್, ಪ್ಲಾಸ್ಟಿಕ್ ಬಿಂದಿಗೆಗಳು ಇನ್ನಿತರ ವಸ್ತುಗಳನ್ನು ಬಳಸಿ ಆಪತ್ತಿನಿಂದ ಪಾರಾಗಬಹುದಾದ ವಿಧಾನಗಳನ್ನು ಪ್ರಾಯೋಗಿಕ ಪ್ರದರ್ಶನದ ಮೂಲಕ ತಿಳಿಸಿದರು.

mandya,dc,disaster management
Mandya: Disaster Management Emergency Prevention Needed – Ashwathi

ಇದೇ ವೇಳೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ. ಗುರುರಾಜ್ ರವರು ಮಾತನಾಡಿದರು

ಕಾರ್ಯಕ್ರಮದಲ್ಲಿ ಜಿಪಂ ಸಿಇಓ ಜಿ.ಆರ್.ಜೆ. ದಿವ್ಯಪ್ರಭು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್. ಯತೀಶ್, ಗೃಹ ರಕ್ಷಕ ದಳದ ಎನ್. ವೆಂಕಟೇಶ್, ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ ಶಿವಾನಂದಮೂರ್ತಿ, ಪಾಂಡವಪುರ ತಹಶಿಲ್ದಾರ್ ನಯನ, ಎನ್.ಡಿ.ಆರ್.ಎಫ್ ಇನ್ಸ್ಪೆಕ್ಟರ್ ವೇಲೂರು ರಮೇಶ್, ಎನ್.ಡಿ.ಆರ್.ಎಫ್ ಸಂಯೋಜಕ ವಿಜಯ್ ಕುಮಾರ್ , ಜಿ, ನೆಹರು ಯುವ ಕೇಂದ್ರದ ಬಸವರಾಜು ಉಪಸ್ಥಿತರಿದ್ದರು.

Share This Article
Leave a comment