ಜಗದ ಜಂಜದವ ಕೆಡವಿಕೊಂಡಿಹೆ
ನನ್ನ ತಡಿಯಲ್ಲಿ
ನಿನ್ನಂತಾಗುವುದು ಹೇಗೆ?
ಸಾವು ನೋವುಗಳಿಗೆ
ಸದಾ ತಲ್ಲಣಿಸುವುದೀ ಮನ
ನಿನ್ನಂತೆ ಗಾಢವಾಗಲಿ ಹೇಗೆ?
ಸಾವಿರ ಸಾಸಿವೆಯು ಚಟಪಟ
ಸಂಸಾರದಲಿ ತೇಲು ಮುಳುಗಿ ಅತ್ತು ನಕ್ಕು
ನಿನ್ನಂತೆ ಮೌನಿಯಾಗಲಿ ಹೇಗೆ?
ಹಾರುವ ಹಕ್ಕಿಗಳೆಲ್ಲ
ಕಟ್ಟುವುದು ಗೂಡ ನನ್ನಲ್ಲೇ
ನಿನ್ನಂತೆ ಧ್ಯಾನಿಸಲಿ ಹೇಗೆ?
ನೋಡದೆ ಕಾಡದೆ ಬೀಡುಬಿಡದೆ
ಚಣಮಾತ್ರ ಅವತರಿಸು ನನ್ನೊಳಗೆ
ಬೋಧೀವೃಕ್ಷದ ಬೀಜ ಮೊಳಕೆಯಾಗಲಿ..
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
- ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ
- ತಿರುಪತಿ ತಿಮ್ಮಪ್ಪನ ಚಿನ್ನ ಕದಿಯಲು ಹೋಗಿ ಸಿಕ್ಕಿಬಿದ್ದ ಟಿಟಿಡಿ ನೌಕರ
More Stories
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ