ಶುಗರ್ ಇರುವ ಸೋಂಕಿತರಿಗೆ ಡಿಸ್ಚಾರ್ಜ್​ಗೂ ಮೊದಲೇ ಬ್ಲಾಕ್ ಫಂಗಸ್ ಪರೀಕ್ಷೆ ಕಡ್ಡಾಯ

Team Newsnap
1 Min Read

ಶುಗರ್ ಇರುವ ಸೋಂಕಿತರಿಗೆ ಡಿಸ್ಚಾರ್ಜ್​ಗೂ ಮುನ್ನ ಬ್ಲಾಕ್ ಫಂಗಸ್ ಪರೀಕ್ಷೆ ಕಡ್ಡಾಯ ಮಾಡಿ ಸರ್ಕಾರ ಆದೇಶ ಮಾಡಲು ಸಿದ್ದತೆ ಮಾಡಿದೆ.‌

ಬುಧವಾರ ತಜ್ಞರ ಜೊತೆ ಚರ್ಚೆ ಮಾಡಿದ ಆರೋಗ್ಯ ಇಲಾಖೆ ಅಧಿಕಾರಿಗಳು ಬ್ಲಾಕ್ ಫಂಗಸ್ ಪತ್ತೆ ಮತ್ತು ಚಿಕಿತ್ಸಾ ವಿಧಾನಕ್ಕೆ ಮಾರ್ಗಸೂಚಿ ಸಿದ್ಧಪಡಿಸಿದೆ.

ಈ ಮಾರ್ಗಸೂಚಿಯನ್ನ ಸರ್ಕಾರ ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಮಾರ್ಗಸೂಚಿಯಲ್ಲಿ ಹಲವು ಸಂಗತಿಗಳನ್ನು ಪರಿಗಣಿಸಲಾಗಿದೆ.

ಮುಖ್ಯಾಂಶಗಳು:

  • ಕೊರೋನಾ ಚಿಕಿತ್ಸೆ ಪಡೆದ ರೋಗಿಗಳಿಗೆ ಮನೆಯಲ್ಲೇ ಕೌನ್ಸಲಿಂಗ್ ಮತ್ತು ನಿಗಾ ವಹಿಸುವುದು.
  • ಕೋವಿಡ್ ಸೋಂಕಿತರಿಗೆ ಮೊದಲ ವಾರ ಅನಗತ್ಯ ಸ್ಟಿರಾಯಿಡ್ ನೀಡಬಾರದು.
  • ಎರಡನೇ ವಾರ ಅಗತ್ಯವಿದ್ದರೆ ಮಾತ್ರ ಸ್ಟಿರಾಯಿಡ್ ನೀಡಬೇಕು.
  • ಶುಗರ್ ಇರುವವರಿಗೆ ಡಿಸ್ಚಾರ್ಜ್ ಮುಂಚೆ ಪರಿಶೀಲನೆ ಕಡ್ಡಾಯ.
  • ಇಎನ್​ಟಿ ವೈದ್ಯರಿಂದ ಪರಿಶೀಲನೆ ಹಾಗೂ ಅಗತ್ಯವಿದ್ದರೆ ಎಂಆರ್​ಐ ಮಾಡುವುದು.
  • ಡಿಸ್ಚಾರ್ಜ್ ಆದವರು 1 ವಾರದ ಬಳಿಕ ಪೋಸ್ಟ್ ಕೊವೀಡ್ ವಾರ್ಡ್​ನಲ್ಲಿ ಪರೀಕ್ಷೆಗೆ ಒಳಗಾಗುವುದು.
  • ಆಸ್ಪತ್ರೆಗೆ ಬರಲಾಗದೇ ಇರುವವರಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕವೇ ಪರೀಕ್ಷೆ ನಡೆಸುವುದು.
  • ಆಸ್ಪತ್ರೆಗೆ ಅಗತ್ಯವಿದ್ದರೆ ತಕ್ಷಣ ಶಿಫ್ಟ್ ಮಾಡಿ ಚಿಕಿತ್ಸೆ ನೀಡುವುದು.
Share This Article
Leave a comment