ನೊಯ್ಡಾದಲ್ಲಿ ಹನಿಟ್ರ್ಯಾಪ್‌ಗೆ ಡಿಆರ್‌ಡಿಓ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ದ ವಿಜ್ಞಾನಿಯೊಬ್ಬರು ಹನಿಟ್ರ್ಯಾಪ್‌ಗೆ ಸಿಲುಕಿ, ಪೋಲೀಸರು ಅವರನ್ನು ಓಯೋ ಹೋಟೆಲ್‌ನಲ್ಲಿ ರಕ್ಷಸಿದ ಘಟನೆ ನಡೆದಿದೆ.
ಡಿಆರ್‌ಡಿಓ ವಿಜ್ಞಾನಿಯು ನೊಯ್ಡಾದ ಸಿಟಿ ಸೆಂಟರ್‌ನಲ್ಲಿ ಕೆಲವು ವಸ್ತುಗಳನ್ನು ಖರೀದಿಸುವುದಿದೆ ಎಂದು ಮನೆಯವರಿಗೆ ಹೇಳಿ ಶನಿವಾರ ಸಂಜೆ 5:30 ಕ್ಕೆ ಮನೆಯಿಂದ ತೆರಳಿದ್ದರು.
ತಡರಾತ್ರಿಯಾದರೂ ಅವರು ಮನೆಗೆ ಬಂದಿರಲಿಲ್ಲ. ಆಗ ಅಜ್ಞಾತ ವ್ಯಕ್ತಿಯೊಬ್ಬರು ವಿಜ್ಞಾನಿಯ ಮನೆಗೆ ಕರೆ ಮಾಡಿ 10 ಲಕ್ಷ ನೀಡಿದರೆ ವಿಜ್ಞಾನಿಯನ್ನು ಬಿಡುವುದಾಗಿ ಬೆದರಿಕೆ ಹಾಕಿದ್ದರು. ಗಾಬರಿಗೊಂಡ ಕುಟುಂಬಸ್ಥರು ಪೋಲಿಸ್‌ರಿಗೆ ಭಾನುವಾರ ಬೆಳಿಗ್ಗೆ ದೂರು ನೀಡಿದ್ದರು.
ತಕ್ಷಣವೇ ತನಿಖೆ ಕೈಗೊಂಡ ಪೋಲೀಸರು ನೊಯ್ಡಾದ 41 ನೇ ಸೆಕ್ಟರ್‌ನಲ್ಲಿರುವ ಓಯೋ ಹೋಟಲ್‌ನಲ್ಲಿ ವಿಜ್ಞಾನಿ ಸೆರೆಯಾಗಿರುವುದು ತಿಳಿದು ಬಂದಿದೆ.
ಹೋಟೆಲ್ ರೂಮ್ ಮೇಲೆ ದಾಳಿ ಮಾಡಿ ವಿಜ್ಞಾನಿಯನ್ನು ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಹೆಣ್ಣುಮಗಳು ಸೇರಿ ಮೂವರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಹೆಚ್ಚುವರಿ ಪೋಲೀಸ್ ಕಮೀಷನರ್ ರಣವಿಜಯ ಸಿಂಗ್ ‘ಆನ್‌ಲೈನ್‌ನಲ್ಲಿ ಸ್ಪಾ ಒಂದರ ಸಂಪರ್ಕ ಸಂಖ್ಯೆ ಪಡೆದುಕೊಂಡ ವಿಜ್ಞಾನಿ ಸ್ಪಾ ದವರಿಗೆ ಕರೆ ಮಾಡಿದ್ದಾರೆ. ಅತ್ತಕಡೆಯ ವ್ಯಕ್ತಿ ತನ್ನನ್ನು ಅನಿಲ್‌ಕುಮಾರ್ ಎಂದು ಪರಿಚಯಿಸಿಕೊಂಡು ಶನಿವಾರ ಸಂಜೆ 5:30ಕ್ಕೆ ನೊಯ್ಡಾ ಸೆಂಟರ್‌ಗೆ ಬರಲು ಹೇಳಿದ್ದಾರೆ. ನೊಯ್ಡಾದ 77ನೇ ಸೆಕ್ಟರ್‌ನಲ್ಲಿರುವ ಇವರ ಮನೆಯಿಂದ ನೊಯ್ಡಾ ಸಿಟಿ ಸೆಂಟರ್‌ಗೆ ಹೋದಾಗ ಅನಿಲ್ ಕುಮಾರ್ ಅವರು ವಿಜ್ಞಾನಿಯನ್ನು ಇನ್ನೊಂದು ಕಡೆಗೆ ಬೇರೆಯವರ ಕಾರ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ. ನಂತರ ರಾತ್ರಿ ವಿಜ್ಞಾನಿ ಕುಟುಂಬದವರಿಗೆ ಕರೆ ಮಾಡಿ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಆಗ ಮನೆಯವರು ನಮಗೆ ದೂರು ನೀಡಿದಾಗ ನಾವು ವಿಜ್ಞಾನಿಯವರನ್ನು ರಕ್ಷಣೆ ಮಾಡಿದೆವು’ ಎಂದು ತನಿಖೆಯನ್ನು ಸಾದ್ಯಂತವಾಗಿ ವಿವರಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಕ್ ಕುಮಾರ್, ಸುನಿತಾ ಗುರ್ಜಾರ್ ಹಾಗೂ ರಾಕೇಶ್ ಕುಮಾರ್ ಎಂಬುವವರನ್ನು ಬಂಧಿಸಿದ್ದಾರೆ. ಇನ್ನು ಇಬ್ಬರು ದುಷ್ಕರ್ಮಿಗಳು ತಪ್ಪಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಬಂಧಿತಳಾದ ಮಹಿಳೆಯು ನೊಯ್ಡಾದ ಬಿಗ್ ಬಾಸ್ ನ ಮಾಜೊ ಸ್ಪರ್ಧಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಓಯೋ ರೂಮ್ಸ್ ಕುನಾಲ್ ರೆಸಿಡೆನ್ಸಿಯೊಂದಿಗಿನ ಒಪ್ಪಂದವನ್ನು ಮುರಿಯಲಾಗುವುದು ಎಂದು ತಿಳಿಸಿದೆ.
More Stories
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ
ವಿರೋಧ ಲೆಕ್ಕಿಸದ ಮೋದಿ ಸರ್ಕಾರ
ಒಂದು ದೇಶ, ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಮಂಡನೆ