ದೇಶದಲ್ಲಿ‌ ನಡೆಯಬೇಕಿರುವ ಚುಣಾವಣೆಗಳಿಗೆ ಮುಹೂರ್ತ ಫಿಕ್ಸ್

Team Newsnap
2 Min Read

ರಾಜ್ಯದ ರಾಜರಾಜೇಶ್ವರಿ ನಗರ, ಸಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಕೇಂದ್ರ
ಚುನಾವಣಾ ಆಯೋಗ ದಿನಾಂಕ ಫಿಕ್ಸ್ ಮಾಡಿದೆ.ನವೆಂಬರ್ 3 ರಂದು ಮತದಾನಕ್ಕೆ ಮುಹೂರ್ತ ನಿಗದಿಯಾಗಿದೆ‌‌. ನವೆಂಬರ್ 10 ರಂದುಫಲಿತಾಂಶ ಪ್ರಕಟವಾಗಲಿದೆ.ಕರ್ನಾಟಕದ ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಮುಂದಿನ ತಿಂಗಳ 28 ರಂದು ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

ನವೆಂಬರ್ 2 ರಂದು ಮತ ಎಣಿಕೆ ನಡೆಯಲಿದೆ. ಅಕ್ಟೋಬರ್ 1ರಂದು ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಚುಣಾವಣಾ ಆಯೋಗ ಹೇಳಿದೆ.ಈಗಾಗಲೇ ವಿಧಾನಸಭೆಯಿಂದ ತೆರವಾಗಿರುವ ಮಸ್ಕಿ ಮತ್ತು ಬಸವ ಕಲ್ಯಾಣ ಕ್ಷೇತ್ರಗಳಿಗೂ ಸಹ ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗಲಿವೆ.

ಆಗ್ನೆಯ ಪದವೀಧರ, ಈಶಾನ್ಯ ಶಿಕ್ಷಕರ ಕ್ಷೇತ್ರ, ಬೆಂಗಳೂರು ಶಿಕ್ಷಕರ ಹಾಗೂ ಪಶ್ಚಿಮ ಪದವೀಧರ ಕ್ಷೇತ್ರಗಳಿಗೆ ಆಯೋಗ ಚುನಾವಣೆ ನಡೆಸಲಿದೆ. ಈ ನಾಲ್ಕು ಕ್ಷೇತ್ರಗಳಲ್ಲಿ ಆರ್.ಚೌಡರೆಡ್ಡಿ, ಎಸ್.ವಿ. ಸಂಕನೂರ, ಶರಣಪ್ಪ ಮಟ್ಟೂರ ಹಾಗೂ ಪುಟ್ಟಣ್ಣ ಸದಸ್ಯರಾಗಿದ್ದರು.

ಇತರ ರಾಜ್ಯ ಗಳ ಉಪ ಚುನಾವಣೆ:

ಬಿಹಾರದ ಒಂದು ಲೋಕಸಭಾ ಕ್ಷೇತ್ರ, ಮಣಿಪುರದ 2 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 7 ರಂದು ಉಪ ಚುನಾವಣೆ ನಿಗದಿಯಾಗಿದೆ.ರಾಜ್ಯದ 2 ಕ್ಷೇತ್ರಗಳು ಸೇರಿದಂತೆ ದೇಶದ ಒಟ್ಟು 54 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 9 ರಂದು ಅಧಿಸೂಚನೆ ಹೊರಡಿಸಲಾಗುತ್ತಿದೆ. ನಾಮಪತ್ರ ಸಲ್ಲಿಸಲು 16 ಕೊನೆಯ ದಿನಾಂಕವಾಗಿದೆ. ಮರು ದಿನ ಉಮೇದುವಾರಿಕೆ ಪರಿಶೀಲನೆ ನಡೆಯಲಿದೆ. 19ರಂದು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿದೆ.

ಬಿಹಾರದ ಒಂದು ಲೋಕಸಭೆ, ಮಣಿಪುರದ ಎರಡುವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 13 ರಂದು ಅಧಿಸೂಚನೆ ಹೊರಡಿಸಲಾಗುತ್ತಿದೆ. ಉಮೇದುವಾರಿಕೆ ಸಲ್ಲಿಸಲು 20ಕೊನೆಯ ದಿನಾಂಕ. ಅಕ್ಟೋಬರ್ 21 ರಂದು ಪರಿಶೀಲನೆ ದಿನಾಂಕವಾದರೆ, ಅಕ್ಟೋಬರ್ 23 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ನವೆಂಬರ್ 7 ರಂದು ಮತದಾನ ದಿನ. ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

ಮಧ್ಯ ಪ್ರದೇಶದಲ್ಲಿ ಅತಿ ಹೆಚ್ಚು 28, ಗುಜರಾತ್ 8,ಜಾರ್ಖಂಡ್ 2, ಚತ್ತೀಸ್‌ಗಢ, ಹರಿಯಾಣ, ತೆಲಂಗಾಣದಿಂದ
ತಲಾ 1, ಮಣಿಪುರ, ನಾಗಾಲ್ಯಾಂಡ್, ಒಡಿಶಾದಿಂದತಲಾ 2, ಮತ್ತು ಉತ್ತರ ಪ್ರದೇಶದ 7 ವಿಧಾನಸಭಾ
ಕ್ಷೇತ್ರಗಳಲ್ಲೂ ಉಪ ಚುನಾವಣೆ ನಡೆಯಲಿದೆ.

ರಾಜರಾಜೇಶ್ವರಿ ನಗರ,ಮಸ್ಕಿ ಕ್ಷೇತ್ರಗಳ ಶಾಸಕರರಾಜೀನಾಮೆಯಿಂದ ತೆರವಾಗಿದ್ದರೂ ನ್ಯಾಯಾಲಯದಲ್ಲಿ ಪ್ರಕರಣಗಳ ಇತ್ಯರ್ಥವಾಗಿರಲಿಲ್ಲ. ಹಾಗಾಗಿ ಉಪಚುನಾವಣೆ ನಡೆಸಿರಲಿಲ್ಲ. ಈಗ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಮಾಡಿದ್ದರೂ ಮಸ್ಕಿ ಹಾಗೂಬಸವ ಕಲ್ಯಾಣ ಕ್ಷೇತ್ರಗಳಿಗೆ ಮುಂದಿನ ದಿನಗಳಲ್ಲಿ ಚುನಾವಣೆ ಘೋಷಣೆ ಮಾಡಬಹುದು.ಕೋವಿಡ್‌ನಿಂದ ಶಿರಾ ಮತ್ತು ಬಸವ ಕಲ್ಯಾಣ ಶಾಸಕಸತ್ಯನಾರಾಯಣ್ ಮೃತಪಟ್ಟಿದ್ದಾರೆ. ಇನ್ನೂ ಎರಡು ವಿಧಾನ ಸಭಾ ಕ್ಷೇತ್ರ ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸುವ ಅನಿವಾರ್ಯತೆ ಚುಣಾವಣಾ ಆಯೋಗಕ್ಕಿದೆ.

ಕೊರೋನಾ ನಿಮಿತ್ತ ಸಕಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಚುನಾವಣೆ ಜರುಗಿಸಲು ಆಯೋಗವು ಅಗತ್ಯ ಮಾರ್ಗಸೂಚಿಗಳನ್ನು ನೀಡಿದೆ. ಜನವರಿ 2020ರ ಮತದಾರರ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳುವುದು ಮತ್ತು ವಿವಿಪ್ಯಾಟ್ ಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಹಾಗೂ ಚುನಾವಣೆ ನಡೆಸಲು ಅಗತ್ಯವಾದಷ್ಟು ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಶೇಖರಿಸಿಕೊಳ್ಳಲು ಆಯೋಗ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದೆ.

Share This Article
Leave a comment