October 7, 2022

Newsnap Kannada

The World at your finger tips!

bike,mandya,fire

Honda activa on fire : 2 people sustained serious injuries while moving ಚಲಿಸುತ್ತಿರುವಾಗಲೇ ಹೊತ್ತಿ ಉರಿದ ಹೊಂಡಾ ಬೈಕ್ ಇಬ್ಬರಿಗೆ ಗಂಭೀರ ಗಾಯ

ಚಲಿಸುತ್ತಿರುವಾಗಲೇ ಹೊತ್ತಿ ಉರಿದ ಹೊಂಡಾ ಬೈಕ್ ಇಬ್ಬರಿಗೆ ಗಂಭೀರ ಗಾಯ

Spread the love

ಚಲಿಸುತ್ತಿರುವಾಗಲೇ ಏಕಾಏಕಿ ದ್ವಿಚಕ್ರ ವಾಹನ ಹೊತ್ತಿ ಉರಿದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಬಳಿ ರಸ್ತೆಯಲ್ಲಿ ಶುಕ್ರವಾರ ಜರುಗಿದೆ

ಈ ಘಟನೆಯಲ್ಲಿ ಸುಟ್ಟ ಗಾಯದಿಂದ ನರಳುತ್ತಿದ್ದ ಮೈಸೂರಿನ ಶಿವರಾಮಯ್ಯ ಮತ್ತು ಅನಂತರಾಮು ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.ಇದನ್ನು ಓದಿ –ಭೂಕಂಪದಿಂದ ತತ್ತರಿಸಿರುವ ಅಫ್ಘಾನಿಸ್ತಾನಕ್ಕೆ -ಭಾರತದ ನೆರವು – ಧನ್ಯವಾದ ತಿಳಿಸಿದ ತಾಲಿಬಾನ್‌

ಮಾಮೂಲಿಯಂತೆ ರಸ್ತೆಯ ಮೇಲೆ ಹೊಂಡಾ ಬೈಕ್​ ಸವಾರರಿಬ್ಬರು ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು, ಏಕಾಏಕಿ ಬೆಂಕಿ ಹೊತ್ತಿ ಉರಿದಿದೆ. ವಾಹನದಿಂದ ಇಳಿಯಲು ಅವಕಾಶ ಕೊಡದಂತೆ ಪೂರ್ತಿ ಬೆಂಕಿ ಆವರಿಸಿಕೊಂಡಿದೆ. ಇದರಿಂದ ಅಲ್ಲೇ ಸಿಲುಕಿ ನರಳುತ್ತಿದ್ದರು. ಸ್ಥಳೀಯರು ಓಡೋಡಿ ಬಂದು ಬೆಂಕಿಯಲ್ಲಿ ನರಳಾಡುತ್ತಿದ್ದ ಇಬ್ಬರನ್ನು ರಕ್ಷಿಸಿದರು ಗಂಭೀರ ಸ್ಥಿತಿಯಲ್ಲಿರುವ ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

error: Content is protected !!