ಹಿಂದುತ್ವ ರಾಜಕೀಯವಾಗಿದೆ: ಹಿಂದುತ್ವ, ಹಿಂದೂ ಧಮ೯ ಒಂದೇ ಅಲ್ಲ – ನಟಿ ರಮ್ಯಾ

Newsnap Team
1 Min Read

ಹಿಂದುತ್ವ ಮತ್ತು ಹಿಂದೂ ಧಮ೯ ಎರಡೂ ಒಂದೇ ಅಲ್ಲ ಎಂದು ನಟಿ , ಮಾಜಿ ಸಂಸದೆ ರಮ್ಯಾ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿದ್ದಾರೆ.

ಹಿಂದುತ್ವ ಮತ್ತು ಹಿಂದೂಯಿಸಂ ಎರಡೂ ಒಂದೇ ಅಲ್ಲ. ಹಿಂದೂಯಿಸಂ ಎಂಬುದು ರಾಜಕೀಯವಲ್ಲ. ಆದರೆ ಹಿಂದುತ್ವ ಎಂಬುದು ರಾಜಕೀಯವಾಗಿದೆ ಎಂದು ರಮ್ಯಾಹೇಳಿದ್ದಾರೆ

ಹಿಂದೂಯಿಸಂ ಎಂದರೆ ಎಲ್ಲರನ್ನೂ ಒಳಗೊಳ್ಳುವಂತದ್ದು ಮತ್ತು ಎಲ್ಲರಿಗೂ ಪ್ರೀತಿ ಹಂಚುವಂತದ್ದು. ಅದಕ್ಕೆ ವಿರುದ್ಧವಾದ್ದದ್ದೇ ಹಿಂದುತ್ವ. ನಿಜವಾದ ಹಿಂದುಗಳಿಗೆ ವ್ಯತ್ಯಾಸ ತಿಳಿಯುತ್ತದೆ ಎಂದು ರಮ್ಯಾ ಕುಟುಕಿದ್ದಾರೆ

ನಮ್ಮ ಪುರಾತನ ಹಿಂದೂ ಧರ್ಮವು ರಾಜಕಾರಣಿಗಳಿಂದ ಒಂದು ರಾಜಕೀಯ ಸಾಧನವಾಗಿ ಬಳಕೆ ಆಗುತ್ತಿರುವುದನ್ನು ನೋಡಲು ನೋವಾಗುತ್ತದೆ. ನಾನು ಹಿಂದೂ ಅಷ್ಟೇ. ಯಾವ ಪಕ್ಷ ಕೂಡ ನನ್ನ ಹಿಂದೂಯಿಸಂ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ರಮ್ಯಾ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

2 ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾಂಗ್ರೆಸ್ ಪಕ್ಷದ ಡಿಜಿಟಲ್ ಅಭಿಯಾನವಾದ ಜನ್ ಜಾಗರಣ ಅಭಿಯಾನದ (
ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಹಿಂದೂ ಧರ್ಮ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸವೇನು? ಅವು ಒಂದೇ ಆಗಿರಬಹುದೇ? ಒಂದೇ ಆಗಿದ್ದರೆ, ಏಕೆ ಒಂದೇ ಹೆಸರಿಲ್ಲ? ವಿಭಿನ್ನ ವಿಷಯಗಳಾಗಿವೆ ಎಂದು ಹೇಳಿದ್ದರು. ಇದೇ ವಿಚಾರವಾಗಿ ರಮ್ಯಾ ಕೂಡಾ ಮಾತನಾಡಿದ್ದಾರೆ.

Share This Article
Leave a comment