ಮಂಡ್ಯ ಜಿಲ್ಲೆಯಲ್ಲಿ ಭಾರಿ ಮಳೆ : ರಸ್ತೆ ಕುಸಿತ – ತಪ್ಪಿದ ಹನಾಹುತ : ಲಕ್ಷಾಂತರ ರು ಬೆಳೆ ಹಾನಿ

Newsnap Team
1 Min Read

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹುಣಸನಹಳ್ಳಿ ಹೆಚ್.ಬಳ್ಳೇಕೆರೆ ಗ್ರಾಮದ ಸಮೀಪ
ವಾಹನ ಸಂಚರಿಸುತ್ತಿದ್ದ ವೇಳೆ ರಸ್ತೆ ಕುಸಿದ ಪರಿಣಾಮ ಕಾರೊಂದು ಸಿಲುಕಿಕೊಂಡ ಘಟನೆ ಜರುಗಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿನ್ನೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. ರಸ್ತೆಯ ಅಕ್ಕಪಕ್ಕದ ಜಮೀನಿಗೆ ನೀರು ನುಗ್ಗಿತ್ತು. ಇದರ ಪರಿಣಾಮ ರಸ್ತೆ ಕೊಚ್ಚಿಕೊಂಡು ಹೋಗಿದೆ.

ಭಾರಿ ಮಳೆ ಹಿನ್ನೆಯಲ್ಲಿ ರೈತರ ಜಮೀನುಗಳಿಗೆ ನೀರು ನುಗ್ಗಿದೆ. ಶ್ರೀರಂಗಪಟ್ಟಣ ತಾಲೂಕಿನ ಬಲ್ಲೇನಹಳ್ಳಿ, ಚಿಂದಗಿರಿಕೊಪ್ಪಲು ಸುತ್ತಮುತ್ತ ಗ್ರಾಮಗಳ ಜಮೀನು ಜಲಾವೃತ ಆಗಿವೆ.

ಹಟ್ಟೆ ಹಳ್ಳ ಹರಿಯುವ ವ್ಯಾಪ್ತಿಯ ಜಮೀನುಗಳು ಜಲಾವೃತ ಆಗಿವೆ.
ರಾತ್ರಿ 10 ಗಂಟೆಗೆ ಶುರುವಾದ ಮಳೆ ಬೆಳಗ್ಗೆವರೆಗೂ ಸುರಿದಿದೆ. ಹಳ್ಳ ತುಂಬಿ ಜಮೀನಿಗೆ ಮಳೆ ನೀರು ನುಗ್ಗಿದೆ. ಇದರಿಂದಾಗಿ ಕಬ್ಬು, ಭತ್ತ, ತೆಂಗು, ಅಡಕೆ ಸೇರಿದಂತೆ ಇತರೆ ಬೆಳೆ ಜಲಾವೃತ ಆಗಿವೆ. ರಾತ್ರಿ ಮಳೆಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ ಆಗಿದೆ.

Share This Article
Leave a comment